ಈ ನಟ ಏನೇ ಶುರು ಮಾಡಿದ್ರೂ ಅದ್ಭುತ ರಿಸಲ್ಟ್ ಗ್ಯಾರಂಟಿ; ಕನ್ನಡದ ಲಕ್ಕಿ ಸ್ಟಾರ್ ಯಾರೆಂದು ತಿಳಿಸಿದ ರಕ್ಷಿತ್ ಶೆಟ್ಟಿ

ಮೊನ್ನೆಯಷ್ಟೇ ಕನ್ನಡದ ಯುವ ತಂಡ ಸಿದ್ಧಪಡಿಸಿರುವ, ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು ಎನಿಸಿಕೊಂಡಿರುವ ಚಿತ್ರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.

ಚಿತ್ರ ಸೆಟ್ಟೇರಿದಾಗಿನಿಂದಲೂ ತಮ್ಮ ವಿಭಿನ್ನ ಪ್ರಚಾರದ ಕಾರಣದಿಂದಾಗಿ ಸದ್ದು ಮಾಡುತ್ತಾ ಬಂದಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಎಲ್ಲಾ ಪ್ರೋಮೊಗಳು ಹಾಗೂ ಹಾಡುಗಳನ್ನು ಅಚ್ಚುಕಟ್ಟಾಗಿದ್ದವು ಹಾಗೂ ಸಿನಿ ರಸಿಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದವು.

Every work which started by Puneeth Rajkumar became successful says Rakshit Shetty

ಹೀಗೆ ಪ್ರೋಮೊ ಹಾಗೂ ಪ್ರಚಾರದ ವಿಡಿಯೊಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್ ಇನ್ನೆಷ್ಟು ಕಲರ್‌ಫುಲ್ ಆಗಿ ಇರಲಿದೆ ಹಾಗೂ ಚಿತ್ರಕಥೆ ಚೆನ್ನಾಗಿರಲಿದೆ ಎಂದು ಸಿನಿ ರಸಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜುಲೈ 21ಕ್ಕೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತೆರೆಗೆ ಬರುತ್ತಿದ್ದು ಟ್ರೈಲರ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ರಿಷಬ್ ಶೆಟ್ಟಿ, ರಮ್ಯಾ, ದಿಗಂತ್, ಲೂಸಿಯಾ ಪವನ್ ಕುಮಾರ್ ಈ ಚಿತ್ರದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೊನ್ನೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಟ್ರೈಲರ್ ಲೋಕಾರ್ಪಣೆ ಆಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್‌ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರಕ್ಷಿತ್‌ ಶೆಟ್ಟಿ 'ಪರಂವ' ಬ್ಯಾನರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಕ್ಷಿತ್ ಶೆಟ್ಟಿ ಚಿತ್ರದ ಕುರಿತು ಮಾತನಾಡಿದರು. "ನಾನು ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಈ ಚಿತ್ರವನ್ನು ಅರ್ಪಿಸುತ್ತಿದ್ದು, ಪ್ರೆಸೆಂಟರ್ ಆಗಿ ಬಂದಿದ್ದೇನೆ. ಅಪ್ಪು ಸರ್ ಏನೇ ಶುರು ಮಾಡಿದ್ರೂ ಅದು ಅದ್ಭುತವಾಗಿ ರಿಸಲ್ಟ್ ಕೊಡುತ್ತೆ ಅಂತ ಒಂದು ನಂಬಿಕೆ. ಏಕೆಂದರೆ ಪರವಂ ಸ್ಟುಡಿಯೊಸ್ ನಮ್ಮ ಆಫೀಸ್ ಸಹ ಅವರೇ ಉದ್ಘಾಟನೆ ಮಾಡಿರೋದು. ಈಗ ಹಾಸ್ಟೆಲ್ ಹುಡುಗರು ಅವರೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುರುವಾಗಿತ್ತು" ಎಂದರು. ಈ ಮೂಲಕ ಪುನೀತ್ ರಾಜ್‌ಕುಮಾರ್ ಲಕ್ಕಿ, ಅವರು ಶುರು ಮಾಡಿದ್ದಾರೆ ಎಂದರೆ ಈ ಚಿತ್ರ ಗೆದ್ದ ಹಾಗೆ ಎಂದು ರಕ್ಷಿತ್ ತಿಳಿಸಿದರು.

ಹೌದು, ಪುನೀತ್ ರಾಜ್‌ಕುಮಾರ್ ಅವರು ರಕ್ಷಿತ್ ಶೆಟ್ಟಿ ಒಡೆತನದ ಪರಂವ ಸ್ಟುಡಿಯೊಸ್ ಚಿತ್ರ ನಿರ್ಮಾಣ ಸಂಸ್ಥೆಯನ್ನು ಟೇಪ್ ಕತ್ತರಿಸಿ ಉದ್ಘಾಟಿಸಿದ್ರು. ಆ ಸಂಸ್ಥೆ ಈಗ ದೊಡ್ಡ ಯಶಸ್ಸು ಸಾಧಿಸಿದ ಚಿತ್ರಗಳನ್ನು ನೀಡುತ್ತಾ ಬಂದಿದೆ. ಅದೇ ರೀತಿ ನಟ ಪುನೀತ್ ರಾಜ್‌ಕುಮಾರ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಪೋಸ್ಟರ್ ಲಾಂಚ್ ಮಾಡಿ ಶುಭ ಕೋರಿದ್ದರು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಂಡಕ್ಕೆ ಸಾಥ್ ನೀಡಿದ್ದಾರೆ. ಒಟ್ಟಾರೆ ಟ್ರೈಲರ್‌ನಿಂದಲೇ ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡ್ತಿದೆ. ಜುಲೈ 21ಕ್ಕೆ ದೊಡ್ಡ ಓಪನಿಂಗ್ ಸಿಗುವ ಸುಳಿವು ಸಿಗುತ್ತಿದೆ.

More from Filmibeat

English summary
Every work which started by Puneeth Rajkumar became successful says Rakshit Shetty. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X