ದಾಸನ ಫ್ಯಾನ್ಸ್ ಅರೆಸ್ಟ್‌.. ವಿಜಯಲಕ್ಷ್ಮಿ ಇನ್‌ಸ್ಟಾ ಸ್ಟೋರಿ..ದರ್ಶನ್-ಧನ್ವೀರ್ ಮಧ್ಯೆ ವೈಮನಸ್ಸು? ಏನಿದು ವಿಷ್ಯ?

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಬೇಕು. ಅವರಿಗೆ ಜಾಮೀನು ಸಿಗಬೇಕು ಅಂತ ಹಗಲು-ರಾತ್ರಿ ಎನ್ನದೆ ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ಅವರ ಅವರ ಅಭಿಮಾನಿಗಳು ದೇವರ ಹೋಗುತ್ತಿದ್ದಾರೆ. ಹೀಗಿದ್ದರೂ ದರ್ಶನ್ ಫ್ಯಾನ್ಸ್‌ಗೆ ಯಾಕೋ ನಿರಾಸೆ ಮೇಲೆ ನಿರಾಸೆ ಆಗುತ್ತಲೇ ಇದೆ. ಒಂದೊಂದೇ ಘಟನೆಗಳು ದರ್ಶನ್‌ಗೆ ಮತ್ತೂ ಮುಳುವಾಗುತ್ತಲೇ ಇದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಜಾಮೀನಿಗಾಗಿ ಪರದಾಡುತ್ತಿದ್ದಾರೆ. ಅದೇನೆ ಪ್ರಯತ್ನ ಪಟ್ಟರೂ ಜಾಮೀನು ಅನ್ನೋದು ಅವರಿಗೆ ಮರೀಚಿಕೆಯಾಗಿದೆ. ಸುಪ್ರೀಂ ಕೋರ್ಟ್‌ವರೆಗೂ ಹೋದರೂ ದರ್ಶನ್‌ಗೆ ಜಾಮೀನು ಸಿಕ್ಕಿಲ್ಲ. ಒಂದು ವರ್ಷದ ಒಳಗೆ ಟ್ರಯಲ್ ಮುಗಿಸುವಂತೆ ಹೇಳಿದ್ದರಿಂದ ಅಲ್ಲಿವರೆಗೂ ದರ್ಶನ್‌ಗೆ ಜೈಲೇ ಗತಿ ಎನ್ನಲಾಗಿತ್ತು. ಇಷ್ಟೆಲ್ಲೇ ವಕೀಲರು ಬದಲಾಗಿದ್ದರು. ಹೊಸಬರು ಬಂದು ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು.

Fact Check Buzz is that everything is not right between Darshan and Dhanveer

ಒಂದು ವರ್ಷದವರೆಗೆ ಜಾಮೀನು ಅರ್ಜಿ ಸಲ್ಲಿಸದಂತೆ ನೀಡಿದ್ದ ಆದೇಶವನ್ನು ತಿದ್ದು ಮಾಡಿ, ತುರ್ತು ಪರಿಸ್ಥಿತಿಯಲ್ಲಿ ಜಾಮೀನು ಕೋರುವ ಅವಕಾಶ ನೀಡುವಂತೆ ಮಾನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅದಕ್ಕೂ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿಲ್ಲ. ಹೀಗಾಗಿ ದರ್ಶನ್‌ಗೆ ಮತ್ತೆ ಹಿನ್ನೆಡೆಯಾಗಿದೆ. ಈ ಮಧ್ಯೆ ಒಂದಿಷ್ಟು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿವೆ. ಅದೇನು ಅನ್ನೋದನ್ನು ಒಂದೊಂದಾಗೇ ನೋಡುವುದಾದರೇ.

ವಿಜಯಲಕ್ಷ್ಮಿ ಇನ್‌ಸ್ಟಾ ಸ್ಟೋರಿ

ವಿಜಯಲಕ್ಷ್ಮಿ ದರ್ಶನ್ ದಿಢೀರನೇ ಒಂದು ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಇದು ಯಾರಿಗೋ ಪರೋಕ್ಷವಾಗಿ ಸಂದೇಶ ನೀಡುವಂತೆ ಕಾಣಿಸುತ್ತಿದೆ. ಈ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ "ಪಡೆದುಕೊಂಡ ಮೇಲೆ, ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ, ಅದು ವಸ್ತುವಾಗಲಿ ವ್ಯಕ್ತಿಯಾಗಲಿ" ಎಂದು ಹೇಳಿದ್ದಾರೆ. ಇದು ಯಾರಿಗೆ ಹೇಳಿರಬಹುದೆಂದು ಕೆಲವರು ತಲೆ ಕೆಡಿಸಿಕೊಂಡಿದ್ದರೆ, ಮತ್ತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಧನ್ವೀರ್ ಕಡೆಗೆ ಬೆರೆಳು ಮಾಡಿ ತೋರಿಸುತ್ತಿದ್ದಾರೆ. ಅದಕ್ಕೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ಸುದ್ದಿ.

Also Read
ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಪ್ರಾಣ ಬೆದರಿಕೆ; 'ಡಿ ಕಂಪನಿ' ಅಡ್ಮಿನ್ ಸೇರಿ ಮೂವರ ಬಂಧನ
ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಪ್ರಾಣ ಬೆದರಿಕೆ; 'ಡಿ ಕಂಪನಿ' ಅಡ್ಮಿನ್ ಸೇರಿ ಮೂವರ ಬಂಧನ

ದರ್ಶನ್-ಧನ್ವೀರ್ ಮಧ್ಯೆ ವೈಮನಸ್ಸು?

ಕಳೆದೆರಡು ದಿನಗಳಿಂದ ದರ್ಶನ್ ಹಾಗೂ ಧನ್ವೀರ್ ಮಧ್ಯೆ ವೈಮನಸ್ಸು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಸುಪ್ರೀಂ ಕೋರ್ಟ್‌ಗೆ ಹೋಗಿ ದರ್ಶನ್‌ಗೆ ಜಾಮೀನು ಕೊಡಿಸುವುದಕ್ಕೆ ಧನ್ವೀರ್ ಮುಂದಾಗಿದ್ದರು. ಅದರಿಂದ ದರ್ಶನ್‌ಗೆ ಒಂದು ವರ್ಷದವರೆಗೆ ಜಾಮೀನು ಸಿಗದಂತೆ ಆಗಿದೆ ಎಂದು ಧನ್ವೀರ್ ಮೇಲೆ ದರ್ಶನ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಂತಹದ್ದೊಂದು ಸದ್ದು ಕಳೆದೆರಡು ದಿನಗಳಿಂದ ಹಲ್‌ಚಲ್ ಎಬ್ಬಿಸಿದೆ.

Fact Check Buzz is that everything is not right between Darshan and Dhanveer

ಕೆಲವು ದಿನಗಳಿಂದ ಧನ್ವೀರ್ ಸುಳಿವಿಲ್ಲ

ಇದಕ್ಕೆ ಸರಿ ಹೊಂದುವ ಹಾಗೇ ಕೆಲವು ದಿನಗಳಿಂದ ಧನ್ವೀರ್ ಸುಳಿವು ಕೂಡ ಇಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳಿಗೆ ಈ ವಿಷವೂ ನಿಜ ಇರಬಹುದೇನೋ ಅನ್ನೋ ಫೀಲಿಂಗ್ ಬಂದಿದೆ. ಆದರೆ, ದರ್ಶನ್ ಹಾಗೂ ಧನ್ವೀರ್ ಮಧ್ಯೆ ಮೈಮನಸ್ಸು ಎಂಬ ಸುದ್ದಿ ಹರಿದಾಡಿದ್ದರೂ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಧನ್ವೀರ್ ಕೂಡ ಸೈಲೆಂಟ್ ಆಗಿದ್ದಾರೆ. ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂ ಸ್ಟೋರಿ ಬೇರೆ ಏನೋ ಹೇಳುತ್ತಿದೆ. ಆದರೆ, ಯಾರೂ ಅಧಿಕೃತವಾಗಿ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಮತ್ತೆ ಜಾಮೀನು ಇಲ್ಲ

ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ಸೂಚಿಸಿದ್ದ ಸುಪ್ರೀಂ ಆದೇಶಿಸಿತ್ತು. ಅದನ್ನು ತಿದ್ದುಪಡಿ ಮಾಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅವಕಾಶ ನೀಡುವಂತೆ ದರ್ಶನ್‌ ಮನವಿ ಮಾಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಇದು ಅರ್ಹವಲ್ಲದ ಅರ್ಜಿ ಎಂದು ತಿರಸ್ಕರಿಸಿದೆ. ಈ ಮಧ್ಯೆ ದರ್ಶನ್ ಅಭಿಮಾನಿಗಳು ಸಾಕ್ಷಿಗೆ ಬೆದರಿಕೆ ಹಾಕಿದ್ದರಿಂದ ಅವರನ್ನು ಬಂಧಿಸಲಾಗಿದ್ದು, ವಿಚಾರಣೆಯಲ್ಲಿ ವೇಳೆ ಇನ್ನಷ್ಟು ಮಾಹಿತಿ ಸಿಕ್ಕರೆ ತೊಂದರೆ ಸಿಕ್ಕಿಕೊಳ್ಳುವ ಸಾಧ್ಯತೆಯಿದೆ.

English summary
Fact Check: Buzz is that everything is not right between Darshan and Dhanveer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X