ಎಲ್ಲದಕ್ಕೂ ಮಿತಿ ಇದೆ, ಈ ದಿನ ನಮಗೆ ಯಶ್ 19 ಅಪ್‌ಡೇಟ್ ಬೇಕೇಬೇಕು; ಯಶ್ ಫ್ಯಾನ್ಸ್ ಅಸಮಾಧಾನ!

ರಾಕಿಂಗ್ ಸ್ಟಾರ್ ಯಶ್ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಕೆಜಿಎಫ್ ಸಿನಿಮಾ ಸರಣಿಯನ್ನು ಹೊರತುಪಡಿಸಿ ಯಶ್ ಸಾಮಾನ್ಯ ಕಮರ್ಷಿಯಲ್ ಚಿತ್ರವೊಂದನ್ನು ಮಾಡಿ ಏಳು ವರ್ಷಗಳೇ ಆಗಿವೆ. ಹೌದು, 2016ರಲ್ಲಿ ಸಂತು ಸ್ಟ್ರೈಟ್ ಫಾರ್ವರ್ಡ್ ಎಂಬ ಚಿತ್ರದಲ್ಲಿ ನಟಿಸಿದ್ದ ಯಶ್ ಅದಾದ ಬಳಿಕ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ.

ಹೀಗೆ ಕಳೆದ ಐದು ವರ್ಷಗಳಲ್ಲಿ ಕೆಜಿಎಫ್ ಫ್ರಾಂಚೈಸಿಯ ಲುಕ್‌ನಲ್ಲಿಯೇ ತಮ್ಮ ನಟನನ್ನು ನೋಡಿ ಸಾಕೆನಿಸಿರುವ ಯಶ್ ಅಭಿಮಾನಿಗಳು ಮುಂದಿನ ಚಿತ್ರದಲ್ಲಿ ತಮ್ಮ ನಟ ವಿಭಿನ್ನ ಗೆಟಪ್ ಹಾಗೂ ವಿಭಿನ್ನ ಮ್ಯಾನರಿಸಂ ಇರುವ ಪಾತ್ರವನ್ನು ಆರಿಸಿಕೊಳ್ಳಲಿ ಎಂಬ ಅಭಿಪ್ರಾಯವನ್ನು ಹಲವಾರು ಬಾರಿ ವ್ಯಕ್ತಪಡಿಸಿದ್ದಾರೆ. ಇನ್ನು ಯಶ್ ಆಪ್ತ ವಲಯದಿಂದ ಬಂದಿದ್ದ ಮಾಹಿತಿ ಪ್ರಕಾರ ಯಶ್ ಈ ಬಾರಿ ಕೆಜಿಎಫ್ ಪ್ರಪಂಚದಿಂದ ಆಚೆ ಬಂದು ಚಿತ್ರ ಮಾಡಲಿದ್ದಾರೆ ಎನ್ನಲಾಗಿತ್ತು.

Everything has limit; Yash fans demanding Yash for his next film update on April 14

ಅಲ್ಲದೇ ಕೆಲ ದಿನಗಳ ಹಿಂದೆ ಯಶ್ ಮುಂದಿನ ಚಿತ್ರವನ್ನು ಸ್ವತಃ ಯಶ್ ಅವರೇ ನಿರ್ದೇಶನ ಮಾಡಿಕೊಳ್ಳಲಿದ್ದಾರೆ ಹಾಗೂ ಆಯ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ರಾಧಿಕಾ ಪಂಡಿತ್ ಅವರೇ ನಿರ್ಮಿಸಲಿದ್ದಾರೆ ಎಂಬ ಸುದ್ದಿಗಳೂ ಸಹ ಹರಿದಾಡಿದ್ದವು. ಇನ್ನು ಯಶ್ ಹುಟ್ಟುಹಬ್ಬದಂದು ಯಶ್ 19 ಚಿತ್ರದ ಮಾಹಿತಿ ಹೊರ ಬೀಳುವುದು ಖಚಿತ ಎಂದೂ ಸಹ ಹೇಳಲಾಗಿತ್ತು. ಆದರೆ ಈ ಪೈಕಿ ಯಾವ ಸುದ್ದಿಗಳೂ ಸಹ ನಿಜವಾಗಲಿಲ್ಲ. ಇಲ್ಲಿಯ ತನಕ ಯಶ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಯಶ್ ಹುಟ್ಟುಹಬ್ಬದ ದಿನ ಸಿನಿಮಾ ಅಪ್‌ಡೇಟ್ ಬರಲಿಲ್ಲ. ಬದಲಾಗಿ ಯಶ್ ಅವರಿಂದ ಸಮಾಧಾನಕರ ಪತ್ರ ಬಂದಿತ್ತು. ಆದಷ್ಟು ಬೇಗ ಚಿತ್ರದ ಅಪ್‌ಡೇಟ್ ನೀಡುವುದಾಗಿ ಯಶ್ ತಿಳಿಸಿದ್ದರು. ಹೀಗೆ ಅಭಿಮಾನಿಗಳು ಯಶ್ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಾ ವರ್ಷವೇ ಕಳೆದು ಹೋಗಿದೆ.

ಹೌದು, ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಗೆ ಬಂದು ವರ್ಷ ಕಳೆಯಲಿದ್ದು, ವರ್ಷ ಕಳೆದರೂ ಯಶ್ ಮುಂದಿನ ಚಿತ್ರ ಯಾವುದು ಎಂಬ ಮಾಹಿತಿ ಮಾತ್ರ ಅಭಿಮಾನಿಗಳಿಗೆ ಲಭಿಸಿಲ್ಲ. ಈ ಕುರಿತು ಹಲವಾರು ಬಾರಿ ಯಶ್ ಅಭಿಮಾನಿಗಳು ಟ್ವಿಟರ್ ಟ್ರೆಂಡ್ ಮಾಡಿದ್ದು, ಯಶ್‌ಗೆ ಪತ್ರವನ್ನೂ ಸಹ ಬರೆದಿದ್ದಾರೆ. ಹೀಗೆ ವರ್ಷವಾದರೂ ಯಾವ ಮಾಹಿತಿಯೂ ಲಭಿಸದ ಕಾರಣ ಇದೀಗ ಕೆಲ ಯಶ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದು, ತಮಗೆ ಏಪ್ರಿಲ್ 14ರಂದು ಯಶ್ 19 ಚಿತ್ರದ ಬಗ್ಗೆ ಮಾಹಿತಿ ಬೇಕೇ ಬೇಕೆಂದು ಪಟ್ಟು ಹಿಡಿದಿದ್ದಾರೆ.

Everything has limit; Yash fans demanding Yash for his next film update on April 14

ಹಲವು ಯಶ್ ಅಭಿಮಾನಿಗಳು "ಎಲ್ಲಾ ಯಶ್ ಅಭಿಮಾನಿಗಳು ಏಪ್ರಿಲ್ 14ರಂದು ನಡೆಯಲಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೊದಲ ವರ್ಷದ ಟ್ವಿಟರ್ ಟ್ರೆಂಡ್‌ನಲ್ಲಿ ಭಾಗವಹಿಸಬಾರದು ಎಂದು ಕೇಳಿಕೊಳ್ಳುತ್ತಿದ್ದೇವೆ. ಹಾಗೂ ಯಶ್ ಅವರೂ ಸಹ ಇದೇ ದಿನದಂದು ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ. ಎಲ್ಲದಕ್ಕೂ ಒಂದು ಮಿತಿ ಇದೆ" ಎಂದು ಬರೆದುಕೊಂಡು ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಬಾಲಿವುಡ್ ಹಂಗಾಮಾ ಎಂಬ ವೆಬ್ ಸೈಟ್ ಯಶ್ ಮುಂದಿನ ಚಿತ್ರದ ಅಪ್‌ಡೇಟ್ ಏಪ್ರಿಲ್ 14ರಂದು ಹೊರಬೀಳಲಿರುವುದು ಪಕ್ಕಾ ಎಂಬ ಎಕ್ಕ್ಸ್‌ಕ್ಲೂಸಿವ್ ಸುದ್ದಿಯನ್ನು ಹೊರಹಾಕಿತ್ತು. ಈ ಪ್ರಕಾರ ಯಶ್ ತಮ್ಮ ಮುಂದಿನ ಚಿತ್ರದ ಮಾಹಿತಿಯನ್ನು ಬಿಚ್ಚಿಡ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Everything has limit; Yash fans demanding Yash for his next film update on April 14. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X