»   » ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ನಂಬಿ ಮೋಸ ಹೋಗ್ಬೇಡಿ!

ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ನಂಬಿ ಮೋಸ ಹೋಗ್ಬೇಡಿ!

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಫೇಕ್ ಅಕೌಂಟ್ ಗಳಿಂದ ಸ್ಟಾರ್ ನಟರು ಅನುಭವಿಸುತ್ತಿರುವ ಕಿರಿಕಿರಿ ಅಷ್ಟಿಷ್ಟಲ್ಲ. ಗೋಲ್ಡನ್ ಸ್ಟಾರ್ ಗಣೇಶ್, ರಾಧಿಕಾ ಪಂಡಿತ್ ಮತ್ತು ಚಿಕ್ಕಣ್ಣ, ತಮ್ಮ ಹೆಸರಲ್ಲಿ ಸೃಷ್ಟಿಯಾಗಿದ್ದ ನಕಲಿ ಅಕೌಂಟ್ ಗಳ ವಿರುದ್ಧ ಸೈಬರ್ ಸಮರ ಸಾರಿದ್ದರು. ಇದೀಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸರದಿ.

ಹೌದು, 'ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಸಿನಿಮಾ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ರಕ್ಷಿತ್ ಶೆಟ್ಟಿ ಹೆಸರಲ್ಲಿ ಫೇಸ್ ಬುಕ್ ನಲ್ಲಿ ಅನೇಕ ಫೇಕ್ ಅಕೌಂಟ್ ಗಳಿವೆ. [ಕಾಮಿಡಿ ಕಿಲಾಡಿ ಚಿಕ್ಕಣ್ಣನ ಮಾತಿಗೆ ಬೆರಗಾದೀರಿ..ಜೋಕೆ.!]

Fake Facebook account : Kannada Actor Rakshit Shetty clarifies

ಅಂತಹ ಅಕೌಂಟ್ ಗಳನ್ನ ಹ್ಯಾಂಡಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹುಡುಗಿಯರ ಜೊತೆ ಲಲ್ಲೆ ಹೊಡೆದ ವಿಷಯ ರಕ್ಷಿತ್ ಶೆಟ್ಟಿ ಸ್ನೇಹಿತರೊಬ್ಬರಿಗೆ ಗೊತ್ತಾಗಿದೆ. ಕೂಡಲೆ ಅವರು ರಕ್ಷಿತ್ ಶೆಟ್ಟಿ ಗಮನಕ್ಕೆ ತಂದಿದ್ದಾರೆ.

ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ರಕ್ಷಿತ್ ಶೆಟ್ಟಿ, ಫೇಕ್ ಅಕೌಂಟ್ ಗಳನ್ನ ಡೀ-ಆಕ್ಟಿವೇಟ್ ಮಾಡಿಸಿದ್ದಾರೆ. ಈ ಬಗ್ಗೆ ತಮ್ಮ ಅಫೀಶಿಯಲ್ ಅಕೌಂಟ್ ನಲ್ಲಿ ಸ್ಟೇಟಸ್ ಕೂಡ ಹಾಕಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.

Thank you all. Seems like the fake profile is deleted finally. At least I can't find it anymore. But there are many more...

Posted by Rakshit Shetty on Monday, August 10, 2015


ರಕ್ಷಿತ್ ಶೆಟ್ಟಿ ಖುದ್ದು ಹೇಳಿಕೊಂಡಿರುವ ಪ್ರಕಾರ ಅವರು ಹ್ಯಾಂಡಲ್ ಮಾಡುತ್ತಿರುವ ಅಕೌಂಟ್ ಇದೊಂದೇ. ಇನ್ಯಾವುದೇ ಅಕೌಂಟ್ ನಿಂದ 'ನಾನೇ ರಕ್ಷಿತ್ ಶೆಟ್ಟಿ' ಅಂತ ಯಾರೇ ಹೇಳಿದರೂ ನಂಬಬೇಡಿ. ನಂಬಿ ಮೋಸ ಹೋಗಬೇಡಿ.

English summary
Kannada Actor Rakshit Shetty is the latest victim to the fake Facebook account. Rakshit Shetty identified those fake accounts and made sure that it is deleted from Facebook. Rakshit Shetty took his Facebook page to clear the air on this issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada