»   » ಕಬ್ಬನ್ ಪಾರ್ಕ್ ನಲ್ಲಿ ರಮ್ಯಾ ಮೇಡಂ ವಾಕಿಂಗ್-ಜಾಗಿಂಗ್

ಕಬ್ಬನ್ ಪಾರ್ಕ್ ನಲ್ಲಿ ರಮ್ಯಾ ಮೇಡಂ ವಾಕಿಂಗ್-ಜಾಗಿಂಗ್

Posted By: ಹರಾ
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೇಡಂ ವಿದೇಶದಿಂದ ವಾಪಸ್ ಆಗಿ ಬೆಂಗಳೂರಿನಲ್ಲಿದ್ದಾರೆ. ರಾಜಕೀಯದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಗಾಂಧಿನಗರದ ಕಡೆ ಮುಖ ಮಾಡಿದ್ದಾರೋ, ಇಲ್ವೋ ಗೊತ್ತಿಲ್ಲ. ಆದ್ರೆ ಕಬ್ಬನ್ ಪಾರ್ಕ್ ನಲ್ಲಿ ಮಾತ್ರ ರೌಂಡ್ ಹಾಕ್ತಿದ್ದಾರೆ.

ನಟಿ, ಮಾಜಿ ಸಂಸದೆ ರಮ್ಯಾ ಹೆಲ್ತ್ ಕಾನ್ಶಿಯಸ್. ಪಾಲಿಟಿಕ್ಸ್, ಸಿನಿಮಾ ಅಂತ ಬಿಜಿಯಿದ್ದರೂ, ದಿನಕ್ಕೆ ಒಂದು ಗಂಟೆ ಆದ್ರೂ ವರ್ಕೌಟ್ ಮಾಡ್ತಾರೆ. ಹಾಗಂತ ರಮ್ಯಾ ಜಿಮ್ ಗೆ ಹೋಗ್ತಿಲ್ಲ. ಬದಲಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ಗೆ ವಿಸಿಟ್ ಕೊಡ್ತಿದ್ದಾರೆ.

Ex MP, Actress Ramya spotted Walking and Jogging in Cubbon Park, Bengaluru

ಕಬ್ಬನ್ ಪಾರ್ಕ್ ನಲ್ಲಿ ರಮ್ಯಾ ಮೇಡಂ ವಾಕಿಂಗ್-ಜಾಗಿಂಗ್ ಮಾಡುವ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿದೆ. ವಾಕಿಂಗ್-ಜಾಗಿಂಗ್ ಜೊತೆ ಜೊತೆಗೆ ಜನರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ರಮ್ಯಾ ಖುಷಿ ಪಟ್ಟಿದ್ದಾರೆ. [ನಿನ್ನೆ ಆಟೋ ಏರಿದ್ದ ರಮ್ಯಾ ಇಂದು ಫಾರ್ಚ್ಯುನರ್ ನಲ್ಲಿ ಬಂದ್ರು!]

ಫಿಟ್ನೆಸ್ ಕಾಪಾಡುವ ಪ್ರಯತ್ನದಲ್ಲಿರುವ ರಮ್ಯಾ ಮರಳಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಾರಾ ಅನ್ನುವ ಪ್ರಶ್ನೆಗೆ ಅವರೇ ಉತ್ತರ ನೀಡಬೇಕು.

English summary
Kannada Actress, Ex MP, Congress Politician Ramya aka Divya Spandana is spotted Walking and Jogging in Cubbon Park, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada