For Quick Alerts
  ALLOW NOTIFICATIONS  
  For Daily Alerts

  ಕೋಟಿ ವೆಚ್ಚದಲ್ಲಿ ಚಿತ್ರೀಕರಣ ಆಗುತ್ತಿದೆ ಕಿಚ್ಚನ ಹಾಡು

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ಸದ್ಯ ಕ್ರೇಜ್ ಹುಟ್ಟು ಹಾಕಿರುವ ಸಿನಿಮಾ ದಿ ವಿಲನ್. ಕನ್ನಡ ಸಿನಿಮಾ ಪ್ರೇಕ್ಷಕರು ಬಾರಿ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಚಿತ್ರ ಇದಾಗಿದ್ದು ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾದಿದ್ದಾರೆ.

  ಕೇವಲ ಸ್ಟಿಲ್ ಗಳನ್ನ ಮಾತ್ರ ಬಿಡುಗಡೆ ಮಾಡಿರುವ ನಿರ್ದೇಶಕ ಪ್ರೇಮ್ ದಿ ವಿಲನ್ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ತಿಳಿದಿರುವಂತೆ ದಿ ವಿಲನ್ ಬಿಗ್ ಬಜೆಟ್ ಸಿನಿಮಾ. ಆದರೆ ಈ ಮಟ್ಟಕ್ಕೆ ಬಂಡವಾಳ ಹಾಕಿ ಸಿನಿಮಾ ಮಾಡುತ್ತಾರಾ ಎನ್ನುವ ಆಶ್ಚರ್ಯ ಈ ವಿಚಾರ ಓದಿದ ನಂತರ ಮನಸ್ಸಿನಲ್ಲಿ ಮೂಡುತ್ತದೆ.

  ಕಿಚ್ಚ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ ಕಿಚ್ಚ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ

  ದಿ ವಿಲನ್ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಸುದೀಪ್ ಅಭಿನಯದ ಹಾಡೊಂದಕ್ಕೆ ಕೋಟಿಗಟ್ಟಲೆ ಹಣವನ್ನ ಸುರಿದಿದ್ದಾರಂತೆ ನಿರ್ಮಾಪಕರು. ಅಷ್ಟೇ ಅಲ್ಲ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಲು ಪದ್ಮಾವತ್ ಚಿತ್ರ ಖ್ಯಾತಿಯ ಎರಿಕ್ ಪಿಳೈ ಬಂದಿದ್ದಾರಂತೆ. ಹಾಗಾದರೆ ಕಿಚ್ಚನ ಸಿನಿಮಾ ಹಾಡಿಗೆ ಖರ್ಚಾಗಿದ್ದು ಎಷ್ಟು? ಎರಿಕ್ ದಿ ವಿಲನ್ ಸಿನಿಮಾಗಾಗಿ ಏನು ಮಾಡುತ್ತಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ಒಂದು ಹಾಡಿಗೆ 3 ಕೋಟಿ

  ಒಂದು ಹಾಡಿಗೆ 3 ಕೋಟಿ

  ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದ ಹಾಡಿಗಾಗಿ ಮೂರು ಕೋಟಿಯನ್ನ ಖರ್ಚು ಮಾಡಲಾಗಿದೆಯಂತೆ. ಸುದೀಪ್ ಅಭಿನಯದ ಈ ಹಾಡಿನಲ್ಲಿ ಅತಿ ಹೆಚ್ಚು ಗ್ರಾಫಿಕ್ಸ್ ಬಳಕೆಯನ್ನ ಮಾಡಲಾಗಿದೆಯಂತೆ.

  ಎರಿಕ್ ಪಿಳೈ ನಿಂದ ಸೌಂಡ್ ಮಿಕ್ಸಿಂಗ್

  ಎರಿಕ್ ಪಿಳೈ ನಿಂದ ಸೌಂಡ್ ಮಿಕ್ಸಿಂಗ್

  ದಿ ವಿಲನ್ ಚಿತ್ರದ ಈ ಹಾಡೊಂದಕ್ಕೆ ಬಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದಿರುವ ಸೌಂಡ್ ಎಂಜಿನಿಯರ್ ಎರಿಕ್ ಪಿಳೈ ಅವರನ್ನ ಕರೆಸಲಾಗಿದ್ಯಂತೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಎರಿಕ್ ಸೇರಿ ಹಾಡನ್ನ ಕಂಪೋಸ್ ಮಾಡಿದ್ದಾರೆ.

  ಪದ್ಮಾವತ್ ಸಿನಿಮಾದಲ್ಲಿ ಕೆಲಸ

  ಪದ್ಮಾವತ್ ಸಿನಿಮಾದಲ್ಲಿ ಕೆಲಸ

  ಎರಿಕ್ ಪಿಳೈ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದಲ್ಲಿ ಸೌಂಡ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಇತ್ತೀಚಿಗಷ್ಟೇ ಬೆಸ್ಟ್ ಸೌಂಡ್ ಎಂಜಿನಿಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

  ಟೀಸರ್ ಬಿಡುಗಡೆಗೆ ಸಿದ್ದತೆ

  ಟೀಸರ್ ಬಿಡುಗಡೆಗೆ ಸಿದ್ದತೆ

  ಸಾಕಷ್ಟು ದಿನಗಳಿಂದ ದಿ ವಿಲನ್ ಸಿನಿಮಾದ ಟೀಸರ್ ಬಿಡುಡಗೆ ಮಾಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದ ನಿರ್ದೇಶಕ ಪ್ರೇಮ್ ಈ ತಿಂಗಳು ಸಿನಿಮಾದ ಟೀಸರ್ ಬಿಡುಗಡೆ ಮಾಡುತ್ತಾರಂತೆ.

  ಬೆಂಗಳೂರಿನ ಸೊಸೆ ಭಾವನ ಬಾಯಿಂದ ಬಂದ ಮಾತುಗಳಿವುಬೆಂಗಳೂರಿನ ಸೊಸೆ ಭಾವನ ಬಾಯಿಂದ ಬಂದ ಮಾತುಗಳಿವು

  English summary
  Kannada producer C R Manohar spend 3 crore for The Villain movie song , eric pillai of Padmavati film fame sound engineer composing the villain song ,The Villain movie teaser will be released in this month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X