ಕೊನೆ ಘಳಿಗೆಯಲ್ಲಿ 'ಧೂಮಂ' ಕನ್ನಡ ಡಬಿಂಗ್‌ನಲ್ಲಿ ಫಹಾದ್ ವಾಯ್ಸ್ ಬದಲಾವಣೆ; ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಚುನಾವಣೆ ಹಾವಳಿ ಬಳಿಕ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರಗಳ ಅಂಗಳಕ್ಕೆ ಬರಲು ಶುರು ಮಾಡಿವೆ. ಅದರಂತೆ ಈ ಹಿಂದೆಯೇ ನಿಗದಿಪಡಿಸಿದ್ದ ಹಾಗೆ ಈ ಶುಕ್ರವಾರ ಲೂಸಿಯಾ ಡೈರೆಕ್ಟರ್ ಪವನ್ ಕುಮಾರ್ ನಿರ್ದೇಶನದ ಧೂಮಂ ಚಿತ್ರ ತೆರೆಗೆ ಬರಲಿದೆ.
ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಧೂಮಂ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಇದು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ತಯಾರಾಗಿ ಬಿಡುಗಡೆಯಾಗುತ್ತಿರುವ ಮೊದಲ ಮಲಯಾಳಂ ಚಿತ್ರವಾಗಿದೆ.

ಹೌದು, ಪವನ್ ಕುಮಾರ್ ಕನ್ನಡ ನಟರಿಗೆಂದೇ ಹಲವು ವರ್ಷಗಳಿಂದ ಇಟ್ಟುಕೊಂಡಿದ್ದ ಧೂಮಂ ಕಥೆ ಇದೀಗ ಮಲಯಾಳಂ ನಟ ಫಹಾದ್ ಫಾಸಿಲ್ ಪಾಲಾಗಿದ್ದು, ನಾಯಕಿಯಾಗಿ ಮಲಯಾಳಂನ ಅಪರ್ಣ ಬಾಲಮುರಳಿ ನಟಿಸಿದ್ದಾರೆ.
ಹೀಗೆ ಮಲಯಾಳಂ ಕಲಾವಿದರು ಹಾಗೂ ಕನ್ನಡದ ನಿರ್ದೇಶಕ ಹಾಗೂ ನಿರ್ಮಾಪಕರ ಸಿನಿಮಾ ಆಗಿರುವ ಧೂಮಂ ಮಲಯಾಳಂ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಆಗಿ ಬಿಡುಗಡೆಗೊಳ್ಳುತ್ತಿದೆ.
ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರದ ಮಲಯಾಳಂ ಹಾಗೂ ಕನ್ನಡ ಟ್ರೈಲರ್ ಎರಡನ್ನೂ ಸಹ ಬಿಡುಗಡೆಗೊಳಿಸಿತ್ತು. ಕನ್ನಡ ಅವತರಣಿಕೆ ಟ್ರೈಲರ್‌ನಲ್ಲಿಯೂ ಸಹ ಫಹಾದ್ ಫಾಸಿಲ್ ತನ್ನ ಸ್ವಂತ ದನಿಯನ್ನು ಡಬ್ ಮಾಡಿದ್ದು ವಿಶೇಷವಾಗಿತ್ತು.
ಆದರೆ ಫಹಾದ್ ಫಾಸಿಲ್ ಕನ್ನಡ ಡಬಿಂಗ್‌ಗೆ ಪ್ರಶಂಸೆಗಳು ವ್ಯಕ್ತವಾಗಲೇ ಇಲ್ಲ. ಫಹಾದ್ ಫಾಸಿಲ್ ಕನ್ನಡ ಡಬಿಂಗ್ ಮಾಡಿರುವುದಕ್ಕೆ ಗೌರವ ಇದೆ, ಆದರೆ ಅವರ ವಾಯ್ಸ್ ಅಷ್ಟಾಗಿ ಸೆಟ್ ಆಗಿಲ್ಲ, ಹೀಗಾಗಿ ಅವರ ದನಿ ಬದಲಾಗಿ ಬೇರೆ ಯಾರದ್ದಾದರೂ ದನಿಯನ್ನು ಬಳಸಿ ಎಂದು ಸಲಹೆ ಸಹಿತ ಮನವಿ ಮಾಡಿದ್ದರು.
ಹೀಗೆ ಇಂತಹದ್ದೇ ಅಭಿಪ್ರಾಯವನ್ನು ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ವ್ಯಕ್ತಪಡಿಸಿದ ಕಾರಣ ಚಿತ್ರತಂಡವೂ ಸಹ ಇದಕ್ಕೆ ಸ್ಪಂದಿಸಿದೆ. ಹೌದು, ಫಹಾದ್ ಫಾಸಿಲ್ ದನಿಯ ಬದಲಿಗೆ ಬೇರೆ ಡಬಿಂಗ್ ಕಲಾವಿದನ ದನಿಯನ್ನು ಚಿತ್ರಕ್ಕೆ ಸೇರಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಪವನ್ ಕುಮಾರ್ ಅವರೇ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಫಹಾದ್ ಫಾಸಿಲ್ ದನಿ ಬದಲಿಗೆ ಬೇರೆ ದನಿಯನ್ನು ಸೇರಿಸಿದ ಬಳಿಕ ತಾನು ಸಂಪೂರ್ಣ ಚಿತ್ರವನ್ನು ವೀಕ್ಷಿಸಿದೆ ಹಾಗೂ ಅದು ತೃಪ್ತಿ ತಂದಿದೆ ಎಂದು ಪವನ್ ಕುಮಾರ್ ತಿಳಿಸಿದ್ದಾರೆ. ಈ ಬದಲಾವಣೆ ನಂತರ ಧೂಮಂ ಕನ್ನಡ ಚಿತ್ರದ ಹಾಗೆಯೇ ಕಾಣುತ್ತಿದೆ ಎಂದೂ ಸಹ ಪವನ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಧೂಮಂ ಬುಕಿಂಗ್ ಓಪನ್
ಚಿತ್ರ ಬಿಡುಗಡೆಗೆ ಇನ್ನು ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು ನಿನ್ನೆ ( ಜೂನ್ 20 ) ಬೆಂಗಳೂರು ಹಾಗೂ ಕೊಚ್ಚಿ ನಗರಗಳಲ್ಲಿ ಚಿತ್ರದ ಮುಂಗಡ ಬುಕಿಂಗ್ ತೆರೆಯಲಾಗಿದೆ. ಮಲಯಾಳಂ ಹಾಗೂ ಕನ್ನಡ ಅವತರಣಿಕೆಗಳ ಬುಕಿಂಗ್ ಅನ್ನು ತೆರೆಯಲಾಗಿದ್ದು, ನಗರಗಳ ಸಿಂಗಲ್ ಸ್ಕ್ರೀನ್‌ಗಳಲ್ಲಿ ಮಾತ್ರ ಸದ್ಯಕ್ಕೆ ಮುಂಗಡ ಬುಕಿಂಗ್ ಆರಂಭಗೊಂಡಿದೆ.
ಬೆಂಗಳೂರಿನಲ್ಲಿ ಮಲಯಾಳಂ ವರ್ಷನ್‌ನ ಬುಕಿಂಗ್ ಅನ್ನು ಅಗರದ ತಿರುಮಲ, ತಾವರೆಕೆರೆ ಬಾಲಾಜಿ, ಸ್ಯಾಂಕಿ ರಸ್ತೆಯ ಕಾವೇರಿ, ಕಾಡುಗೋಡಿಯ ಶ್ರೀನಿವಾಸ, ಸಂಜಯ್ ನಗರದ ವೈಭವ್, ಕೆಂಗೇರಿಯ ವೆಂಕಟೇಶ್ವರ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ತೆರೆಯಲಾಗಿದೆ.
ಈ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ದರ 150 ರೂಪಾಯಿಗಳಿದ್ದು, ಸಾಮಾನ್ಯ ಕ್ಲಾಸ್ ಟಿಕೆಟ್‌ಗಳ ದರ 120 ರೂಪಾಯಿ ಇದೆ. ಇನ್ನು ಬೆಂಗಳೂರಿನಲ್ಲಿ ಸದ್ಯ ಕನ್ನಡ ಧೂಮಂ ಕನ್ನಡ ವರ್ಷನ್‌ನ ಮುಂಗಡ ಬುಕಿಂಗ್ ಅನ್ನು ತಾವರೆಕೆರಯ ಬಾಲಾಜಿ ಹಾಗೂ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರಗಳಲ್ಲಿ ಮಾತ್ರ ತೆರೆಯಲಾಗಿದೆ. ಈ ಪ್ರದರ್ಶನಗಳ ಟಿಕೆಟ್ ದರ ಸಹ ಬಾಲ್ಕನಿಗೆ 150 ರೂಪಾಯಿಗಳಿದ್ದು, ಸಾಮಾನ್ಯ ಕ್ಲಾಸ್ ಟಿಕೆಟ್‌ಗೆ 120 ರೂಪಾಯಿ ಇದೆ.


Click it and Unblock the Notifications











