twitter
    For Quick Alerts
    ALLOW NOTIFICATIONS  
    For Daily Alerts

    ನಾಳೆ ಭಾರತ್ ಬಂದ್ : ಗೊಂದಲದಲ್ಲಿರುವ ಚಿತ್ರರಂಗ

    By Pavithra
    |

    ತೈಲ ಉತ್ಪನ್ನಗಳ ಬೆಲೆಗಳನ್ನು ಕೇಂದ್ರ ಸರಕಾರ ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಸೋಮವಾರ (ಸೆ 10) ಭಾರತ್ ಬಂದ್ ಗೆ ಕರೆನೀಡಾಗಿದೆ. ಬಂದ್ ನ ಬಿಸಿ ನಾಳೆ ಬೆಳ್ಳಂ ಬೆಳ್ಳಿಗ್ಗೆ ಎಲ್ಲಾ ಕ್ಷೇತ್ರಗಳಿಗೆ ಮುಟ್ಟಲಿದ್ದು ಕನ್ನಡ ಚಿತ್ರೋದ್ಯಮಕ್ಕೆ ಈ ಬಿಸಿ ಇರುತ್ತಾ? ಎನ್ನುವ ಕುತೂಹಲ ಅನೇಕರಲ್ಲಿ ಮೂಡಿದೆ.

    ಆದರೆ ಬಂದ್ ಗೆ ಬೆಂಬಲ ನೀಡಬೇಕೇ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿದೆ ಕನ್ನಡ ಚಿತ್ರರಂಗ. ಹೌದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಾಳಿನ ಬಂದ್ ಗೆ ನೈತಿಕ ಬೆಂಬಲ‌ವಷ್ಟೇ ಇದೆ.

    Ethical support from Kannada film industry for Bharath band

    ಒಂದು ' ಭಾರತ್ ಬಂದ್' ನಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಹಾಗಿದ್ದರೆ!?

    ಶಾರ್ಟ್ ನೋಟೀಸ್ ಆಗಿರೋದ್ರಿಂದ ಬಂದ್ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಎನ್ನುತ್ತಿದ್ದಾರೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡರು. ಇನ್ನು ನಾಳೆ ಸಿನಿಮಾ ಚಿತ್ರೀಕರಣ ನೆಡೆಯುತ್ತಾ? ಸಿನಿಮಾ ಪ್ರದರ್ಶನ ಇರುತ್ತಾ ಎನ್ನುವುದನ್ನ ಜನರೇ ನಿರ್ಧಾರ ಮಾಡಬೇಕಿದೆ.

    Ethical support from Kannada film industry for Bharath band

    ಯಾಕಂದ್ರೆ ಚಿತ್ರಮಂದಿರಕ್ಕೆ ಜನರು ಬಂದರೆ ಪ್ರದರ್ಶನ ಮಾಡುವುದು ನಮ್ಮ ಧರ್ಮ. ಜನರು ಬರದೇ ಮನೆಯಲ್ಲಿ ಉಳಿದರೇ ನೋ ಷೋ ಅಂತ ಬೋರ್ಡ್ ಹಾಕಲು ಥಿಯೇಟರ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಇನ್ನು ಔಟ್ ಡೋರ್ ಚಿತ್ರೀಕರಣ ಎಂದಿನಂತೆ ನಡೆಯುತ್ತಾ ಇಲ್ಲವಾ? ಎನ್ನುವ ಪ್ರಶ್ನೆಗೆ ಉತ್ತರ ನಾಳಿನ ಬಂದ್ ಪರಿಣಾಮ ಹೇಗಿರುತ್ತೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ.

    English summary
    Bharat Bandh Over Rising Fuel Prices Tomorrow. Ethical support from Kannada film industry
    Sunday, September 9, 2018, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X