For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದೆ ಇಂದು ಅಣ್ಣಾವ್ರ ಸಿನಿಮಾ ರೀ ರಿಲೀಸ್ ಆಗ್ತಿದೆ

  By Naveen
  |
  ಅಣ್ಣಾವ್ರ ಎರಡು ಕನಸು ಸಿನಿಮಾ ಇಂದು ರಿಲೀಸ್..! | Filmibeat Kannada

  ನಟ ವಿಷ್ಣುವರ್ಧನ್ ನಂತರ ಈಗ ರಾಜ್ ಕುಮಾರ್ ಗಾಂಧಿನಗರಕ್ಕೆ ಆಗಮಿಸಿದ್ದಾರೆ. 'ನಾಗರಹಾವು' ಸಿನಿಮಾದ ಮರು ಬಿಡುಗಡೆಯ ಬಳಿಕ ಈಗ ಅಣ್ಣಾವ್ರ 'ಎರಡು ಕನಸು' ಸಿನಿಮಾ ರೀ ರಿಲೀಸ್ ಆಗುತ್ತಿದೆ.

  ಹೆಚ್ಚು ಪ್ರಚಾರ ಮಾಡದ ಕಾರಣ ಈ ಸಿನಿಮಾದ ಬಿಡುಗಡೆಯ ವಿಚಾರ ಅನೇಕರಿಗೆ ತಿಳಿದಿಲ್ಲ. ಆದರೆ, ಸದ್ದಿಲ್ಲದೆ 'ಎರಡು ಕನಸು' ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ನಾಲ್ಕು ಆಟಗಳು ಸಿನಿಮಾ ಪ್ರದರ್ಶನ ಆಗುತ್ತಿದೆ.

  ಮತ್ತೆ ಗಾಂಧಿನಗರದ ಚಿತ್ರಮಂದಿರದಲ್ಲಿ 'ದಾರಿ ತಪ್ಪಿದ ಮಗ' ಮತ್ತೆ ಗಾಂಧಿನಗರದ ಚಿತ್ರಮಂದಿರದಲ್ಲಿ 'ದಾರಿ ತಪ್ಪಿದ ಮಗ'

  ತ್ರಿವೇಣಿಯ ಜೊತೆಗೆ ರಾಜ್ಯದ 40ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇಂದು ರಿಲೀಸ್ ಆಗುತ್ತಿರುವ ಮೂರು ಹೊಸ ಚಿತ್ರಗಳ ಜೊತೆಗೆ 'ಎರಡು ಕನಸು' ಮರು ಬಿಡುಗಡೆಯಾಗುತ್ತಿದೆ.

  ಅಂದಹಾಗೆ, 'ಎರಡು ಕನಸು' ರಾಜ್ ಕುಮಾರ್ ಅವರ ಸಿನಿ ಜರ್ನಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. 1974ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ದೊರೈ ಭಗವಾನ್ ನಿರ್ದೇಶನ ಮಾಡಿದ್ದರು. ರಾಜ್ ಜೊತೆಗೆ ಮಂಜುಳ ಹಾಗೂ ಕಲ್ಪನಾ ನಟಿಸಿದ್ದರು.

  English summary
  Actor Rajkumar 'Eradu Kanasu' kannada movie re releasing today (september 7th). The movie is directed by Dorai Bhagavan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X