twitter
    For Quick Alerts
    ALLOW NOTIFICATIONS  
    For Daily Alerts

    James Box Office Collection : 'ಜೇಮ್ಸ್' 100 ಕೋಟಿ ಕ್ಲಬ್ ಸೇರಿದ್ದೇಗೆ? ಎಲ್ಲೆಲ್ಲಿ? ಎಷ್ಟೆಷ್ಟು?

    |

    'ಜೇಮ್ಸ್' ಸಿನಿಮಾ ಮಾರ್ಚ್ 17ರಂದು ತೆರೆಕಂಡು ವರ್ಲ್ಡ್ ವೈಡ್ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ಯ, ಹೊರ ರಾಜ್ಯ, ವಿದೇಶಗಳಲ್ಲೂ ಪುನೀತ್ ಅಭಿನಯದ 'ಜೇಮ್ಸ್' ಸಿನಿಮಾ ರಿಲೀಸ್ ಆಗಿದ್ದು, ಕಲೆಕ್ಷನ್ ವಿಚಾರದಲ್ಲಿ ಭಾರೀ ಸದ್ದು ಮಾಡಿದೆ.

    ಹೌದು ರಿಲೀಸ್‌ಗೂ ಮುನ್ನವೇ 'ಜೇಮ್ಸ್' ಚಿತ್ರದ ಥಿಯೇಟರ್ ಲಿಸ್ಟ್, ಶೋ ಲಿಸ್ಟ್ ನೋಡಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈ ಸಿನಿಮಾ ಊಹೆಗೂ ಮೀರಿ ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಂಡಿದೆ.

    James Day 1 Box Office Collection: 'ಜೇಮ್ಸ್' ಸಿನಿಮಾದ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ!James Day 1 Box Office Collection: 'ಜೇಮ್ಸ್' ಸಿನಿಮಾದ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ!

    ಚಿತ್ರ ರಿಲೀಸ್‌ ಆದ ದಿನ ಅಂದರೇ ಮಾರ್ಚ್ 17ರಂದು 'ಜೇಮ್ಸ್' ಸಿನಿಮಾದ ಕಲೆಕ್ಷನ್ ಕರ್ನಾಟಕದಲ್ಲಿ 32 ಕೋಟಿ ಎಂದು ವರದಿಯಾಗಿದೆ. ಇದೀಗ ಎರಡನೇ ದಿನದ ಲೆಕ್ಕಾಚಾರ ಭಾರೀ ಸುದ್ದಿಯಾಗಿದ್ದು, ಇಡೀ ವಿಶ್ವದಾದ್ಯಂತ 'ಜೇಮ್ಸ್' ಸಿನಿಮಾದ ಕಲೆಕ್ಷನ್ 100 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ.

    ನಿರ್ಮಾಪಕ ಕಿಶೋರ್ ಪಾತಿಕೊಂಡ ಹೇಳಿದ್ದು ಏನು?

    ನಿರ್ಮಾಪಕ ಕಿಶೋರ್ ಪಾತಿಕೊಂಡ ಹೇಳಿದ್ದು ಏನು?

    'ಜೇಮ್ಸ್' ಸಿನಿಮಾದ ಒಟ್ಟಾರೆ ಕಲೆಕ್ಷನ್ ಅನ್ನು ಬಿಚ್ಚಿಡೋದು ಕಷ್ಟವೇ ಸರಿ. ಇದೀಗ 'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪಾತಿಕೊಂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಲೆಕ್ಷನ್ ಬಗ್ಗೆ ಮಾತನಾಡಿರುವ ಅವರು 'ಜೇಮ್ಸ್' ಲೆಕ್ಕಾಚಾರವನ್ನು ಬಿಚ್ಚಿಡಲು ಈಗಲೇ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಮೊದಲೆರಡು ದಿನದಲ್ಲೇ 'ಜೇಮ್ಸ್' ವಿಶ್ವದಾದ್ಯಂತ 100 ಕೋಟಿ ಕ್ಲಬ್ ಸೇರಿರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. 100 ಕೋಟಿ ಕ್ಲಬ್ ಸೇರಿದ್ರೂ, ಸೇರಿರಬಹುದು ಎಂದು ಹೇಳಿದ್ದಾರೆ. ಅತ್ತ 100 ಕೋಟಿ ಕಲೆಕ್ಷನ್ ವಿಚಾರವನ್ನು ತಳ್ಳಿಯೂ ಹಾಕದೇ, ಇತ್ತ ಒಪ್ಪಿಯೂ ಕೊಳ್ಳದ ಕಿಶೋರ್ ಆದಷ್ಟು ಬೇಗ ಸಿನಿಮಾದ ಕಲೆಕ್ಷನ್ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

    James Movie: 'KGF 2' ಮತ್ತು 'ಬೀಸ್ಟ್' ಚಿತ್ರವನ್ನು ಹಿಂದಿಕ್ಕಿದ 'ಜೇಮ್ಸ್', ಯಾವ ವಿಚಾರದಲ್ಲಿ ಗೊತ್ತಾ?James Movie: 'KGF 2' ಮತ್ತು 'ಬೀಸ್ಟ್' ಚಿತ್ರವನ್ನು ಹಿಂದಿಕ್ಕಿದ 'ಜೇಮ್ಸ್', ಯಾವ ವಿಚಾರದಲ್ಲಿ ಗೊತ್ತಾ?

     'ಜೇಮ್ಸ್' ಎರಡನೇ ದಿನದ ಕಲೆಕ್ಷನ್ ಎಷ್ಟು?

    'ಜೇಮ್ಸ್' ಎರಡನೇ ದಿನದ ಕಲೆಕ್ಷನ್ ಎಷ್ಟು?

    ಒಂದು ಮೂಲಗಳ ಪ್ರಕಾರ 'ಜೇಮ್ಸ್' ರಿಲೀಸ್ ಆದ ಮೊದಲ ದಿನವೇ ಕರ್ನಾಟಕದಲ್ಲಿ 32 ಕೋಟಿ ಕಲೆಕ್ಷನ್ ಮಾಡಿದೆ. 'ಜೇಮ್ಸ್' ಎರಡನೇ ದಿನದ ಕಲೆಕ್ಷನ್ ಬಗ್ಗೆ ಈಗ ಚರ್ಚೆಗಳು ಆರಂಭವಾಗಿದೆ. ಹೀಗಾಗಿ ಮೊದಲ ಮತ್ತು ಎರಡನೇ ದಿನದ ಒಟ್ಟು ಗಳಿಕೆ ಲೆಕ್ಕ ಹಾಕಿದರೆ ವಿಶ್ವದಾದ್ಯಂತ 100 ಕೋಟಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲವಾದರೂ, 'ಜೇಮ್ಸ್' ಚಿತ್ರದ ವರ್ಲ್ಡ್ ವೈಡ್ ಕಲೆಕ್ಷನ್ 100 ಕೋಟಿ ಎಂದು ಹೇಳುತ್ತಿವೆ.

    100 ಕೋಟಿ ಕಲೆಕ್ಷನ್ ಆಗಿದ್ದೇಗೆ?

    ಇನ್ನೊಂದು ಮೂಲದ ಪ್ರಕಾರ 'ಜೇಮ್ಸ್' 100 ಕೋಟಿ ಕಲೆಕ್ಷನ್ ಮಾಡಿದ್ದು ಹೇಗೆ ಎಂಬುದನ್ನು ಹೇಳುತ್ತಿದೆ. 2ನೇ ದಿನದ ಸಂಪೂರ್ಣ ಗಳಿಕೆ 100 ಕೋಟಿ ಕಲೆಕ್ಷನ್ ಆಗಿದ್ದು, ಕೇವಲ ಥಿಯೇಟರ್‌ನಿಂದ ಆಗಿಲ್ಲ. ಬದಲಾಗಿ 'ಜೇಮ್ಸ್' ಚಿತ್ರದ ಒಟಿಟಿ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಮತ್ತು ಥಿಯೇಟರ್ ಕಲೆಕ್ಷನ್ ಸೇರಿ 100 ಕೋಟಿ ಗಳಿಸಿದೆ. ಚಿತ್ರ ನಿರ್ಮಾಪಕರೂ ಕೂಡ ಈ ಚಿತ್ರದ 100 ಕೋಟಿ ಕಲೆಕ್ಷನ್ ಬಗ್ಗೆ ಮಾತು ತಳ್ಳಿ ಹಾಕಿಲ್ಲ. ಹೀಗಾಗಿ 'ಜೇಮ್ಸ್' 100 ಕೋಟಿ ಕ್ಲಬ್ ಸೇರಿದೆಯಾ? ಅಥವಾ ಇಲ್ವಾ? ಅನ್ನುವುದನ್ನು ನಿರ್ಮಾಪಕರೇ ಹೇಳಬೇಕಿದೆ.

    'ಜೇಮ್ಸ್' ಚಿತ್ರದ ಸ್ಯಾಟಲೈಟ್ ರೈಟ್ಸ್ ಬಗ್ಗೆ ಮಾತು !

    'ಜೇಮ್ಸ್' ಚಿತ್ರದ ಸ್ಯಾಟಲೈಟ್ ರೈಟ್ಸ್ ಬಗ್ಗೆ ಮಾತು !

    ಇನ್ನು ಖಾಸಗಿ ಮಾಧ್ಯಮಕ್ಕೆ ಮಾತನಾಡಿದ ನಿರ್ಮಾಪಕ ಕಿಶೋರ್ ಪಾತಿಕೊಂಡ 'ಜೇಮ್ಸ್' ಚಿತ್ರದ ಸ್ಯಾಟಲೈಟ್ ರೈಟ್ಸ್ ಬಗ್ಗೆ ಮಾತನಾಡಿದ್ದಾರೆ. " 'ಜೇಮ್ಸ್' ಸಿನಿಮಾದ ಕಲೆಕ್ಷನ್ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ 'ಜೇಮ್ಸ್' ಚಿತ್ರದ ಸ್ಯಾಟಲೈಟ್ ರೈಟ್ಸ್ 15 ಕೋಟಿಗೆ ಸೇಲ್ ಆಗಿದೆ" ಎಂಬುದನ್ನು ಖಚಿತಪಡಿಸಿದ್ದಾರೆ. ಇನ್ನು ಬೇರೆ ಬೇರೆ ಭಾಷೆಗಳು ಸೇರಿ 'ಜೇಮ್ಸ್' ಚಿತ್ರ 80 ಕೋಟಿಗೆ ಟಿವಿ ರೈಟ್ಸ್ ಸೇಲ್ ಆಗಿದೆ ಎನ್ನಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಸೋನಿ ಡಿಜಿಟಲ್​ಗೆ 40 ಕೋಟಿ, ಕನ್ನಡ ಸುವರ್ಣ ವಾಹಿನಿಗೆ13.80 ಕೋಟಿ ಮತ್ತು ತೆಲುಗು ಮಾ ಟಿವಿಗೆ ಸುಮಾರು 5.70 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಹಾಗೇ ತಮಿಳಿನಲ್ಲಿ ಸನ್ ನೆಟ್ ವರ್ಕ್​ಗೆ 5.17 ಕೋಟಿ, ಮಲೆಯಾಳಂ 1.2 ಕೋಟಿ, ಭೋಜಪುರಿ 5.50 ಕೋಟಿ, ಹಿಂದಿ ಸೋನಿಗೆ 2.70 ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದ್ದು, 'ಜೇಮ್ಸ್' ಬರೆದ ಹೊಸ ದಾಖಲೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಮೂಲಗಳು ಹೇಳುತ್ತಿರೋದು ಏನು ಗೊತ್ತಾ?

    ಮೂಲಗಳು ಹೇಳುತ್ತಿರೋದು ಏನು ಗೊತ್ತಾ?

    ಒಂದು ಅಂದಾಜು ಲೆಕ್ಕದ ಪ್ರಕಾರ, ಒಟ್ಟಾರೆ ಬೆಂಗಳೂರಿನ ಒಂದು ದಿನದ ಕಲೆಕ್ಷನ್ ಎಂಟು ಕೋಟಿ ಐವತ್ತಾರು ಲಕ್ಷ ಆಗುತ್ತೆ ಎಂದು ಅಂದಾಜಿಸಬಹುದು. ಇದು 'ಜೇಮ್ಸ್' ಮೊದಲ ದಿನ ಕೇವಲ ಬೆಂಗಳೂರಿನಲ್ಲಿ ಗಳಿಸಿದ ಮೊತ್ತ ಎನ್ನಬಹುದು. ಇನ್ನು ಟಿಕೆಟ್ ದರ ಹೆಚ್ಚಾದರೆ ಇದು ದುಪ್ಪಟ್ಟಾಗುತ್ತೆ. ಕಡಿಮೆ ಎಂದರೂ ಬೆಂಗಳೂರಿನಲ್ಲಿ ಮೊದಲ ದಿನದ ಕಲೆಕ್ಷನ್ 8 ರಿಂದ 9 ಕೋಟಿಯಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಒಟ್ಟಾರೆ 'ಜೇಮ್ಸ್' ಸಿನಿಮಾದ ಕಲೆಕ್ಷನ್ ಬಗ್ಗೆ ಇದೀಗ ಸಾಕಷ್ಟು ಚರ್ಚೆ ಆಗುತ್ತಿದ್ದು, ಚಿತ್ರತಂಡವಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

    English summary
    Puneeth Rajkumar James film producer kishore pathikonda talks about movie collection.
    Saturday, March 19, 2022, 13:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X