ದರ್ಶನ್ ಹೆಸರಿನಲ್ಲಿ ಸಿಎಂ ಕುಮಾರಸ್ವಾಮಿಗೆ ಅವಹೇಳನ
Recommended Video

ದರ್ಶನ್ ಹೆಸರಿಗೆ ಮಸಿ ಬಳಿಯೋ ಕೆಲಸ ಮಾಡ್ತಿರೋದು ಯಾರು..? | Filmibeat Kannada
ಸಾಮಾಜಿಕ ಜಾಲತಾಣಗಳು ಎಷ್ಟು ಒಳ್ಳೆಯದೋ ಅಷ್ಟೆ ಕೆಟ್ಟದ್ದು. ಸೋಷಿಯಲ್ ಮೀಡಿಯಾವನ್ನು ಅನೇಕರು ದುರ್ಬಳಕೆ ಮಾಡುವ ಘಟನೆಗಳು ಪದೇ ಪದೇ ನಡೆಯುತ್ತಿದೆ. ಈಗ ನಟ ದರ್ಶನ್ ಅವರ ಹೆಸರಿನಲ್ಲಿ ಸಿಎಂ ಕುಮಾರಸ್ವಾಮಿಗೆ ಅವಹೇಳನ ಮಾಡಲಾಗಿದೆ.
ಕಿಡಿಗೇಡಿಗಳು ನಟ ದರ್ಶನ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ಆ ಖಾತೆಯ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಸರಣಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಕುಮಾರಸ್ವಾಮಿ ಬಗ್ಗೆ ಕೆಟ್ಟದಾಗಿ ಬರೆದು, ಅವರ ಫೋಟೋಗಳನ್ನು ವಿಕೃತವಾಗಿ ಬಿಂಬಿಸುತ್ತಿದ್ದರು. ಇದನ್ನು ಗಮನಿಸಿದ ಕುಮಾರಸ್ವಾಮಿ ಅಭಿಮಾನಿ ಸಂಘಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ದರ್ಶನ್ ಹೆಸರಿನ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಅವಹೇಳನ ಮಾಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ರಿಗೆ ದೂರು ಕೊಟ್ಟಿದ್ದಾರೆ. ದೂರು ಸ್ವೀಕರಿಸಿದ ಸುನೀಲ್ ಕುಮಾರ್ ಫೇಸ್ ಬುಕ್ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಕೊಳ್ಳುವುದಾಗಿ ಹೇಳಿದ್ದಾರೆ.
English summary
Fake facebook account created on kannada Actor Darshan's name.


Click it and Unblock the Notifications