For Quick Alerts
  ALLOW NOTIFICATIONS  
  For Daily Alerts

  ಡಬ್ ಸ್ಮಾಶ್ ಕುವರಿಯ ಹೆಸರಿನಲ್ಲಿಯೂ ಹೆಚ್ಚಾಗಿವೆ ಫೇಕ್ ಅಕೌಂಟ್ಸ್

  By Naveen
  |

  ಈಗೀಗ ಸಾಮಾಜಿಕ ಜಾಲತಾಣಗಳ ದುರುಪಯೋಗ ಹೆಚ್ಚಾಗುತ್ತಿದೆ. ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದರೆ ಸಾಕು ಅವರ ಹೆಸರಿನಲ್ಲಿ ಸಾಕಷ್ಟು ಫೇಕ್ ಅಕೌಂಟ್ ಗಳು ಹುಟ್ಟುಕೊಂಡುಬಿಡುತ್ತಿದೆ.

  ಈಗ ಡಬ್ ಸ್ಮಾಶ್ ಕುವರಿ ಪ್ರಶ್ವಿತಾ ಹೆಸರಿನಲ್ಲಿಯೂ ಫೇಕ್ ಅಕೌಂಟ್ ಗಳು ಶುರು ಆಗಿವೆ. ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಪ್ರಶ್ವಿತಾ ಡಬ್ ಸ್ಮಾಶ್ ವಿಡಿಯೋಗಳು ಹಿಟ್ ಆಗುತ್ತಿದ್ದ ಹಾಗೆ ಅವರ ಹೆಸರನ್ನು ಬಳಿಸಿ ಅನೇಕರು ನಕಲಿ ಖಾತೆಗಳನ್ನು ತೆರೆದಿದ್ದಾರೆ. ಫೇಸ್ ಬುಕ್ ಹಾಗೂ ಇನ್ಟಾಗ್ರಾಮ್ ಗಳಲ್ಲಿ ಪ್ರಶ್ವಿತಾ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳು ಇವೆ.

  ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ಡಬ್ ಸ್ಮಾಶ್ ಕ್ವೀನ್ ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ಡಬ್ ಸ್ಮಾಶ್ ಕ್ವೀನ್

  ಈಗಾಗಲೇ ಈ ವಿಷಯ ಪ್ರಶ್ವಿತಾ ಅವರ ಪೋಷಕರ ಗಮನಕ್ಕೆ ಬಂದಿದ್ದು, ಸೈಬರ್ ಕ್ರೈಂಗೆ ದೂರು ನೀಡಿದ್ದಾರಂತೆ. ಅಲ್ಲದೆ ಕೆಲವು ಅಕೌಂಟ್ ಗಳನ್ನು ಡಿಲೀಟ್ ಮಾಡಿಸಿದ್ದಾರಂತೆ.

  ಅಂದಹಾಗೆ, ಪ್ರಶ್ವಿತಾ ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿರುವ ಹರಿಕೃಷ್ಣ ಎಂಬುವವರ ಮಗಳಾಗಿದ್ದಾಳೆ. ಅಕ್ಕನನ್ನು ನೋಡಿ ಡಬ್ ಸ್ಮಾಶ್ ಮಾಡಲು ಶುರು ಮಾಡಿದ ಈ ಕುವರಿ ಈಗ '777 ಚಾರ್ಲಿ' ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾಳೆ.

  English summary
  fake accounts created in the name of dubsmash queen Prashvitha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X