ದುನಿಯಾ ವಿಜಯ್ ಮೇಲೆ ಮತ್ತೊಂದು ಕೇಸ್ : ನಿವೃತ್ತ ಯೋಧನಿಗೆ ಕೋಲೆ ಬೆದರಿಕೆ ಆರೋಪ
ನಿನ್ನೆ ರಾತ್ರಿ ನಟ ದುನಿಯಾ ವಿಜಯ್ ರನ್ನ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ, ಇದೀಗ ದುನಿಯಾ ವಿಜಯ್ ಮೇಲೆ ಮತ್ತೊಂದು ಕೇಸ್ ಬೀಳುತ್ತಿದೆ.
ನಿವೃತ್ತ ಯೋಧರೊಬ್ಬರು ದುನಿಯಾ ವಿಜಯ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ವೆಂಕಟೇಶ್ ಎಂಬ ನಿವೃತ್ತ ಯೋಧನ ಬಳಿ ಕಿರಣ್ ನಾಲ್ಕೈದು ಲಕ್ಷ ಹಣ ಪಡೆದಿದ್ದರು. ಕಿರಣ್ ನಟ ದುನಿಯಾ ವಿಜಯ್ ಬಾಮೈದ ಆಗಿದ್ದರು.

ಹಣ ಪಡೆದ ಕಿರಣ್ ಅದನ್ನು ವಾಪಸ್ ನೀಡದೆ ಯಾಮಾರಿಸುತ್ತಿದ್ದರಂತೆ. ಈ ಬಗ್ಗೆ ದುನಿಯಾ ವಿಜಯ್ ಜೊತೆಗೆ ಮಾತನಾಡಲು ಹೋದಾಗಾ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದರು ಹಾಗೂ ಕೋಲೆ ಬೆದರಿಕೆ ಹಾಕಿದರು ಎಂದು ವೆಂಕಟೇಶ್ ಆರೋಪ ಮಾಡಿದ್ದಾರೆ.
ಈ ಘಟನೆ ನಡೆದು 15 ದಿನ ಕಳೆದಿದ್ದು, ಪೊಲೀಸ್ ಠಾಣೆ ದೂರು ನೀಡಲು ವೆಂಕಟೇಶ ಹಿಂದೆಟ್ಟು ಹಾಕಿದ್ದರು. ಆದರೆ, ಈಗ ಕಿಡ್ನಾಪ್ ಪ್ರಕರಣದಲ್ಲಿ ಪೊಲೀಸರು ದುನಿಯಾ ವಿಜಯ್ ಅರೆಸ್ಟ್ ಮಾಡಿದ್ದು, ರಾಜ್ ಗೋಪಾಲ್ ನಗರದ ಪೋಲೀಸರಿಗೆ ಕಂಪ್ಲೈಂಟ್ ನೀಡಲು ಮುಂದಾಗಿದ್ದಾರೆ.
More from Filmibeat
English summary
Ex military man Venkatesh ready to file a complaint against Kannada Actor Duniya Vijay.


Click it and Unblock the Notifications











