For Quick Alerts
  ALLOW NOTIFICATIONS  
  For Daily Alerts

  'ಜೇಮ್ಸ್' ತಂಡದಿಂದ ಬಂತು ಸೂಪರ್ ಫೋಟೋ; ಅಪ್ಪು ಜೊತೆ ಯಾರೆಲ್ಲ ಇದ್ದಾರೆ?

  |

  ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಜೇಮ್ಸ್ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು ಲಾಕ್ ಡೌನ್ ಮುಗಿಸಿ ಜುಲೈ 5 ರಿಂದ ಮತ್ತೆ ಪುನೀತ್ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.

  ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಸಿನಿಮಾದ ಹೈವೋಲ್ಟೇಜ್ ಆಕ್ಷನ್ ದೃಶ್ಯ ಸೇರಿದಂತೆ ಟಾಕಿ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ಸಿನಿಮಾಗೆ ನಟ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿದ್ದೀರಿ.

  ಇದೀಗ ಜೇಮ್ಸ್ ನಿಂದ ಮತ್ತೊಂದು ಸಂತಸದ ವಿಚಾರ ಅಭಿಮಾನಿಗಳಿಗೆ ಸಿಕ್ಕಿದೆ. ಪುನೀತ್ ಜೊತೆ ಇಡೀ ಜೇಮ್ಸ್ ತಂಡ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಔಟ್ ಆಗಿದ್ದು, ಅಪ್ಪು ಅಭಿಮಾನಿ ಬಳಗದಲ್ಲಿ ಈ ಫೋಟೋ ವೈರಲ್ ಆಗಿದೆ. ಜೇಮ್ಸ್ ಸೆಟ್ ನಲ್ಲಿ ಎಲ್ಲರೂ ಪುನೀತ್ ಜೊತೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದೆ.

  ಅಂದಹಾಗೆ ಫೋಟೋದಲ್ಲಿ ಪವರ್ ಸ್ಟಾರ್ ಜೊತೆ ಕಾಮಿಡಿ ಸ್ಟಾರ್ ಚಿಕ್ಕಣ್ಣ, ನಟ ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ ಇದ್ದಾರೆ. ಎಲ್ಲರೂ ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್, ಚಿಕ್ಕಣ್ಣ ಹೆಗಲ ಮೇಲೆ ಕೈ ಹಾಕಿ ನಿಂತಿದ್ದಾರೆ.

  ಇನ್ನು ನಟಿ ಶೈನ್ ಶೆಟ್ಟಿ ಇದುವರೆಗೂ ಪವರ್ ಸ್ಟಾರ್ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದರು. ಇದೀಗ ಮೊದಲ ಬಾರಿಗೆ ಚಿತ್ರೀಕರಣ ಸೆಟ್ ನಲ್ಲಿ ಭೇಟಿಯಾಗಿ ಸಂತಸ ಪಟ್ಟಿದ್ದಾರೆ. ಬಹುನಿರೀಕ್ಷೆಯ ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಎರಡನೇ ಬಾರಿ ಪುನೀತ್ ಜೊತೆ ನಟಿಸುತ್ತಿದ್ದಾರೆ.

  Recommended Video

  KGF 2 ಮೊದಲ ಶೋ ಟಿಕೆಟ್ ಕೊಡ್ತೀನಂದ್ರು ಪ್ರಶಾಂತ್ ನೀಲ್ : ಯಾರಿಗೆ ಯಾಕೆ ?

  ಇನ್ನು ಉಳಿದಂತೆ ಸಿನಿಮಾದಲ್ಲಿ ಅನು ಪ್ರಭಾಕರ್, ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಅಪ್ಪು ದ್ವಿತ್ವ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದ್ವಿತ್ವ ಸಿನಿಮಾ ಈಗಾಗಲೇ ಪೋಸ್ಟರ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮೊದಲ ಬಾರಿಗೆ ಪವನ್ ಮತ್ತು ಪುನೀತ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾವಿದು.

  English summary
  Exclusive Pic Released from Puneeth Rajkumar's James Shooting Set.
  Friday, July 23, 2021, 18:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X