ಇಂದು ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಲೈವ್ ನಲ್ಲಿ 'ವೆನಿಲ್ಲಾ' ಚಿತ್ರತಂಡ
ಜಯತೀರ್ಥ ಅವರ ನಿರ್ದೇಶನದ 'ವೆನಿಲ್ಲಾ' ಸಿನಿಮಾ ನಾಳೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ನಾಳೆ ರಿಲೀಸ್ ಆಗುತ್ತಿರುವ ಈ ಚಿತ್ರದ ಬಗ್ಗೆ ಮಾತನಾಡಲು ಇಂದು ಚಿತ್ರತಂಡ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬರಲಿದೆ.
ಬೆಳ್ಳಗೆ 11 ಗಂಟೆಗೆ ಲೈವ್ ಶುರು ಆಗಲಿದ್ದು, ಚಿತ್ರದ ಬಗ್ಗೆ ನೀವು ಕೂಡ ಚಿತ್ರತಂಡಕ್ಕೆ ಪ್ರಶ್ನೆ ಕೇಳಬಹುದಾಗಿದೆ. ಚಿತ್ರದ ನಾಯಕ ಅವಿನಾಶ್ ಹಾಗೂ ನಾಯಕಿ ಸ್ವಾತಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.
ಅಂದಹಾಗೆ, 'ವೆನಿಲ್ಲಾ' ಒಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರದಲ್ಲಿ ಕಥೆಯೇ ಪ್ರಧಾನವಾಗಿದ್ದು, ಹೊಸ ರೀತಿಯ ನಿರೂಪಣೆಯನ್ನು ನಿರ್ದೇಶಕ ಜಯತೀರ್ಥ ಪ್ರಯತ್ನ ಮಾಡಿದ್ದಾರೆ. ಈ ಕಥೆಯಲ್ಲಿ ಸಮಾಜದ ಕಳಕಳಿ ಸಹ ಇದ್ದು, ಸಿನಿಮಾದಲ್ಲಿ ಧ್ವನಿಸುವ ವಿಚಾರ ಹೊಸತಾಗಿರಲಿದೆಯಂತೆ.

ಅವಿನಾಶ್ ಹಾಗೂ ಸ್ವಾತಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಸ್ಯ, ಪ್ರೇಮಾ, ಫೈಟ್, ಎಮೋಷನ್ಸ್, ಥ್ರಿಲ್ಲರ್ ಈ ಅಂಶಗಳ ಮಿಶ್ರಣದಿಂದ 'ವೆನಿಲ್ಲಾ' ತಯಾರಾಗಿದೆ. ಬಿ ಜೆ ಭರತ್ ಸಂಗೀತದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಟ್ರೇಲರ್ ನೋಡಿ ಇಷ್ಟ ಪಟ್ಟ ಮಂದಿ ಸಿನಿಮಾಗಾಗಿ ಕಾಯುತ್ತಿದ್ದಾರೆ.


Click it and Unblock the Notifications











