»   » 'ಲೋಡೆಡ್ ಗನ್' ಹಿಡಿದು ನಗಿಸಲಿದ್ದಾರೆ ಸಂಗೀತಾ ಭಟ್

'ಲೋಡೆಡ್ ಗನ್' ಹಿಡಿದು ನಗಿಸಲಿದ್ದಾರೆ ಸಂಗೀತಾ ಭಟ್

Posted By:
Subscribe to Filmibeat Kannada

ನಟ ಧನಂಜಯ್ ಅಭನಯದ 'ಎರಡನೇ ಸಲ' ಸಿನಿಮಾದಲ್ಲಿ ಸಖತ್ ಬೋಲ್ಡ್ ಪಾತ್ರದಿಂದ ಸಿನಿ ರಸಿಕರ ಮನಗೆದ್ದಿದ್ದ ನಟಿ ಸಂಗೀತಾ ಭಟ್ ಈಗ 'ಲೋಡೆಡ್ ಗನ್' ಹಿಡಿದಿದ್ದಾರೆ.

'Eradane Sala' Sangeetha bhatt started shooting for 'Loaded Gun' movie

ಏನು? 'ಲೋಡೆಡ್ ಗನ್ನಾ.. ! ಎಂದು ಬಾಯಿ ಮೇಲೆ ಬೆರಳು ಇಟ್ಟು ತಲೆಗೆ ಹುಳ ಎಲ್ಲಾ ಬಿಟ್ಕೋಬೇಡಿ. ಯಾಕಂದ್ರೆ 'ಲೋಡೆಡ್ ಗನ್' ಎಂಬುದು ಸಂಗೀತಾ ಭಟ್ ನಟಿಸಲಿರುವ ಹೊಸ ಸಿನಿಮಾ ಹೆಸರು. ಹೌದು, 'ದಯವಿಟ್ಟು ಗಮನಿಸಿ' ಮತ್ತು 'ಕಿಸ್ಮತ್' ಚಿತ್ರಗಳ ಬಿಡುಗಡೆ ನಿರೀಕ್ಷೆಯಲ್ಲಿರುವ ಸಂಗೀತಾ ಭಟ್ ಈಗ 'ಲೋಡೆಡ್ ಗನ್' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

'Eradane Sala' Sangeetha bhatt started shooting for 'Loaded Gun' movie 1

ಅಂದಹಾಗೆ 'ಲೋಡೆಡ್ ಗನ್' ಚಿತ್ರವನ್ನು ತೆಲುಗು ಮೂಲದ ಶಂಕರ್ ನಾರಾಯಣ್ ರೆಡ್ಡಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತಾ ಭಟ್ ಜೊತೆಗೆ ನವ ನಟ ಪ್ರತಾಪ್ ಪವನ್ ಎಂಬುವವರು ನಾಯಕನಾಗಿ ಬಣ್ಣಹಚ್ಚಿದ್ದಾರೆ.

'ಲೋಡೆಡ್ ಗನ್' ಅಂದ ತಕ್ಷಣ ಎಲ್ಲರಿಗೂ ಕ್ರೈಮ್ ಆಧಾರಿತ ಸಿನಿಮಾ ಎಂಬ ಫೀಲ್ ಆಗಬಹುದು. ಆದರೆ ಇದು ಪಕ್ಕಾ ಕಾಮಿಡಿ ಸಿನಿಮಾ ಆಗಿದ್ದು, ಇನ್ನೊಂದು ವಿಶೇಷ ಅಂದ್ರೆ ಚಿತ್ರದಲ್ಲಿ ಕಾಮಿಡಿ ಕಿಂಗ್ ಗಳಾದ ಸಾಧು ಕೋಕಿಲ ಮತ್ತು ಚಿಕ್ಕಣ್ಣ ಸಹ ತೆರೆಹಂಚಿಕೊಳ್ಳಲಿದ್ದಾರೆ.

English summary
Sangeetha Bhatt, who caught everybody’s eye with her performance in Eradena Sala and is waiting for the release of Dayavitu Gamanisi, has started shooting for her next ' Loaded Gun'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X