54 ವರ್ಷದ ಮಾಜಿ ಸಿಎಂ ಜೊತೆ ಸದ್ದಿಲ್ಲದೇ ಮದುವೆಯಾದ 'ಟಗರು' ಕಾನ್‌ಸ್ಟೇಬಲ್ ಸರೋಜಾ ; ತ್ರಿವೇಣಿ ರಾವ್ ಗಂಡನ ಮೊದಲ ಪತ್ನಿ ಯಾರು?

ಸಿನಿಮಾ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರರಂಗದ ಹಲವು ತಾರೆಯರು ರಾಜಕೀಯದ ಅಖಾಡಕ್ಕೆ ಧುಮುಕಿದ್ದಾರೆ. ಮತ್ತೂ ಕೆಲವರು ಬಣ್ಣದ ಲೋಕದ ಬೆಡಗಿಯರ ಅಂದ ಚೆಂದಕ್ಕೆ ಮನ ಸೋತು ಮದುವೆಯಾಗಿದ್ದಾರೆ.

ಉದಾಹರಣೆಗೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ. ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್. ನವನೀತ್ ಕೌರ್ ಮತ್ತು ರವಿ ರಾಣಾ. ಆಯೆಷಾ ಟಾಕಿಯಾ ಮತ್ತು ಫರ್ಹಾನ್ ಅಜ್ಮಿ. ಇನ್ನು ಕನ್ನಡದಲ್ಲಿ ಕೂಡ ಖ್ಯಾತ ನಾಯಕಿ ಮಾಜಿ ಮುಖ್ಯಮಂತ್ರಿ ಅವರನ್ನು ಮದುವೆಯಾಗಿದ್ದಾರೆ. ಅವರು ಯಾರು ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರವೇ. ಸದ್ಯ ಈ ಸಾಲಿಗೆ ''ಟಗರು'' ಚೆಲುವೆ ತ್ರಿವೇಣಿ ಕೂಡ ಸೇರಿಕೊಂಡಿದ್ದಾರೆ ಎನ್ನುವುದೇ ಈ ಕ್ಷಣದ ಬ್ರೇಕಿಂಗ್ ನ್ಯೂಸ್.

Age No Bar 54-Year-Old Ex-Tripura CM Biplab Kumar Deb Weds Kannada Star Triveni Rao

ಹೌದು, ತ್ರಿವೇಣಿ ರಾವ್ .. ಆಗಲೇ ಹೇಳಿದಂತೆ ''ಟಗರು'' ಚೆಲುವೆ. ಈ ಚಿತ್ರದಲ್ಲಿ ''ಕಾನ್ಸ್‌ಟೇಬಲ್ ಸರೋಜಾ'' ಪಾತ್ರವನ್ನು ಮಾಡುವ ಮೂಲಕ ಬೆಳಗಿನ ಪ್ರದರ್ಶನ ಮುಗಿದು ಮ್ಯಾಟ್ನಿ ಶೋ ಆರಂಭವಾಗುವ ಹೊತ್ತಿಗೆ ಕರುನಾಡಿನಲ್ಲಿ ಮನೆ ಮಾತಾದವರು ಇವರು.

''ಟಗರು'' ಬಂದ ನಂತರ ಇವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತು ಅಂದರೆ ''ಟಗರು''ದಲ್ಲಿನ ಚಿಟ್ಟೆ, ಅಂಕಲ್ ಪಾತ್ರವನ್ನು ದ್ವೇಷಿಸಿದರು ಡಾಲಿ ಸುಮ್ಮನೆ ಇರುತ್ತಾನೆ. ಆದರೆ 'ಕಾನ್ಸ್ ಟೇಬಲ್ ಸರೋಜ'ಗೆ ಏನಾದರೂ ಹೇಳಿದರೆ ಡಾಲಿ ಲಾಂಗ್ ಹಿಡಿದು ಬರುತ್ತಾನೆ ಎಂದೆಲ್ಲಾ ಜನ ಇವರನ್ನು ಕೊಂಡಾಡಿದರು. ಡಾಲಿ ಹೇಳುವ ಡೈಲಾಗ್ ಶೈಲಿಯಲ್ಲಿ ಹೊಡಿತಿನಿ.. ಕಾನ್ಸ್ ಟೇಬಲ್ ಸರೋಜ ಮೇಲೆ ಕಣ್ಣು ಹಾಕಿದರೆ ಹೊಡಿತಿನಿ ಎಂದು ಡೈಲಾಗ್ ಎಲ್ಲ ಹೇಳಿ ಹಲವಾರು ಪಡ್ಡೆ ಹೈಕ್ಳು ಸಂಭ್ರಮ ಪಟ್ಟಿದ್ದರು.

Age No Bar 54-Year-Old Ex-Tripura CM Biplab Kumar Deb Weds Kannada Star Triveni Rao

ಆದರೆ, ದುರಾದೃಷ್ಟವಶಾತ್ ಸಿಕ್ಕ ಈ ನೇಮ್-ಫೇಮ್‌ದಿಂದ ಮುಂದೆ ಅವಕಾಶಗಳ ಹೆಬ್ಬಾಗಿಲು ತೆರೆಯಿತಾದರೂ ಅದೃಷ್ಟ ಖುಲಾಯಿಸಲಿಲ್ಲ. ಇದಕ್ಕೆ ಪುರಾವೆ ಎಂಬಂತೆ '' ಅಲ್ಲೇ ಡ್ರಾ ಅಲ್ಲೇ ಬಹುಮಾನ''.. ''Once Upon a Time In ಜಮಾಲಿಗುಡ್ಡ''.. ''ರಾಜ ಮಾರ್ತಾಂಡ''.. ಸೇರಿ ಹಲವು ಚಿತ್ರಗಳನ್ನು ಮಾಡಿದರು ಕೂಡ ಇವರಿಗೆ ಸಿಗಬೇಕಾದ ಗೆಲುವು ಸಿಗಲಿಲ್ಲ. ಕೊನೆಗೆ ತಮ್ಮ ಹೆಸರನ್ನು ರುಷಿಕಾ ರಾಜ್ ಎಂದು ಕೂಡ ಇವರು ಬದಲಿಸಿಕೊಂಡರು. ಆದರೆ, ವ್ಯತ್ಯಾಸವೇನು ಆಗಲಿಲ್ಲ.

ಇಂಥಾ ತ್ರಿವೇಣಿ ರಾವ್ ಅಲಿಯಾಸ್ ರುಷಿಕಾ ರಾಜ್ ಸದ್ಯ ಸದ್ದಿಲ್ಲದೇ ಮದುವೆಯಾಗಿದ್ದಾರೆ. ಈ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದಾರೆ. ವಿಶೇಷ ಅಂದರೆ ಇವರನ್ನು ಮದುವೆಯಾದ ವ್ಯಕ್ತಿ ಸಾಮಾನ್ಯದವರಲ್ಲ. ಬದಲಿಗೆ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ. ಇವರ ಹೆಸರು ಬಿಪ್ಲಬ್ ಕುಮಾರ್ ದೇವ್. ಮಾಧ್ಯಮಗಳಲ್ಲಿ ವರದಿಯಾದಂತೆ ಇವರಿಗೆ ಈಗ 54ರ ಹರೆಯ.

ಎಲ್ಲಿಯ ಬಿಪ್ಲಬ್ ಕುಮಾರ್ ದೇವ್..? ಎಲ್ಲಿಯ ಕರುನಾಡಿನ ತ್ರಿವೇಣಿ ರಾವ್..? ಇಬ್ಬರ ಪರಿಚಯ ಆಗಿದ್ದು ಎಲ್ಲಿ..? ಪ್ರೇಮಾಂಕುರವಾಗಿದ್ಹೇಗೆ..? ಸಹಜವಾಗಿ ತ್ರಿವೇಣಿ ರಾವ್ ಅವರ ಗುಪ್ತ್ ಮದುವೆಯ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಹಲವರಲ್ಲಿ ಮನೆ ಮಾಡಿರುವ ಪ್ರಶ್ನೆಗಳಿವು. ಸದ್ಯ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ತ್ರಿವೇಣಿ ರಾವ್ ಸಾಮಾಜಿಕ ಜಾಲತಾಣದಿಂದ ಕಣ್ಮರೆಯಾಗಿದ್ದಾರೆ. ಆದರೆ, ಇವರ ಮದುವೆಯ ಫೋಟೊಗಳು ಮಾತ್ರ ಅದೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಿಪ್ಲಬ್ ದೇವ್ ಹಿನ್ನೆಲೆ

ರಾಜಕೀಯದಲ್ಲಿ ಮುಖ್ಯಮಂತ್ರಿಯ ಗದ್ದುಗೆ ಏರುವ ಮೊದಲು ದೆಹಲಿಯಲ್ಲಿ ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು ಬಿಪ್ಲಬ್ ದೇವ್. ದೇಹ ದಂಡಿಸುವ ಕಲೆಯನ್ನು ಎಲ್ಲರಿಗೆ ಹೇಳಿ ಕೊಡುತ್ತಲೇ ಬಿಜೆಪಿ ಸಂಸದರು ಮತ್ತು ಆಪ್ತ ಸಹಾಯಕರ ಜೊತೆ ಗುರುತಿಸಿಕೊಳ್ಳಲು ಶುರು ಮಾಡಿದ ಬಿಪ್ಲಬ್ ದೇವ್ ಅವರನ್ನು ತ್ರಿಪುರಾ ಬಿಜೆಪಿ 2016ರಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿತ್ತು.

ಎಡಪಕ್ಷಗಳ ಭದ್ರಕೋಟೆ ಛಿದ್ರ ಮಾಡಿದ್ದ ಬಿಪ್ಲಬ್

ತ್ರಿಪುರಾದಲ್ಲಿ ಹಲವು ವರ್ಷಗಳ ವರೆಗೆ ಇದ್ದ ಎಡಪಕ್ಷಗಳ ಭದ್ರಕೋಟೆಯನ್ನು ಛಿದ್ರ ಮಾಡಿದ್ದು ಇದೇ ಬಿಪ್ಲಬ್ ದೇವ್. 2018ರ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಚಾಕ್ಯಚಕ್ಯತೆ ಮತ್ತು ರಣತಂತ್ರದಿಂದ ಎಡಪಕ್ಷಗಳಿಗೆ ಮಣ್ಣು ಮುಕ್ಕಿಸಿದ್ದ ಬಿಪ್ಲಬ್ ದೇವ್ ಮುಖ್ಯಮಂತ್ರಿಯಾಗಿ ಅಧಿಕಾರ ಕೂಡ ವಹಿಸಿಕೊಂಡರು. ಆದರೆ. 2022ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅನಿವಾರ್ಯವಾಗಿ ಇವರು ಹೊರ ನಡೆಯಬೇಕಾಯ್ತು.

ಮಾಜಿ ಮುಖ್ಯಮಂತ್ರಿಯ ಎರಡನೇ ಹೆಂಡ್ತಿಯಾದ ಕಾನ್‌ಸ್ಟೇಬಲ್ ಸರೋಜಾ

ಅಂದ್ಹಾಗೇ ''ಎಬಿಪಿ ನ್ಯೂಸ್'' ವರದಿಯ ಪ್ರಕಾರ ದೆಹಲಿಯಲ್ಲಿ ಜಿಮ್ ಟ್ರೇನರ್ ಆಗಿದ್ದಾಗ ಬಿಪ್ಲಬ್ ದೇವ್ ಅವರಿಗೆ ಜಿಮ್‌ನಲ್ಲಿ ಕಸರತ್ತು ಮಾಡಲು ಬರುತ್ತಿದ್ದ ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ನೀತಿ ದೇವ್ ಜೊತೆ ಮದುವೆಯಾಗಿದ್ದರು. ಇವರು ಹುಟ್ಟಿನಿಂದಲೇ ಆಗರ್ಭ ಶ್ರೀಮಂತರು. ನೀತಿ ಮತ್ತು ಬಿಪ್ಲಬ್ ಸಾಂಸಾರಿಕ ಜೀವನಕ್ಕೆ ಸಾಕ್ಷಿಯಾಗಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ. 20 ವರ್ಷಗಳ ಕಾಲ ಜೊತೆಯಾಗಿ ಬದುಕಿದ ಇಬ್ಬರ ದಾಂಪತ್ಯ ಜೀವನ ಕೆಲ ವರ್ಷದ ಹಿಂದೆ ಅಂತ್ಯವಾಗಿತ್ತು. ಅಲ್ಲಿಂದ ಏಕಾಂಗಿಯಾಗಿದ್ದ ಬಿಪ್ಲಬ್ ದೇವ್ ಬದುಕಿನಲ್ಲಿ ಈಗ ತ್ರಿವೇಣಿ ರಾವ್ ಅವರ ಪ್ರವೇಶ ಆಗಿದೆ.


ಮದುವೆಯಾಗಿದ್ದು ಯಾವಾಗ ?

ಮಾಧ್ಯಮಗಳ ವರದಿಯ ಪ್ರಕಾರ ಜೂನ್ 19ರಂದು ಬಿಪ್ಲಬ್ ದೇವ್ ಮತ್ತು ತ್ರಿವೇಣಿ ರಾವ್ ಸರಳವಾಗಿ ಮದುವೆಯ ಬಂಧನಕ್ಕೊಳಗಾಗಿದ್ದಾರೆ. ತುಂಬಾನೇ ರಹಸ್ಯವಾಗಿ ನಡೆದ ಈ ಮದುವೆಯಲ್ಲಿ ಕೇವಲ ಇವರ ಆಪ್ತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. ಜೂನ್ 24 ರಂದು ಅಗರ್ತಲಾದ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಬಿಜೆಪಿಯ ಹಿರಿಯ ನಾಯಕರು, ಸಚಿವರು ಮತ್ತು ಬಾಲಿವುಡ್‌ನ ಹಲವು ತಾರೆಯರು ಬಂದು ನವ ಜೋಡಿಗೆ ಶುಭ ಕೋರಲಿದ್ದಾರೆ.

English summary
Age no bar! 54-year-old politician Biplab Kumar Deb marries Kannada star Triveni Rao in a low-profile ceremony. Check out the shocking viral wedding pictures inside.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X