ಸೆನ್ಸಾರ್ ನಲ್ಲಿ ಪಾಸಾದ 'ಫೇರ್ ಅಂಡ್ ಲವ್ಲಿ'

By Rajendra

'ಚೆಲುವೆಯೆ ನಿನ್ನ ನೋಡಲು' ಚಿತ್ರದ ನಂತರ ಕೆಲಕಾಲ ಆಕ್ಷನ್ ಕಟ್ ಗೆ ದೂರವಾಗಿದ್ದ ಯುವ ನಿರ್ದೇಶಕ ರಘುರಾಮ್ ಡಿ.ಪಿ ಮತ್ತೆ 'ಫೇರ್ ಅಂಡ್ ಲವ್ಲಿ' ಮೂಲಕ ಫೀಲ್ ಇರೋ ಪ್ರೇಮಕತೆಯನ್ನು ಕನ್ನಡಿಗರಿಗೆ ನೀಡಲು ಮುಂದಾಗಿದ್ದಾರೆ. ಜೆಡ್ ಪ್ಲಾಂಟ್ ಅಡಿಯಲ್ಲಿ ನಿರ್ಮಾಪಕಿ ಶಿಲ್ಪ ರಮೇಶ್ ರಮಣಿ ಈ ಫೇರ್ ಅಂಡ್ ಲವ್ಲಿ ನಿರ್ಮಾಪಕರು. ಇತ್ತಿಚೆಗೆ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

ಇನ್ನೇನು ಚಿತ್ರ ಬಿಡುಗಡೆ ಯಾವಾಗ ಎಂಬುದಷ್ಟೇ ಗೊತ್ತಾಗಬೇಕು. ಈ ಚಿತ್ರಕ್ಕೆ 7.1 ಸೌಂಡ್ ಸಿದ್ಧತೆ ಸಹ ಅಳವಡಿಸಿ ಚಿತ್ರದ ಮೆರಗನ್ನು ಇನ್ನಷ್ಟು ತಾಂತ್ರಿಕವಾಗಿ ಹೆಚ್ಚಿಸಿದ್ದಾರೆ ರಘುರಾಮ್. ಕನ್ನಡ ಸಿನಿಮಾ ಒಂದರಲ್ಲಿ ಕೆಲವು ಹಿರಿಯ ಕಲಾವಿದರುಗಳ ಮಿಮಿಕ್ರಿ ಉಪಯೋಗಿಸಿ ಶೀರ್ಷಿಕೆ ಮಾಡಿರುವುದು ಒಂದು ವಿಶೇಷ. [ತಾಜಾ ಅನುಭವದ 'ಫೇರ್ ಅಂಡ್ ಲವ್ಲಿ' ಹಾಡುಗಳು]


ತೆರೆಯ ಮೇಲೆ ಬರುವ ಪರಿಚಯ ಪ್ರತಿ ಕಲಾವಿದ, ತಂತ್ರಜ್ಞರಿಗೆ ಒಂದು ಪುಟ್ಟ ಮುನ್ನುಡಿ ಮಾಡಲಾಗಿದ್ದು ಆ ಮುನ್ನುಡಿಯನ್ನು ಕೆಲವು ಜನಪ್ರಿಯ ಕಲಾವಿದರ ಮಿಮಿಕ್ರಿಯಿಂದ ಅದನ್ನು ಕೇಳಬಹುದು. ಚಿತ್ರಕ್ಕೆ ಕಥೆಯನ್ನು ಒದಗಿಸಿರುವವರು ನಟ ಹಾಗೂ ಪತ್ರಕರ್ತ ಯತಿರಾಜ್.

ಫೇರ್ ಆಗಿ ಶ್ವೇತಾ ಶ್ರೀವತ್ಸ ಇದ್ದರೆ, ಲವ್ಲಿ ಆಗಿ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಇದ್ದಾರೆ. ಹಿರಿಯ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರಾ ಸಹ ಅಭಿನಯಿಸಿದ್ದು ಆನಂದಪ್ರಿಯ ಅವರು ಚುರುಕು ಸಂಭಾಷಣೆ ಹಾಗೂ ಚಿತ್ರಕಥೆ ಇದೆ.

ವಿ ಹರಿಕೃಷ್ಣ ಅವರ ಸಂಗೀತದ ಹಾಡುಗಳು ಈಗಾಗಲೇ ಭರ್ಜರಿ ಯಶಸ್ಸನ್ನು ಕಂಡಿವೆ. ರಿಂಗಾಗಿದೆ ನನ್ನೆದೆ ಫೋನು....ಅನಿರೀಕ್ಷಿತ ಲೈಫ್ ಅಲ್ಲಿ....ಹಾಗೆ ಒಂದು ಮಾತು ಹೇಳುವೆ....ಈ ಕಾಣದ ಕಣ್ಣಿಗೆ... ಹಾಡುಗಳು ಸಖತ್ ಮೇಲೋಡಿ ತುಂಬಿವೆ.

ಚಿತ್ರದ ನಾಯಕ, ನಾಯಕಿ ಅನೇಕ ಪ್ರದೇಶಗಳಲ್ಲಿ ಸಾವಿರಾರು ಸಿ ಡಿ ಗಳನ್ನು ಉಚಿತವಾಗಿ ನೀಡಿದ್ದಾರೆ. ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ, ಜೋನಿ ಹರ್ಷ ಅವರ ಸಂಕಲನ, ಮದನ್ ಹರಿಣಿ ಹಾಗೂ ಕಲೈ ಅವರ ನೃತ್ಯ ನಿರ್ದೇಶನವಿದೆ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Kannada movie 'Fair and Lovely' clears censor formalities and got U/A certificate. The movie directed by Raghuram, starring Prem Kumar, Shwetha Srivatsav, Nakshatra. V Harikrishna is the music director the movie produced by Dr Shilpa Ramesh Ramani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X