»   » ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿ ಸುರ್ವಿನ್

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿ ಸುರ್ವಿನ್

By ಸೋನು ಗೌಡ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಿತ್ರರಂಗಗಳಲ್ಲಿ ನಟಿಮಣಿಯರಿಗೆ ಅವಕಾಶ ನೀಡುವ ನೆಪದಲ್ಲಿ ಅವರುಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ ಅಂತ ಈಗಾಗಲೇ ಹಲವಾರು ಮಂದಿ ಹೀರೋಯಿನ್ ಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  ಅಂದಹಾಗೆ ಇಂತಹ ಪರಿಸ್ಥಿತಿ ಎದುರಾದಾಗ ಕೆಲವರು ಅದನ್ನು ಎಲ್ಲರ ಮುಂದೆ ಬಿಚ್ಚಿಡಲು ಭಯಪಡುತ್ತಾರೆ. ಮಾತ್ರವಲ್ಲದೆ ಅದರ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡಲು ಇಷ್ಟಪಡೋದಿಲ್ಲ.[ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ]

  ಆದರೆ ಇದಕ್ಕೆಲ್ಲಾ ತದ್ವಿರುದ್ದ ಎನ್ನುವಂತೆ ಕ್ಯಾಸ್ಟಿಂಗ್ ಕೌಚ್ (ಅವಕಾಶ ನೀಡುವ ಸಲುವಾಗಿ ನಟಿಯರನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಳ್ಳುವುದು) ಬಗ್ಗೆ ಮಾಧ್ಯಮಗಳ ಮುಂದೆ ನಟಿ ಸುರ್ವಿನ್ ಚಾವ್ಲಾ ಅವರು ಮನಬಿಚ್ಚಿ ಮಾತನಾಡಿದ್ದಾರೆ.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

  ಮುಂಬೈನಲ್ಲಿ ನಡೆಸಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಹುಭಾಷಾ ನಟಿ ಸುರ್ವಿನ್ ಚಾವ್ಲಾ ಅವರು ಬಹಿರಂಗವಾಗಿ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಲು ಸ್ಲೈಡ್ಸ್ ಕ್ಲಿಕ್ಕಿಸಿ.....

  ದಿಲ್ ಧಡಕ್ ಬೆಡಗಿ ಸುರ್ವಿನ್

  ಕನ್ನಡದಲ್ಲಿ 'ಪರಮೇಶ ಪಾನ್ ವಾಲ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ 'ದಿಲ್ ಧಡಕ್ ಧಡಕ್' ಅಂತ ಡ್ಯುಯೆಟ್ ಹಾಡಿದ್ದ ನಟಿ ಸುರ್ವಿನ್ ಚಾವ್ಲಾ ಅವರು ಲೈಂಗಿಕ ಕಿರುಕುಳದ ಬಗ್ಗೆ ಮುಂಬೈನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

  ದಕ್ಷಿಣ ಭಾರತದಲ್ಲಿ ಅನುಭವಕ್ಕೆ ಬಂದಿದೆ

  "ಬಾಲಿವುಡ್ ಸಿನಿಮಾ ರಂಗದಲ್ಲಿ ನನಗೆ ಇಂತಹ ಅನುಭವ ಆಗಿಲ್ಲ, ಆದರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರ ಕ್ಯಾಸ್ಟಿಂಗ್ ಕೌಚ್ (ಅವಕಾಶ ನೀಡುವ ಸಲುವಾಗಿ ನಟಿಯರನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಳ್ಳುವುದು) ಎದುರಿಸಬೇಕಾಯಿತು. -ಸುರ್ವಿನ್ ಚಾವ್ಲಾ.

  ಸುರ್ವಿನ್ ಒಪ್ಪಲಿಲ್ಲ

  "ಆದ್ರೆ ನಾನು ಒಪ್ಪದೆ ಖಡಕ್ ಆಗಿ ನಿರಾಕರಿಸಿದ್ದೆ. ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಬಾಲಿವುಡ್ ನಲ್ಲಿ ನನಗೆ ಒಮ್ಮೆಯೂ ಅಂತಹ ಅನುಭವ ಆಗಲಿಲ್ಲ. ಮಾತ್ರವಲ್ಲದೇ ನನ್ನ ಜೊತೆ ಯಾರೂ ಕೂಡ ಆ ರೀತಿ ನಡೆದುಕೊಳ್ಳಲಿಲ್ಲ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ" ಸುರ್ವಿನ್ ಚಾವ್ಲಾ.

  ನಟಿಯಾಗಬೇಕೆಂದು ಬಂದಿಲ್ಲ

  "ನಾನು ನಟಿಯಾಗುವ ಮಹಾತ್ವಾಕಾಂಕ್ಷೆಯಿಂದ ಸಿನಿಮಾ ರಂಗಕ್ಕೆ ಬರಲಿಲ್ಲ. ಬದಲಾಗಿ ನನಗೆ ಕೆಲಸ ಮಾಡುವ ಆಸೆ ಮತ್ತು ಹಂಬಲ ಇತ್ತು ಅದಕ್ಕೋಸ್ಕರ ಮಾತ್ರ ಬಂದೆ". -ಸುರ್ವಿನ್ ಚಾವ್ಲಾ.

  ಬಾಲಿವುಡ್ ನಲ್ಲಿ ಅನುಭವಕ್ಕೆ ಬರಲಿಲ್ಲ

  "ಬಾಲಿವುಡ್ ನಲ್ಲಿ ಈ ಹಿಂದೆ ಕ್ಯಾಸ್ಟಿಂಗ್ ಕೌಚ್ ಇತ್ತೇನೋ ನನಗೆ ಗೊತ್ತಿಲ್ಲ. ಆದರೆ ಈಗ ಮಾತ್ರ ನನ್ನ ಅನುಭವಕ್ಕೆ ಬಂದಿಲ್ಲ. ದಕ್ಷಿಣ ಭಾರತದಲ್ಲಿ ನಾನದನ್ನು ಎದುರಿಸಬೇಕಾಯಿತು". ಎಂದು ದಕ್ಷಿಣ ಭಾರತದ ಚಿತ್ರರಂಗದ ಕರ್ಮಕಾಂಡ ಬಿಚ್ಚಿಟ್ಟ ಸುರ್ವಿನ್ ಅಚ್ಚರಿ ಮೂಡಿಸಿದ್ದಾರೆ.

  20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸುರ್ವಿನ್

  ನಟಿ ಸುರ್ವಿನ್ ಚಾವ್ಲಾ ಅವರು ಕನ್ನಡ, ತಮಿಳು ತೆಲುಗು, ಪಂಜಾಬಿ ಸೇರಿದಂತೆ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ಸುಮಾರು 20 ಸಿನಿಮಾಗಳಲ್ಲಿ ಹಾಗೂ 5 ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಹಿಂದಿ 'ಹೇಟ್ ಸ್ಟೋರಿ 2', ಅರ್ಜುನ್ ಸರ್ಜಾ ಅವರ ಜೊತೆ 'ಜೈ ಹಿಂದ್ 2' ಮುಂತಾದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.

  English summary
  'Casting couch' is one topic that many celebrities shy away from talking about in public but actress Surveen Chawla admits that she witnessed such things in the southern film industry but not in Bollywood film industry.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more