ಇವರಲ್ಲಿ ನೀವು ಕಾಯೋದು ಯಾರ ಸಿನಿಮಾಗಳಿಗೆ?
ಉಪ್ಪಿ ಹೇಳೋ ಲಾಜಿಕ್ಕು, ಮಾಡೋ ಮ್ಯಾಜಿಕ್ಕು ಎರಡೂ ಸೂಪರ್. ಕಾಯಬೇಕು ಉಪ್ಪಿ ಚಿತ್ರ ನೋಡೋಕೆ ಕಾಯಲೇಬೇಕು. ಕೆರ್ಕೊಳ್ಳೋದ್ರಲ್ಲಿ ಏನೋ ಒಂಥರಾ ಮಜಾ ಇರುತ್ತೆ ಅಂತ ರಕ್ತ ಕಣ್ಣೀರಲ್ಲಿ ಉಪ್ಪಿ ಹೇಳಿದ್ರು. ಇನ್ನು ಉಪ್ಪಿ ಸಿನಿಮಾಗೆ ಕಾಯೋದ್ರಲ್ಲಿ ಒಂಥರಾ ಮಜಾ ಇರುತ್ತೆ ಅಂತಾರೆ ಸಿನಿರಸಿಕರು.
ಕಾಯಿಸಿ ಕಾಯಿಸಿ ಕೊಡೋದೇ ಉಪ್ಪಿ ಸ್ಪೆಷಾಲಿಟಿ. ಕಾಯಸಿದಷ್ಟು ಅಡುಗೆ ಟೇಸ್ಟು ಹೆಂಗೆ ಹೆಚ್ಚಾಗುತ್ತೋ ಹಂಗೆ ಸ್ಯಾಂಡಲ್ವುಡ್ನಲ್ಲಿ ಫೇವರೀಟ್ ಡೈರೆಕ್ಟರ್ಗಳಲ್ಲಿ ಹೆಚ್ಚಿನವ್ರು ಕಾಯಿಸಿಕೊಡ್ತಾರೆ. ಇನ್ನು ಕೆಲವರ ಸಿನಿಮಾಗಳನ್ನ ಕೊಟ್ಟ ಮೇಲೆ ಕಾಯ್ಬೇಕಾಗುತ್ತೆ ಟಿಕೇಟ್ಗಳಿಗೆ.
ಮಣಿರತ್ನಂ ಅನ್ನೋ ಸಿನಿಮಾ ಸಂತ ಔನ್ನತ್ಯದಲ್ಲಿರೋವಾಗ, ಶಿವಣ್ಣ 'ಓಂ' ಸಿನಿಮಾ ಮಾಡಿದ ಮೇಲೆ ನೋಡಿದ ಮೇಲೆ ಹೇಳಿದ್ದು ಮತ್ತೆ ನೆನಪಾಗ್ತಿದೆ. ಕನ್ನಡದಲ್ಲೂ ಅದ್ಭುತ ನಿರ್ದೇಶಕರಿದ್ದಾರೆ. ಆದ್ರೆ ನಮ್ಮ ಸಿನಿಮಾ ಹೊರಗೆ ಬರಲ್ಲ. ಅಲ್ಲಿ ಶಿವಣ್ಣ ಹೇಳಿದ್ದು ಉಪ್ಪಿ ಬಗ್ಗೆ 'ಈಗ ಕನ್ನಡದಲ್ಲಿ ಭರವಸೆಯ ಭರ್ಜರಿ ನಿರ್ದೇಶಕರು ಹುಟ್ಟಿಕೊಂಡಿದ್ದಾರೆ' ಅಂತ.[ಚಿತ್ರಗಳು: ಸ್ಯಾಂಡಲ್ ವುಡ್ ನ ಮುಂಬರುವ ಜೋಡಿಗಳು ಇವರು!]
ಅಂತಹ, ಚಿತ್ರರಸಿಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕುವ ಕನ್ನಡ ನಿರ್ದೇಶಕರುಗಳ ಮುಂಬರುವ ಸಿನಿಮಾಗಳ ಬಗ್ಗೆ ಒಂದು ಝಲಕ್ ಕೊಡ್ತಿದ್ದೀವಿ. ಇದ್ರಲ್ಲಿ ನಿಮ್ ಫೇವರೀಟ್ ಯಾರು, ಯಾರ ಸಿನೆಮಾವನ್ನು ಹೆಚ್ಚು ನಿರೀಕ್ಷಿಸುತ್ತಿದ್ದೀರಿ ಅಂತ ನಮಗ್ಹೇಳಿ..

ಕಾಯಿ ಕಾಯಿ ಉಪ್ಪಿನಕಾಯಿ
ನೀವು ಕಾಯಲೇಬೇಕು. ಆ ಉಪ್ಪಿನಕಾಯಿಗಾಗಿ ಚಪ್ಪರಿಸಿ ಸವಿಯೋ ಅಂತಹಾ ಉಪ್ಪಿನ ಕಾಯಿ ಬರೋದು ಐದು ವರ್ಷಕ್ಕೊಮ್ಮೆ ಮಾತ್ರ. 2010ಕ್ಕೆ ಸೂಪರ್ ಬಂದ್ರೆ 2015ಕ್ಕೆ ಉಪ್ಪಿ-2 ಬಂದಿದೆ. ನಾನು, ನೀನು ಯಾರು ಅಂತ ಹೇಳಿರೋ ಉಪ್ಪಿ ಮತ್ಯಾರ ಬಗ್ಗೆ ಹೇಳ್ತಾರೋ ಕಾಯಬೇಕು ಅಷ್ಟೇ..

ರವಿಮಾಮನ ಅಪೂರ್ವ ಸಿನಿಮಾಗಳು
1987 ಮೊದಲ ಸಿನಿಮಾ ಪ್ರೇಮಲೋಕದಿಂದಲೇ ಹುಚ್ಚೆಬ್ಬಿಸಿದ ನಟ ರವಿಮಾಮ. ಕ್ರೇಜಿ ಸ್ಟಾರ್ ರವಿಮಾಮನ `ಅಪೂರ್ವ' ಸಿನಿಮಾದ ಜೊತೆಗೆ `ರಣಧೀರ ಪ್ರೇಮಲೋಕದಲ್ಲಿ' ಬಂದೇ ಬರ್ತವೆ. ಆದ್ರೆ ಮಂಜಿನಹನಿಯ ಕನಸು ಶುರುವಾಗಿ ನಾಲ್ಕೈದು ವರ್ಷಗಳಾಗಿವೆ. ಬೇರೆಲ್ಲ ಸಿನಿಮಾಗಳಿಗಿಂತ ಮಂಜಿನಹನಿ ಬಗ್ಗೆ ದೊಡ್ಡ ನಿರೀಕ್ಷೆಯಿದೆ.

ಯೋಗರಾಜ ಭಟ್
ಹೀರೋ ಯಾರೇ ಇದ್ರೂ ಭಟ್ಟರ ಸಿನಿಮಾದಲ್ಲಿ ಭಟ್ಟರೇ ಸೆಂಟರ್ ಅಫ್ ಅಟ್ರ್ಯಾಕ್ಷನ್. ಸೋ ಸ್ಯಾಂಡಲ್ವುಡ್ ಸಿನಿರಸಿಕರು ನಿರ್ದೇಶಕನೊಬ್ಬನೊಬ್ಬನ ಸಿನಿಮಾಗಳಿಗೆ ಕಾಯೋ ಮತ್ತೊಬ್ಬ ನಿರ್ದೇಶಕ ಅಂದ್ರೆ ಯೋಗರಾಜ ಭಟ್. ಸದ್ಯ ಭಟ್ರು ದುನಿಯಾ ವಿಜಯ್ ಕಾಂಬಿನೇಷನ್ನಲ್ಲಿ 'ದನ ಕಾಯೋನು' ಸಿನಿಮಾ ತಯಾರಾಗುತ್ತಿದೆ.

ಕಿಚ್ಚ ಸುದೀಪ್
ಮಾಣಿಕ್ಯ ನಂತ್ರ ಮತ್ತೆ ಕಿಚ್ಚ ನಿರ್ದೇಶನಕ್ಕಿಳಿಯೋದ್ಯಾವಾಗ? ಗೊತ್ತಿಲ್ಲ. ಆದ್ರೆ ನಿರ್ದೇಶನದಲ್ಲಿ ನಟನೆಯಷ್ಟೇ ಮಿಂಚೋ ಕೈ ಅಂದ್ರೆ ಕಿಚ್ಚ ಅವರದು. ಕಿಚ್ಚನ ನಟನೆಯ ಸಿನಿಮಾಗೆ ಇರುವಷ್ಟೇ ಕ್ರೇಜ್ ನಿರ್ದೇಶನಕ್ಕಿದೆ. ಒಪ್ತೀರಾ ಈ ಮಾತನ್ನ?

ಜೋಗಿ ಪ್ರೇಮ್
ಸ್ಯಾಂಡಲ್ವುಡ್ನ ಕಿಲಾಡಿ ನಿರ್ದೇಶಕ ಅಂತಾನೇ ಕರೆಸಿಕೊಳ್ಳೋ ಜೋಗಿ ಪ್ರೇಮ್ ನಿರ್ದೇಶನಕ್ಕೂ ಚಿತ್ರಪ್ರೇಮಿಗಳಲ್ಲಿ ಇನ್ನಿಲ್ಲದ ಕ್ರೇಜ್ ಇದ್ದೇ ಇದೆ, ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಸದ್ಯ ವಿನಯ್ ರಾಜ್ಕುಮಾರ್ರ 'ಆರ್ ದಿ ಕಿಂಗ್' ಚಿತ್ರ ಶೂಟಿಂಗ್ ಅರಂಭವಾಗ್ತಿದ್ದು ಆರು ವರ್ಷಗಳ ನಂತ್ರ ಪ್ರೇಮ್ ನಿರ್ದೇಶನದ ಸಿನಿಮಾಗೆ ಚಿತ್ರಪ್ರೇಮಿಗಳು ಕಾಯೋದು ಪಕ್ಕಾ..

`ಗುರು'ಪ್ರಸಾದ್
ಎರಡೇ ಸಿನಿಮಾಗಳನ್ನ ವಿಭಿನ್ನ ರೀತಿಯಲ್ಲಿ ತಂದು ಮೂರು ಸಿನಿಮಾ ಮುಗಿಸಿರೋ ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್ ಸಿನಿಮಾಗಳಿಗೂ ಕನ್ನಡದಲ್ಲಿ ಸ್ಟಾರ್ವ್ಯಾಲ್ಯೂ ಖಂಡಿತ ಇದೆ. ಸದ್ಯ ಗುರುಪ್ರಸಾದ್ 'ಎರಡನೇ ಸಲ' ಅನ್ನೋ ಸಿನಿಮಾ ಕೈಗೆತ್ತಿಕೊಂಡಿದ್ದು, ಇಲ್ಲೂ ಡೈರೆಕ್ಟರ್ಸ್ ಸ್ಪೆಷಲ್ ಧನಂಜಯ್ ನಾಯಕ. ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತೆ.


Click it and Unblock the Notifications











