ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡವ್ರೆ ಬಂದು ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ ಅನ್ನೋದು ವಿಪರ್ಯಾಸ; ಎಸ್ತರ್ ನರೋನ

ಬಹ್ರೇನ್‌ನಲ್ಲಿ ಹುಟ್ಟಿ ಬೆಳೆದ ನಟಿ ಎಸ್ತರ್ ನರೋನ ಭಾರತೀಯ ಸಂಸ್ಕೃತಿಗಾಗಿ ಇಲ್ಲಿಗೆ ಬಂದು ನೆಲೆಸಿದ್ದಾರೆ. ಕನ್ನಡ, ತೆಲುಗು, ತಮಿಳು, ಕೊಂಕಣಿ, ಹಿಂದಿ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. 'ನಾವಿಕ', 'ಅತಿರಥ', 'ಲಂಕೆ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಎಸ್ತರ್ ಕಾಣಿಸಿಕೊಂಡಿದ್ದರು. ಕಾಸ್ಟಿಂಗ್ ಕೌಚ್ ಕಾರಣಕ್ಕೆ ಸಾಕಷ್ಟು ಅವಕಾಶಗಳು ಕಳೆದುಕೊಳ್ಳುವಂತಾಯ್ತು ಎಂದು ಆಕೆ ಹೇಳಿರುವುದು ವೈರಲ್ ಆಗ್ತಿದೆ.

ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಮತ್ತಷ್ಟು ಸಿನಿಮಾ ಅವಕಾಶಗಳು ಕಳೆದುಕೊಂಡೆ ಎಂದು ಎಸ್ತರ್ ನರೋನ ತಿಳಿಸಿದ್ದಾರೆ. ಅವಕಾಶ ಸಿಗದೇ ಇರಲು ಕಾರಣ ಕಾಸ್ಟಿಂಗ್ ಕೌಚ್, ಅಂದ್ರೆ ಅಡ್ಜೆಸ್ಟ್‌ಮೆಂಟ್. ಕೆಲ ಸಿನಿಮಾಗಳಲ್ಲಿ ನಟಿಸೋಕೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳಬೇಕು ಎನ್ನುತ್ತಾರೆ. ಬಹುಶಃ ಚಿಕ್ಕ ಸಿನಿಮಾ ಇರಬಹುದು, ಕ್ಯಾರವ್ಯಾನ್, ಹೋಟೆಲ್ ರೂಮ್ ವಿಚಾರದಲ್ಲಿ ಕೊಂಚ ಹೆಚ್ಚು ಕಮ್ಮಿ ಆದ್ರೆ ಅಡ್ಜೆಸ್ಟ್ ಮಾಡಿಕೊಳ್ಳಲು ಹೇಳ್ತಾರೆ ಎಂದು ನಾವು ಅಂದುಕೊಳ್ತೀವಿ. ಆದರೆ ಅವರು ಕೇಳುವ ಅಡ್ಜೆಸ್ಟ್‌ಮೆಂಟ್ ಬೇರೆ ಎನ್ನುವುದು ಬಳಿಕ ಗೊತ್ತಾಗುತ್ತದೆ. ನಾನು ಇದಕ್ಕೆಲ್ಲಾ ಒಪ್ಪದ ಕಾರಣ ಅವಕಾಶಗಳು ಕಳೆದುಕೊಂಡೆ ಎಂದು ಸುಮನ್ ಟಿವಿ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿದ್ದಾರೆ.

Esther Noronha Reveals She Lost Many Film Opportunities Due to Casting Couch

ಅಡ್ಜೆಸ್ಟ್‌ಮೆಂಟ್ ಕೇಳುವ ಕಾರಣಕ್ಕೆ ನಾವು ಕೈಬಿಟ್ಟ ಚಿತ್ರದಲ್ಲಿ ಬೇರೆ ನಟಿಯರು ನಟಿಸಿದ್ದಾರೆ. ಅಂತಹವರು ಬಳಿಕ ಬಂದು ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ. ನಮ್ಮ ಸ್ವಂತ ಪರಿಶ್ರಮದಿಂದ ಗೆದ್ದು ಬಂದೆವು ಎಂದು ಹೇಳಿದಾಗ ಅಚ್ಚರಿ ಎನಿಸುತ್ತದೆ ಎಂದು ನಟಿ ಎಸ್ತರ್ ನರೋನ ಹೇಳಿದ್ದಾರೆ. ಒಂದು ಚಿತ್ರದಲ್ಲಿ ನಟಿಸೋಕೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳಬೇಕು ಎಂದು ಷರತ್ತು ಹಾಕಿರುತ್ತಾರೆ. ನಾನು ಒಪ್ಪದೇ ಮತ್ತೊಬ್ಬರು ಒಪ್ಪಿ ನಟಿಸುತ್ತಾರೆ ಅಂದ್ರೆ, ಆ ಷರತ್ತು ಅವರಿಗೂ ಅನ್ವಯ ಆಗಿರುತ್ತೆ ಅರ್ಥಾತ್ ಆಕೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡಿದ್ದಾಳೆ ಅಂತ ಅಲ್ಲವೇ ಅರ್ಥ? ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ಅವಕಾಶ ಯಾರು ಯಾರಿಗೆ ಕೊಡ್ತಾರೆ? ನಿರ್ಮಾಪಕ, ನಿರ್ದೇಶಕ ಒಳ್ಳೆ ಕಲಾವಿದರು ಬೇಕು ಎಂದು ಆಯ್ಕೆ ಮಾಡಿಕೊಳ್ಳುತ್ತಾರೆ. ನಾವು ಒಳ್ಳೆ ಅವಕಾಶ ಬೇಕು ಎಂದು ಸಿನಿಮಾಗಳಲ್ಲಿ ನಟಿಸುತ್ತೇವೆ. ಫಿಲ್ಮ್ ಮೇಕರ್ಸ್, ಕಲಾವಿದರು ಎಲ್ಲರೂ ಸೇರಿ ಮಾಡಿದ್ರೆ ಅಲ್ಲವೇ ಸಿನಿಮಾ ಆಗುವುದು. ಇದರಿಂದ ಇಬ್ಬರಿಗೂ ಲಾಭ ಇದೆ ಅಲ್ವೇ? ನಾವು ಅವ್ರು ಹೇಳಿದ್ದನ್ನು ಕೇಳದೇ ಇದ್ದರೆ ಜಂಭ, ಹೀರೊಯಿನ್ ಆಗಲು ಲಾಯಕ್ಕಿಲ್ಲ ಎಂದು ಹೇಳುತ್ತಾರೆ. ಚಿತ್ರರಂಗದಲ್ಲಿ ಇದೇ ಮಾತು ಹಬ್ಬಿಸಿಬಿಡುತ್ತಾರೆ. ನಮಗೆ ಬರುವ ಅವಕಾಶಗಳು ಸಿಗದಂತೆ ಮಾಡುತ್ತಾರೆ ಎಂದು ಎಸ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.

Esther Noronha Reveals She Lost Many Film Opportunities Due to Casting Couch

ನಾನು ಆರಂಭದಲ್ಲೇ ಇಂತಹ ಅಡ್ಜೆಸ್ಟ್‌ಮೆಂಟ್ ಬೇಡಿಕೆಗಳಿಗೆ ಸೊಪ್ಪು ಹಾಕಲಿಲ್ಲ. ಹಾಗಾಗಿ ನನ್ನ ಬಗ್ಗೆ ಇಂಡಸ್ಟ್ರಿಯಲ್ಲಿ ಇದೇ ರೀತಿಯ ವಿಚಾರ ಹಬ್ಬಿಸಿದ್ದರು. ನಾನು ಅಂತಹದ್ದಕ್ಕೆ ಒಪ್ಪಲ್ಲ ಎಂದು ಗೊತ್ತಾದ ಬಳಿಕ ಯಾರು ಮತ್ತೆ ಕೇಳುವ ಪ್ರಯತ್ನ ಮಾಡಲಿಲ್ಲ. ಒಳ್ಳೆಯವರು ಕೂಡ ನಮ್ಮ ಜೊತೆ ಸಿನಿಮಾ ಮಾಡದಂತೆ ಮಾಡಿಬಿಟ್ರು.. ಆಕೆಗೆ ಜಂಭ, ಆಟಿಟ್ಯೂಡ್, ಸಿನಿಮಾಗೆ ಆಯ್ಕೆ ಮಾಡಿಕೊಂಡ್ರೆ ಕಷ್ಟ ಎಂದು ಹೇಳಿ ಅವಕಾಶಗಳು ಸಿಗದಂತೆ ಮಾಡಿಬಿಟ್ರು ಎಂದು ಎಸ್ತರ್ ಬೇಸರ ಹೊರ ಹಾಕಿದ್ದಾರೆ.

ತುಂಬಾ ದೊಡ್ಡ ಸಿನಿಮಾ, ಒಳ್ಳೆ ಪೇಮೆಂಟ್ ಎಂದು ಬಂದು ನನ್ನ ಬಳಿ ಹೇಳ್ತಾರೆ. ನಮಗೆ ಗೊತ್ತಾಗಿಬಿಡುತ್ತದೆ. ಕೂಡಲೇ ನೀವು ಎಷ್ಟೇ ಕೊಟ್ರು ನಾನು ಮಾಡಲ್ಲ ಎನ್ನುವುದಾಗಿ ಎಂದು ಎಸ್ತರ್ ತಿಳಿಸಿದ್ದಾರೆ. "ನಾನೇ ನೋಡಿದಂತೆ ಒಂದು ಸಿನಿಮಾ ನಾನು ಬಿಟ್ಟಿದ್ದೆ. ಅದೇ ಚಿತ್ರದಲ್ಲಿ ಮತ್ತೊಬ್ಬ ನಟಿಸಿ ನಟಿಸಿದ್ಲು. ನನಗೆ ಕಂಡೀಷನ್ ಹಾಕಿದ್ದ ಸಿನಿಮಾದಲ್ಲೇ ಬೇರೆಯವರು ಹೇಗೆ ನಟಿಸೋಕೆ ಸಾಧ್ಯ. ನನಗೆ ಹಾಕಿದ್ದ ಕಂಡೀಷನ್ ಆಕೆಗೂ ಹಾಕಿರ್ತಾರೆ ಅಲ್ಲವೇ? ಬಳಿಕ ಮೀಟು ಅಭಿಯಾನ ಶುರುವಾದ ಬಳಿಕ, ಅಥವಾ ಯಾವುದಾದರೂ ಸಂದರ್ಶನದಲ್ಲಿ ಅಯ್ಯೋ ನಾನು ಕಾಸ್ಟಿಂಗ್ ಕೌಚ್ ನೋಡೇಯಿಲ್ಲ. ನಾನು ಆ ವಿಚಾರದಲ್ಲಿ ಅದೃಷ್ಟವಂತೆ. ನಾನು ಹಾರ್ಡ್‌ವರ್ಕ್ ಮಾಡಿ ಬಂದಿದ್ದು ಎಂದು ಹೇಳ್ತಾರೆ. ನಮಗೆ ಗೊತ್ತು ಆ ಚಿತ್ರಕ್ಕೆ ಅಂತಾದೊಂದು ಕಂಡೀಷನ್ ಹಾಕಿದ್ರು ಅಂತ. ಹಾಗಿದ್ರು ನಟಿಸಿದವರು ಹೀಗೆ ಹೇಳಿದ್ರೆ ಹೇಗೆ? ಎಂದು ಎಸ್ತರ್ ವ್ಯಂಗ್ಯವಾಡಿದ್ದಾರೆ.

Read more about: actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X