ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಕಿಲಾಡಿ ಅಕ್ಷಯ್ ಕುಮಾರ್ ನೇರಾನೇರ ಸವಾಲು..?

2022.. ಸೆಪ್ಟೆಂಬರ್ 30.. ಕನ್ನಡದ ಕಾಂತಾರ ಚಿತ್ರ ಕಂಡು ಚಿತ್ರರಂಗ ಬೆಚ್ಚಿ ಬಿದ್ದಿತ್ತು. ಭಾರತದೆಲ್ಲೆಡೆ ಕಾಂತಾರ ಮೆರವಣಿಗೆ ನಡೆದಿತ್ತು. ಚಿತ್ರಕ್ಕೆ ಹಣ ಹೂಡಿದ್ದ ಹೊಂಬಾಳೆ ಸಂಸ್ಥೆ ಮತ್ತು ರಿಷಬ್ ಶೆಟ್ಟಿಯೇ ಈ ಅದ್ಭುತ .. ಅತ್ಯಮೋಘ.. ಅದ್ವೀತಿಯ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಹೊಸದೊಂದು ಇತಿಹಾಸವನ್ನು ಬರೆದ ಈ ಕಾಂತಾರ ಚಿತ್ರದ ಕಲರವ ಈಗ ಮತ್ತೆ ಶುರುವಾಗಿದೆ.

ಚಿತ್ರದ ಮೊದಲ ಭಾಗ { ಪ್ರಿಕ್ವೆಲ್ } ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈ ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಪ್ರಯುಕ್ತ ಕೇವಲ ಕನ್ನಡ .. ಹಿಂದಿ ಮಾತ್ರವಲ್ಲ ಇಂಗ್ಲೀಷ್ .. ಬೆಂಗಾಲಿ ಸೇರಿ 7 ಭಾಷೆಗಳಲ್ಲಿ ಕಾಂತಾರ ಬೆಳ್ಳಿ ಪರದೆಯಲ್ಲಿ ಧಗಧಗಿಸಲಿದೆ.

Epic October 2nd Clash Akshay Kumar s Jolly LLB 3 Battles Rishab Shetty s Kantara Chapter 1

ಮೊನ್ನೆಯಷ್ಟೇ ಬಿಡುಗಡೆಯಾದ ಪೋಸ್ಟರ್ ಈಗಾಗಲೇ ಚರ್ಚೆಗೆ ಮುನ್ನುಡಿಯನ್ನು ಬರೆದಿದ್ದು ಕನ್ನಡ ಚಿತ್ರರಂಗದ ಈ ದಂತಕಥೆ ಹೊಸದೊಂದು ಇತಿಹಾಸ ಬರೆಯುವುದು ಪಕ್ಕಾ ಎನ್ನುವ ಮಾತು ಕೇಳಿ ಬರುತ್ತಿದೆ.

ಆದರೆ.. ಇದರ ನಡುವೆ ಇದೀಗ ಈ ಚಿತ್ರಕ್ಕೆ ಅಡ್ಡಗಾಲು ಹಾಕುವ ಪ್ರಯತ್ನಗಳು ಶುರುವಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ಒಂದು ಪುರಾವೆ ಎಂಬಂತೆ ಮೊನ್ನೆಯವರೆಗೆ ಅಕ್ಟೋಬರ್‌ 2 ಕಾಂತಾರ ಚಿತ್ರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಅದೇ ದಿನದಂದು ಚಿತ್ರಮಂದಿರಗಳಲ್ಲಿ ಪಾಲು ಕೇಳಲು ಅಕ್ಷಯ್ ಕುಮಾರ್ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ.

ಹೌದು, ಅಸಲಿಗೆ ಅಕ್ಷಯ್ ಕುಮಾರ್ ಜಾಲಿ ಎಲ್‌ಎಲ್‌ಬಿ 3 ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಭರ್ಜರಿ ಗೆಲುವನ್ನು ಕಂಡ ಜಾಲಿ ಎಲ್‌.ಎಲ್‌.ಬಿಯ ಮೂರನೇ ಭಾಗ ಇದು.

ಮೊದಲ ಭಾಗದಲ್ಲಿ ಜಾಲಿಯಾಗಿ ಮಿಂಚಿದ್ದ ಅರ್ಷದ್ ವಾರ್ಸಿ ಕೂಡ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಬ್ಬರು ಜಾಲಿಗಳನ್ನೊಂದಿರುವ ಸುಭಾಶ್ ಕಪೂರ್ ನಿರ್ದೇಶನದ ಈ ಚಿತ್ರದ ಮೇಲೆ ಬಾಲಿವುಡ್‌ಗೆ ಅಪಾರವಾದ ನಿರೀಕ್ಷೆ ಇದೆ.

epic-october-2nd-clash-akshay-kumars-jolly-llb-3-battles-rishab-shettys-kantara-chapter-1

ಹೀಗಿರುವಾಗ ಇದೀಗ ಸೆಪ್ಟೆಂಬರ್ 19ರಂದು ಬಿಡುಗಡೆಯಾಗಬೇಕಿದ್ದ ಜಾಲಿ ಎಲ್‌ಎಲ್‌ಬಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದ್ದು ಚಿತ್ರವನ್ನು ಅಕ್ಟೋಬರ್ 2ರಂದು ಅಂದರೆ ಕಾಂತಾರ ಚಿತ್ರದ ಎದುರು ಬಿಡುಗಡೆಯನ್ನು ಮಾಡಲಾಗುತ್ತಿದೆ ಎಂದು ಬಾಲಿವುಡ್‌ ಹಂಗಾಮಾ ವರದಿಯನ್ನು ಮಾಡಿದೆ.

ಇನ್ನು ಬಿಡುಗಡೆಯ ವಿಚಾರದಲ್ಲಿ ಮೊನ್ನೆಯಷ್ಟೇ ಕಾಂತಾರ ಚಿತ್ರತಂಡ ಮತ್ತೊಮ್ಮೆ ಸ್ಪಷ್ಟಪಡಿಸಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದರೂ ಕೂಡ ಬಾಲಿವುಡ್‌ ಹಂಗಾಮಾ ಪ್ರಕಾರ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆಯಾಗುವುದು ಬಹುತೇಕ ಅನುಮಾನ.

ಹಾಗೊಂದು ವೇಳೆ ಬಿಡುಗಡೆಯಾದರೂ ಕೂಡ ಜಾಲಿ ಎಲ್‌ಎಲ್‌ಬಿ 3 ಚಿತ್ರದ ಮೇಲೆ ಹೆಚ್ಚಿನ ಪರಿಣಾಮ ಆಗುವುದಿಲ್ಲ ಎನ್ನುವ ವಿಶ್ವಾಸವನ್ನು ಈ ಬಾಲಿವುಡ್‌ ಹಂಗಾಮಾದ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ. ಯಾಕೆಂದರೆ ಜಾಲಿ ಎಲ್‌ಎಲ್‌ಬಿ ಚಿತ್ರಕ್ಕೆ ಹಣವನ್ನು ಅಳೆದು ತೂಗಿ ಸುರಿಯಲಾಗಿದೆ. ಮತ್ತೊಂದು ಕಡೆ ಕಾಂತಾರ ಚಿತ್ರಕ್ಕೆ ಕೋಟ್ಯಂತರ ಹಣ ಖರ್ಚಾಗಿದೆ. ಇನ್ನು ಜಾಲಿ ಎಲ್‌ಎಲ್‌ಬಿ ಕಥೆಯನ್ನು ಇಷ್ಟ ಪಡುವ ವರ್ಗ ಕೂಡ ಇದೆ. ಹೀಗಾಗಿ ಗಾಂಧಿಜಯಂತಿ ವಾರದಲ್ಲಿ ಜಾಲಿ ಮುಂದೆ ಹೌಸ್‌ಫುಲ್ ಬೋರ್ಡ್ ಬಿದ್ದರೆ ಸಾಕು ಹಾಕಿದ ಹಣ ನಿರ್ಮಾಪಕರಿಗೆ ಮರಳಿ ಬಂದಂತೆಯೇ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ನಲ್ಲಿ ಸದ್ಯ ಕಾಂತಾರ ಚಿತ್ರದ ಎದುರು ಜಾಲಿ ಎಲ್‌ಎಲ್‌ಬಿ 3 ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಸದ್ಯ ಕೇಳೀ ಬರುತ್ತಿದೆ. ಈ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲಿಯೇ ಹೊರ ಬೀಳುವ ಸಾಧ್ಯತೆ ಇದೆ.

More from Filmibeat

English summary
Get ready for the ultimate box office showdown on October 2, 2025! Akshay Kumar & Arshad Warsi's Jolly LLB 3 set to clash with Rishab Shetty's highly anticipated Kantara Chapter 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X