For Quick Alerts
  ALLOW NOTIFICATIONS  
  For Daily Alerts

  ನಕಲಿ ಫೇಸ್‌ಬುಕ್ ಖಾತೆ: ಅಭಿಮಾನಿಗಳಲ್ಲಿ ಮನವಿ ಮಾಡಿದ ನಟಿ ಭಾವನಾ

  |

  ಸಾಮಾಜಿಕ ಜಾಲತಾಣಗಳಿಂದ ನಟಿಯರಿಗೆ ಆಗಾಗ್ಗೆ ಸಮಸ್ಯೆಗಳು ಆಗುತ್ತಲೇ ಇರುತ್ತವೆ. ಫೊಟೊಗಳನ್ನು ತಿದ್ದುವುದು, ಕೆಟ್ಟದಾಗಿ ಕಮೆಂಟ್ ಮೆಸೆಜ್ ಮಾಡುವುದು ಹೀಗೆ ನಾನಾ ವಿಧದಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ.

  ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಲೆಯಾಳಂ ಮೂಲದ ನಟಿ ಭಾವನಾ ಗೂ ಸಹ ಈಗ ಸಾಮಾಜಿಕ ಜಾಲತಾಣದಿಂದ ಸಮಸ್ಯೆ ಶುರುವಾಗಿದೆ.

  ಯಾರೋ ಕಿಡಿಗೇಡಿಗಳು ಭಾವನಾ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಹಲವರು ನಕಲಿ ಖಾತೆಯನ್ನು ಭಾವನಾ ಅವರ ಖಾತೆಯೇ ಎಂದು ನಂಬಿಕೊಂಡಿದ್ದಾರೆ.

  ಫೇಸ್‌ಬುಕ್‌ ನಲ್ಲಿ ನಕಲಿ ಖಾತೆ

  ಫೇಸ್‌ಬುಕ್‌ ನಲ್ಲಿ ನಕಲಿ ಖಾತೆ

  ಆದರೆ ಈ ಬಗ್ಗೆ ಭಾವನಾ ಸ್ಪಷ್ಟನೆ ನೀಡಿದ್ದು, 'ನಾನು ಫೇಸ್‌ಬುಕ್‌ ನಲ್ಲಿ ಇಲ್ಲವೇ ಇಲ್ಲ, ಹಾಗಿದ್ದರೂ ನನ್ನ ಹೆಸರಲ್ಲಿ ನಕಲಿ ತೆರೆದು ಪೋಸ್ಟ್ ಮಾಡಲಾಗುತ್ತಿದೆ' ಎಂದಿದ್ದಾರೆ.

  ನಕಲಿ ಖಾತೆ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ದೂರು

  ನಕಲಿ ಖಾತೆ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ದೂರು

  ನಕಲಿ ಖಾತೆ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿರುವ ಭಾವನಾ, ನಾನು ಫೇಸ್‌ಬುಕ್‌ನಲ್ಲಿ ಇಲ್ಲ, ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ನನ್ನ ಅಭಿಮಾನಿಗಳು ದಯವಿಟ್ಟು ಆ ಫೇಸ್‌ಬುಕ್ ಪೇಜ್‌ ಅನ್ನು ರಿಪೋರ್ಟ್ ಮಾಡಿ' ಎಂದು ಭಾವನಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ಜಾಕಿ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶ

  ಜಾಕಿ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶ

  ಮಲೆಯಾಳಂ ನಟಿ ಭಾವನಾ ಜಾಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು, ವಿಷ್ಣುವರ್ಧನ, ಟಗರು, ರೋಮಿಯೋ, ಯಾರೆ ಕೂಗಾಡಲಿ, ಟೋಲಿವಾಲಾ, ಬಚ್ಚನ್, ಚೌಕ, 99 ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಕನ್ನಡದ ನಿರ್ಮಾಪಕನೊಂದಿಗೆ ವಿವಾಹ

  ಕನ್ನಡದ ನಿರ್ಮಾಪಕನೊಂದಿಗೆ ವಿವಾಹ

  ಭಾವನಾ ಅವರು ಕನ್ನಡದ ಸಿನಿಮಾ ನಿರ್ಮಾಪಕರು ನವೀನ್ ಅವರನ್ನು ವಿವಾಹವಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಭಾವನಾ ಅವರ ಮುಂದಿನ ಸಿನಿಮಾಗಳು ಇನ್‌ಸ್ಪೆಕ್ಟರ್ ವಿಕ್ರಂ, ಭಜರಂಗಿ 2, ಗೋವಿಂದಾ-ಗೋವಿಂದಾ.

  English summary
  A fake Facebook account created in the name of actress Bhavana. She appeal to her fans to report that fake Facebook page.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X