twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿ ಅಂತ್ಯಕ್ರಿಯೆ ವೇಳೆ ಡಿಸಿಪಿ ಅಣ್ಣಾಮಲೈ-ನಟಿ ಜಯಪ್ರದ ನಡುವೆ ಮಾತಿನ ವಾರ್

    |

    ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆ ವೇಳೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಮತ್ತು ಮಾಜಿ ಸಂಸದೆ ಬಹುಭಾಷಾ ನಟಿ ಜಯಪ್ರದ ನಡುವೆ ಮಾತಿನ ವಾರ್ ನಡೆದಿರುವುದು ಗೊತ್ತಾಗಿದೆ.

    ಭದ್ರತೆ ದೃಷ್ಟಿಯಿಂದ ಕಂಠೀರವ ಸ್ಟುಡಿಯೋದ ಹೊರೆಗೆ ನಿಂತಿದ್ದ ಡಿಸಿಪಿ ಅಣ್ಣಾಮಲೈ ಅವರ ಮೇಲೆ ನಟಿ ಜಯಪ್ರದ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಯಪ್ರದ ಅವರ ಮಾತಿಗೆ ಕೋಪಗೊಂಡು ಅಣ್ಣಾಮಲೈ ಅವರು ಕೂಡ ಗಟ್ಟಿ ಧ್ವನಿಯಲ್ಲಿ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

    ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ

    ಶನಿವಾರ ರಾತ್ರಿಯಿಂದ ಸತತವಾಗಿ ಅಭಿಮಾನಿಗಳನ್ನ ನಿಯಂತ್ರಿಸುವಲ್ಲಿ ನಿರತರಾಗಿದ್ದ ಪೊಲೀಸರು ಅಂಬಿಯ ಅಂತ್ಯಕ್ರಿಯೆಯನ್ನ ಯಶಸ್ವಿಯಾಗಿ ನಡೆಸಲು ಅನುವು ಮಾಡಿಕೊಟ್ಟಿದ್ದರು. ಇದಕ್ಕಾಗಿ ಸ್ವತಃ ಮುಖ್ಯಮಂತ್ರಿ ಅವರೇ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದ್ರೆ, ಜಯಪ್ರದ ಮತ್ತು ಅಣ್ಣಾಮಲೈ ನಡುವೆ ಆಗಿರುವ ಈ ಘಟನೆ ಈಗ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ, ಅಲ್ಲಿ ಆಗಿದ್ದೇನು.?

    ಅಂದು ಸಂಜೆ ಆಗಿದ್ದೇನು.?

    ಅಂದು ಸಂಜೆ ಆಗಿದ್ದೇನು.?

    ಯಾವುದೇ ಅಹಿತಕರ ಘಟನೆಗಳು ನಡೆಯದೇ ಅಂಬರೀಶ್ ಅಂತ್ಯಕ್ರಿಯೆ ಮುಗಿದಿತ್ತು. ನಂತರ ಅಭಿಮಾನಿಗಳು, ಸೆಲೆಬ್ರಿಟಿಗಳು ಅಲ್ಲಿಂದ ವಾಪಸ್ ಆಗಲು ಮುಂದಾದರು. ಈ ವೇಳೆ ಅಭಿಮಾನಿಗಳ ಹಿಂಡು ಗೇಟ್ ಬಳಿ ನೂಕುನುಗ್ಗುಲು ಉಂಟು ಮಾಡಿತ್ತು. ಆ ಸಮಯಕ್ಕೆ ಅಲ್ಲಿಗೆ ಬಂದ ಜಯಪ್ರದ ಅವರನ್ನ ಅಣ್ಣಾಮಲೈ ತಡೆದರು.

    ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್

    ಸ್ವಲ್ಪವೊತ್ತು ಕಾರಿನಲ್ಲಿ ಇರಲು ಸೂಚನೆ

    ಸ್ವಲ್ಪವೊತ್ತು ಕಾರಿನಲ್ಲಿ ಇರಲು ಸೂಚನೆ

    ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಿದ್ದರಿಂದ ಏನಾದರೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಅಣ್ಣಾಮಲೈ ಅವರು, ಜಯಪ್ರದ ಅವರನ್ನ ಕಾರಿನಲ್ಲಿ ಇರಲು ಸೂಚಿಸಿದರು ಎನ್ನಲಾಗಿದ್ದು, ಇದರಿಂದ ಬೇಸರಗೊಂಡ ಜಯಪ್ರದ ಅಣ್ಣಾಮಲೈ ಅವರ ಬಳಿ ಮಾತಿಗಿಳಿದಿದ್ದಾರೆ.

    ವರ್ಷದ ವ್ಯಕ್ತಿ: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

    ಅಣ್ಣಾಮಲೈ ವಿರುದ್ಧ ಬೇಸರ

    ಅಣ್ಣಾಮಲೈ ವಿರುದ್ಧ ಬೇಸರ

    ಈ ಮಧ್ಯೆ ಇವರಿಬ್ಬರ ನಡುವೆ ಏನಾಯಿತೋ ಎಂಬುದನ್ನ ಗಮನಿಸುವಷ್ಟರಲ್ಲಿ ಅಣ್ಣಾಮಲೈ ಅವರ ಮೇಲೆ ಕೋಪಗೊಂಡು ಬಹುಭಾಷಾ ನಟಿ ಜಯಪ್ರದ ರೇಗಾಡಿದ್ದಾರೆ. 'ನನ್ನ ಹೆಸರು ಅಣ್ಣಾಮಲೈ, ನಿಮ್ಮಿಂದ ಏನೂ ಆಗುತ್ತೋ ಮಾಡ್ಕೊಳಿ ಎಂದು' ಅಣ್ಣಾಮಲೈ ಹೇಳಿರುವುದು. ಇದರಿಂದ ಮತ್ತಷ್ಟು ಕೋಪಗೊಂಡ ಜಯಪ್ರದ ''ನಾನು ಮಾಜಿ ಸಂಸದೆ, ಅದಕ್ಕೂ ಮಿಗಿಲಾಗಿ ನಾನು ಒಬ್ಬ ಮಹಿಳೆಗೆ ರಕ್ಷಣೆ, ನನಗೆ ಕೊಡೋಕೆ ಬೇಕು' ಎಂದು ಕೂಗಾಡಿದ್ದಾರೆ. ಈ ವಿಡಿಯೋಈಗ ಎಲ್ಲೆಡೆ ವೈರಲ್ ಆಗಿದೆ.

    ನಿಜಕ್ಕೂ ನಡೆದಿದ್ದೇನು.?

    ನಿಜಕ್ಕೂ ನಡೆದಿದ್ದೇನು.?

    ಅಂದ್ಹಾಗೆ, ನಿನ್ನೆ ಸಂಜೆ ಅಲ್ಲಿ ಆಗಿದ್ದೇನು ಎಂಬುದರ ಬಗ್ಗೆ ಪೂರ್ತಿ ವಿವರ ಸಿಕ್ಕಿಲ್ಲ. ಬಟ್, ಅಣ್ಣಾಮಲೈ ಮತ್ತು ಜಯಪ್ರದ ವಾಗ್ವಾದ ನಡೆಸಿರುವ ವಿಡಿಯೋ ಮಾತ್ರ ಈಗ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು, ಯಾರದು ತಪ್ಪು, ಯಾರದು ಸರಿ ಎಂದು ಕಾಮೆಂಟ್ ಹಾಕ್ತಿದ್ದಾರೆ.

    ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..

    ಪೊಲೀಸರಿಗೆ ಧನ್ಯವಾದ ಹೇಳಲೇಬೇಕು

    ಪೊಲೀಸರಿಗೆ ಧನ್ಯವಾದ ಹೇಳಲೇಬೇಕು

    ಅದೇನೇ ಆಗಿದ್ದರೂ, ಬೆಂಗಳೂರು ಪೊಲೀಸರಿಗೂ ಹಾಗೂ ಮಂಡ್ಯ ಪೊಲೀಸರಿಗೆ ಧನ್ಯವಾದ ಹೇಳಲೇಬೇಕು. ಶನಿವಾರ, ಭಾನುವಾರ ಮತ್ತು ಸೋಮವಾರ ಸತತ ಮೂರು ದಿನಗಳ ಕಾಲ, ಅಂಬರೀಶ್ ಅವರ ನಿವಾಸ, ಕಂಠೀರವ ಸ್ಟುಡಿಯೋ, ಮಂಡ್ಯ ಸ್ಟೇಡಿಯಂ ಎಲ್ಲಾ ಕಡೆಯೂ ಕಟ್ಟುನಿಟ್ಟಾಗಿ ಭದ್ರತೆ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದ್ದಾರೆ. ಇದಕ್ಕಾಗಿ ಗೃಹಿ ಇಲಾಖೆಗೆ ಜನರು ಕೂಡ ಥ್ಯಾಂಕ್ಸ್ ಹೇಳಿದ್ದಾರೆ.

    English summary
    Ex Mp and actress jayaprada express unhappiness over bangalore south dcp annamalai during ambareesh funeral. ದ
    Tuesday, November 27, 2018, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X