»   » ಎಕ್ಸ್ ಕ್ಲೂಸಿವ್: ಬಿಗ್ ಬಾಸ್ ಸಂಜನಾ ಮನಗೆದ್ದ ಆ ಹುಡುಗ ಯಾರು, ಆತನ ಹಿನ್ನಲೆ ಏನು.?

ಎಕ್ಸ್ ಕ್ಲೂಸಿವ್: ಬಿಗ್ ಬಾಸ್ ಸಂಜನಾ ಮನಗೆದ್ದ ಆ ಹುಡುಗ ಯಾರು, ಆತನ ಹಿನ್ನಲೆ ಏನು.?

Posted By:
Subscribe to Filmibeat Kannada

ಸಿನಿಮಾ ಸ್ಟಾರ್ ಗಳು ಮದುವೆ ಆಗ್ತಿದ್ದಾರೆ ಅಂದ್ರೆ ಸಾಮಾನ್ಯವಾಗಿ ಚಿತ್ರ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಯಾರನ್ನ ಮದುವೆ ಆಗ್ತಾರೆ ಎನ್ನುವ ಸಣ್ಣದಾದ ಕುತೂಹಲ ಇದ್ದೇ ಇರುತ್ತೆ. ಮದುವೆ ಆಗುತ್ತಿರುವ ಹುಡುಗ ಅಥವಾ ಹುಡುಗಿ ಇವರೇ ಅನ್ನೋದು ಗೊತ್ತಾದ ನಂತರ ಲವ್ ಹೇಗೆ ಆಯ್ತು, ಇಂತಹ ಸಾಕಷ್ಟು ಪ್ರಶ್ನೆಗಳು ತಲೆಯಲ್ಲಿ ಓಡೋದಕ್ಕೆ ಶುರುವಾಗುತ್ತೆ.

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮದುವೆಗಳ ಸಂಭ್ರಮ ಹೆಚ್ಚಾಗಿದೆ. ಕಲಾವಿದರು ಸೇರಿದಂತೆ ನಿರ್ದೇಶಕರು ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ರಿಯಾಲಿಟಿ ಶೋ ಮೂಲಕ ಫೇಮಸ್ ಆಗಿದ್ದ ನಟಿ ಸಂಜನಾ ಚಿದಾನಂದ್ ಮದುವೆ ಆಗಲು ತಯಾರಿ ನಡೆಸಿದ್ದಾರೆ. ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಟಿ ಸಂಜನಾ ಮದುವೆ ಆಗುವ ಹುಡುಗ ಯಾರು? ಇಬ್ಬರ ಮಧ್ಯೆ ಲವ್ ಹೇಗಾಯ್ತು.? ಇವೆಲ್ಲದರ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ...

ಸ್ನೇಹಿತನೇ ಈಗ ಬಾಳ ಗೆಳೆಯ

'ಬಿಗ್ ಬಾಸ್' ಸಂಜನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಗೌರವ್ ರಾಯ್. ಮೂರು ವರ್ಷದ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಸಂಜನಾ, ಗೌರವ್ ರಾಯ್ ರನ್ನ ಭೇಟಿ ಮಾಡಿದ್ದರು.

ಬಿಗ್ ಬಾಸ್ ಶೋ ಹೋಗುವ ಮುಂಚೆಯೇ ಲವ್

ಮೂರು ವರ್ಷಗಳಿಂದ ಸ್ನೇಹಿತರಾಗಿದ್ದ ಗೌರವ್ ಹಾಗೂ ಸಂಜನಾ ಈಗ ಪ್ರೇಮಿಗಳಾಗಿದ್ದಾರೆ. ಕಳೆದ ವರ್ಷ ಬಿಗ್ ಬಾಸ್ ಗೆ ಹೋಗುವ ಒಂದು ದಿನದ ಹಿಂದೆ ಗೌರವ್ ರಾಯ್ ಸಂಜನಾರಿಗೆ ಪ್ರಪೋಸ್ ಮಾಡಿದ್ದಾರೆ. ಸಾಕಷ್ಟು ದಿನಗಳಿಂದ ಗೊತ್ತಿದ್ದ ಸ್ನೇಹಿತನ ಪ್ರೇಮ ನಿವೇದನೆಯನ್ನ ಸಂಜನಾ ಕೂಡ ಒಪ್ಪಿಕೊಂಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯ ನಂಟು

ಸ್ಟಾರ್ ಸುವರ್ಣ ವಾಹಿನಿಯಿಂದ ಪರಿಚಯವಾದ ಗೌರವ್, ಸದ್ಯ ಸ್ಟಾರ್ ಸುವರ್ಣದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರಿಂಗ್ ಓದಿರುವ ಗೌರವ್ ಕಲ್ಕತ್ತಾ ಮೂಲದವರು.

ಬೆಂಗಳೂರಿನಲ್ಲಿ ನೆಲೆಸಿರುವ ಗೌರವ್

ಗೌರವ್ ತಂದೆ ತಾಯಿ ಇಬ್ಬರೂ ವೈದ್ಯರು. ತಾಯಿ ಸ್ತ್ರೀ ರೋಗ ತಜ್ಞೆಯಾಗಿದ್ದು, ತಂದೆ ಶಿಶು ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಗೌರವ್ ಬೆಂಗಳೂರಿನ ಆರ್.ಆರ್.ನಗರದಲ್ಲಿ ವಾಸವಿದ್ದಾರೆ. ಸದ್ಯ ಇಬ್ಬರ ಪ್ರೀತಿಗೆ ಪೋಷಕರು ಅಸ್ತು ಎಂದಿದ್ದು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ.

English summary
Read the Exclusive Information about Sanjana's husband to be Gaurav Roy.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada