ನಾಯಿಗಿರುವ ನಿಯತ್ತು ಆ ಡಾಗ್ ಸತೀಶ್‌ಗೆ ಇಲ್ಲ,ಥರ್ಡ್‌ ಕ್ಲಾಸ್‌ ನನ್ಮಗ ; ಸುದೀಪ್‌ಗೆ ಅವಮಾನ-ವಿನಯ್ ಗೌಡ ಮತ್ತೆ ಕೆಂಡ ಕೆಂಡ

''ಬಿಗ್ ಬಾಸ್'' ಹಲವರ ಕನಸು. ಸಾಮಾನ್ಯರನ್ನು ಸಾಧಕರನ್ನಾಗಿ ಮಾಡುವ, ಸಾಧಕರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸುವ ವೇದಿಕೆ. ಆದರೆ ಈಗೀಗ ಈ ವೇದಿಕೆಯ ಮೂಲಕ ಪರಿಚಯವಾದ ಕೆಲವರು ಆ ನಂತರ ತಾವೇ ಸರ್ವಶ್ರೇಷ್ಠರು ಎಂಬಂತೆ ವರ್ತಿಸುತ್ತಿದ್ದಾರೆ. ಅವಕಾಶ ನೀಡಿದವರಿಗೆ ಕೃತಜ್ಞರಾಗಿರುವ ಬದಲು ಅವಕಾಶ ನೀಡಿದವರನ್ನು ಅವಮಾನ ಮಾಡುತ್ತಿದ್ದಾರೆ. ಇವರಲ್ಲಿ ಕೃತಜ್ಞತಾ ಭಾವವೇ ಇರುವುದಿಲ್ಲ.

ಇದಕ್ಕೆ ಉದಾಹರಣೆಯಂತೆ ಇರುವ ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬಾಮ್ಸ್ ಇತ್ತೀಚೆಗೆ ಸುದೀಪ್ ಅವರಿಗೆ ಅಗೌರವ ತೋರಿಸಿದ್ದರು. ಟಾಯ್ಲೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡು, ಆ ವಿಡಿಯೋಗೆ ಸುದೀಪ್ ಅವರ ಹಾಡು ಉಪಯೋಗಿಸಿದ್ದರು. ಈ ಮೂಲಕ ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿದ್ದರು.

even-dogs-have-honesty-vinay-gowda-explodes-at-dog-satish-over-toilet-video-mocking-kiccha-sudeep

ಕೇವಲ ಸುದೀಪ್ ಅಭಿಮಾನಿಗಳು ಮಾತ್ರವಲ್ಲ ''ಬಿಗ್ ಬಾಸ್‌''ನ ಮಾಜಿ ಸ್ಫರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಕೂಡ ಡಾಗ್ ಸತೀಶ್ ಹಂಚಿಕೊಂಡಿದ್ದ ಈ ವಿಡಿಯೋ ನೋಡಿ ಕೆರಳಿ ಕೆಂಡವಾಗಿದ್ದರು. ಡಾಗ್ ಸತೀಶ್ ಅವರ ಕಾಮೆಂಟ್ ಸೆಕ್ಷನ್‌ನಲ್ಲಿ ತಮ್ಮ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿನಯ್ ಗೌಡ ಮತ್ತೆ ಕಿಡಿ ಕಾರಿದ್ದಾರೆ. ನಾಯಿಗೆ ಇರುವ ನಿಯತ್ತು ಕೂಡ ಆ ಡಾಗ್ ಸತೀಶ್‌ಗೆ ಇಲ್ಲ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ.

ಈ ಕುರಿತು ''ಬಾಸ್‌ ಟಿವಿ''ಗೆ ಪ್ರತಿಕ್ರಿಯೆ ನೀಡಿರುವ ವಿನಯ್ ಗೌಡ ಒಬ್ಬ ವ್ಯಕ್ತಿಗೆ ಮನುಷ್ಯನ ಬುದ್ದಿ ಇರಬೇಕು, ನಾಯಿಗಳಿಗಾದರೂ ನಿಯತ್ತು ಇರುತ್ತೆ, ಅಂತಹ ನಾಯಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡೋ ಒಬ್ಬ ಮನುಷ್ಯನಿಗೆ ಅಷ್ಟು ನಿಯತ್ತಿಲ್ಲ ಅಂದರೆ ಏನಂತ ಕರೆಯೋದು ಎಂದು ಪ್ರಶ್ನೆ ಮಾಡಿದ್ದಾರೆ.

30 ವರ್ಷದಿಂದ ಚಿತ್ರರಂಗದಲ್ಲಿ ಇರುವುದು, ಟಾಪ್ ಲೆವಲ್‌ನಲ್ಲಿ ಹೆಸರು ಮಾಡುವುದು, ಎಲ್ಲವೂ ಈಗ ಅಸಾಧ್ಯ ಎಂದು ಹೇಳಿರುವ ವಿನಯ್ ಗೌಡ ಮೂವತ್ತು ವರ್ಷ ಅಲ್ಲ ಮೂರು ವರ್ಷ ಇಂಡಸ್ಟ್ರೀಯಲ್ಲಿ ಸರ್ವೈವ್‌ ಆಗೋದೇ ಅಸಾಧ್ಯ, ಹೀಗಿರುವಾಗ ಅವರ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದಿದ್ದಾರೆ.

ಅವರು ದೊಡ್ಡ ವ್ಯಕ್ತಿ, ನಮ್ಮ ಕನ್ನಡ ಇಂಡಸ್ಟ್ರೀ ಅಥವಾ ನಮ್ಮ ಕರ್ನಾಟಕಕ್ಕಾಗಲಿ, ನಮ್ಮ ಕನ್ನಡದ ಹೆಸರನ್ನ ಬೇರೆ ರಾಜ್ಯಕ್ಕೆ ತಗೊಂಡು ಹೋಗಿ, ಒಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದಂತಹ ಆ ವ್ಯಕ್ತಿಯ ನಡೆಸಿಕೊಡುವ ''ಬಿಗ್‌ ಬಾಸ್‌'' ಅನ್ನೋ ವೇದಿಕೆಗೆ ಬಂದು, ಹೆಸರು ಮಾಡಿ, ''ಬಿಗ್‌ ಬಾಸ್‌''ಗೆ ಬಂದು ನನ್ನ ಹೆಸರು ಡೀಗ್ರೇಡ್‌ ಆಯ್ತು, ಮೊದಲು ಇಂಟರ್ನ್ಯಾಷನಲ್‌ ಆಗಿದ್ದೆ. ಈಗ ಬರೀ ಕರ್ನಾಟಕಕ್ಕೆ ಮಾತ್ರ ಗೊತ್ತು ನಾನು ಎಂದೆಲ್ಲಾ ಮಾತನಾಡ್ತಾರೆ ಎಂದು ಹೇಳಿರುವ ವಿನಯ್ ಗೌಡ ಕಲ್ಚರ್‌ ಅದು ಇದು ಅಂತಾ ಮಾತಾಡ್ತಾನೆ ಇವನಿಗೆ ಕಲ್ಚರ್‌ ಇದೆಯಾ? ಎಂದು ಕಿಡಿ ಕಾರಿದ್ದಾರೆ.

even-dogs-have-honesty-vinay-gowda-explodes-at-dog-satish-over-toilet-video-mocking-kiccha-sudeep

ಪ್ರಚಾರಕ್ಕೋಸ್ಕರ ಒಬ್ಬ ವ್ಯಕ್ತಿ ಯಾವ ಲೆವೆಲ್‌ಗೆ ಇಳಿಯುತ್ತಾನೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಹೇಳಿರುವ ವಿನಯ್ ಗೌಡ, ನಾನು ಮೂತ್ರ ವಿಸರ್ಜನೆ ಮಾಡಿದರು ಅದನ್ನು ಇಂಟರ್‌ನ್ಯಾಷನಲ್‌ ನ್ಯೂಸ್‌ ಮಾಡ್ತೀನಿ ಅಂತ ರಜತ್‌ ಪಾಡ್‌ಕಾಸ್ಟ್‌ನಲ್ಲಿ ಸತೀಶ್‌ ಹೇಳ್ತಾನೆ ಅಂದರೆ ಅದು ಪ್ರಚಾರದ ಹುಚ್ಚಲ್ಲದೇ ಇನ್ನೇನು ಎಂದಿದ್ದಾರೆ. ಲೋಕಲ್‌ ಚೀಪ್‌ ಥರ್ಡ್‌ ಕ್ಲಾಸ್‌ ಬುದ್ದಿಗಳು. ಅದನ್ನು ಯೂಸ್‌ ಮಾಡಿಕೊಳ್ಳೋದಕ್ಕೆ ಸುದೀಪ್‌ ಸರ್‌ ಹಾಡು ಬೇಕಿತ್ತಾ? ಸುದೀಪ್‌ ಸರ್‌ ಬಗ್ಗೆ ಮಾತಾಡೋದಕ್ಕೆ ಇವನಿಗೆ ಏನ್‌ ಯೋಗ್ಯತೆ ಇದೆ? ಸುದೀಪ್‌ ಸರ್‌ ಸಾಧನೆಗಳೇನು? ಅವರು ಎಷ್ಟು ಜನಕ್ಕೆ ಏನೆಲ್ಲಾ ಸಹಾಯ ಮಾಡಿದ್ದಾರೆ. ಈ ಸತೀಶ್‌ಗೆ ಏನಾದ್ರೂ ಬುದ್ದಿ ಇದೆಯಾ? ಟಾಯ್ಲೆಟ್ ವಿಡಿಯೋಗೆ ಆ ಹಾಡು ಅವನು ಹಾಕಬೇಕಿತ್ತಾ? ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಥರ್ಡ್ ಕ್ಲಾಸ್ ಆಗಿ ವರ್ತಿಸುವ ವ್ಯಕ್ತಿತ್ವ ಅವನದ್ದು ಎಂದಿದ್ದಾರೆ. ಇಂತಹ ಥರ್ಡ್ ಕ್ಲಾಸ್ ಬದುಕು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಮೊದಲು ತುಂಬಾನೇ ಗೌರವ ಇತ್ತು ಆ ವ್ಯಕ್ತಿಯ ಮೇಲೆ, ಡಾಗ್‌ ಬ್ರೀಡರ್‌, ಇಂಟರ್‌ನ್ಯಾಷನಲ್‌ ಲೆವಲ್‌ನಲ್ಲಿ ಸುದ್ದಿಯಾಗಿದ್ದಾರೆ ಅಂದಾಗ, ಹೌದೇನೋ, ಇರ್ಬೋದೇನೋ ಅಂತ ಒಂದು ಮರ್ಯಾದೆ ಇತ್ತು ಎಂದು ಹೇಳಿರುವ ವಿನಯ್ ಗೌಡ ''ಬಿಗ್‌ ಬಾಸ್‌''ನಂತಹ ವೇದಿಕೆಯನ್ನು ಯೂಸ್‌ ಮಾಡಿಕೊಂಡು ಈ ತರಹದ ಕೆಲಸ ಮಾಡ್ತಾರೆ ಮಾನ-ಮರ್ಯಾದೆ ಇದೆಯಾ ಅವನಿಗೆ ಎಂದು ಹೇಳಿದ್ದಾರೆ. ''ಬಿಗ್‌ ಬಾಸ್‌''ನಿಂದ ಹೊರಗೆ ಬಂದು ಒಂದು ವರ್ಷ ''ಬಿಗ್‌ ಬಾಸ್‌'' ಬಗ್ಗೆ ಆಗಲಿ, ಆ ವೇದಿಕೆ ಬಗ್ಗೆ ಆಗಲಿ, ಯಾರ ಬಗ್ಗೆ ಆಗಲಿ, ಮಾತನಾಡಬಾರದು ಎಂಬ ಕಾಂಟ್ರ್ಯಾಕ್ಟ್‌ ಇರುತ್ತೆ. ಕಲರ್ಸ್‌ನವರು ಏನ್‌ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಗಿಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಹಿಂದೆ ಗಿಲ್ಲಿಯನ್ನು ಸತೀಶ್ ಅವಮಾನ ಮಾಡಿ ಅಪಹಾಸ್ಯ ಮಾಡಿದ್ದರಲ್ಲ.. ಆ ವಿಚಾರದ ಕುರಿತು ಕೂಡ ಮಾತನಾಡಿರುವ ವಿನಯ್ ಗೌಡ ಗಿಲ್ಲಿ ಕಷ್ಟ ಅವನಿಗೆ ಗೊತ್ತು. ಅವನು ಚೆನ್ನಾಗಿ ಆಡಿಕೊಂಡು ಗೆದ್ದಿದ್ದಾನೆ. ಇವನಿಗೆ ಯೋಗ್ಯತೆ ಇದ್ದಿದ್ದರೆ ಇವನು ಆಡಬೇಕಿತ್ತು. ಇಡೀ ಕರ್ನಾಟಕ ಗೆಲ್ಸಿರೋ ಒಬ್ಬ ವ್ಯಕ್ತಿಯನ್ನ ಇಟ್ಕೊಂಡು ಇವನು ಚೀಪ್‌ ಚೀಪ್‌ ಆಗಿ ಮಾತಾಡ್ತಾನೆ. ಇವನು ಮನುಷ್ಯನಾ? ಹೊಟ್ಟೆಗೆ ಅನ್ನ ತಿನ್ತಾನಾ..? ಹೊಟ್ಟೆಗೆ ಅನ್ನ ತಿನ್ನುವರು ಯಾರು ಈ ತರಹದ ಕೆಲಸ ಮಾಡಲ್ಲ ಎಂದು ವಾಗ್ದಾಳಿಯನ್ನು ನಡೆಸಿದ್ದಾರೆ. ಇನ್ಮುಂದೆಯಾದರೂ ಮನುಷ್ಯನಂತೆ ಬದುಕುವುದನ್ನು ಕಲಿಲೀ ಅವನು ಎಂದಿದ್ದಾರೆ.

More from Filmibeat

English summary
Vinay Gowda just destroyed Dog Satish! From mocking Kiccha Sudeep in a toilet video to violating BB contracts, the drama is peaking. Watch Vinay’s savage response: "Even dogs are more honest than you!
Read more about: biggboss filmibeat news sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X