ಟಗರು ಸರೋಜ ಜೊತೆ ಚಿಕ್ಕಣ್ಣ ಮದುವೆ ಆಗಿರುವುದು ನಿಜವೇ?
ಹಾಸ್ಯನಟ ಚಿಕ್ಕಣ್ಣ ಮತ್ತು ಟಗರು ಸಿನಿಮಾ ಖ್ಯಾತಿಯ 'ಟಗರು ಸರೋಜ' ಅವರಿಗೆ ವಿವಾಹವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Recommended Video
ಇದಕ್ಕೆ ಸಂಬಂಧಿಸಿದ ಚಿತ್ರವೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಟಗರು ಸರೋಜ ಅವರು ಸ್ಪಷ್ಟನೆ ನೀಡಿದ್ದಾರೆ.
ಟಗರು ಸರೋಜ ಮತ್ತು ಚಿಕ್ಕಣ್ಣ ಅವರು ವಧು-ವರರಂತೆ ವೇಷ ಧರಿಸಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಬ್ಬರಿಗೂ ಮದುವೆಯಾಗಿದೆ ಶುಭಾಶಯ ಕೋರಿ ಎಂದು ಬರೆದಿದ್ದಾರೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ.

ವಿಡಿಯೋ ಹಾಕಿರುವ ಟಗರು ಸರೋಜಾ
ಈ ಬಗ್ಗೆ ಟಗರು ಸರೋಜ ಅವರು ಇನ್‌ಸ್ಟಾಗ್ರಾಂ ನಲ್ಲಿ ವಿಡಿಯೋ ಹಾಕಿದ್ದು, 'ನನ್ನ ಮತ್ತು ಚಿಕ್ಕಣ್ಣ ಅವರಿಗೆ ವಿವಾಹವಾಗಿದೆ ಎಂದು ಕೆಲವು ಟ್ರೋಲ್ ಪೇಜ್‌ಗಳು ಸುದ್ದಿ ಹರಡುತ್ತಿವೆ, ಆದರೆ ಇದು ಸುಳ್ಳಾಗಿದೆ' ಎಂದು ಹೇಳಿದ್ದಾರೆ.

'ಸಾಮಾಜಿಕ ಜಾಲತಾಣದಲ್ಲಿ ನಾನೇ ಹಾಕಿದ್ದೆ'
ಚಿಕ್ಕಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ನಾನೇ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ ಅದೇ ಚಿತ್ರವನ್ನು ಬಳಸಿಕೊಂಡು ನನಗೆ ಚಿಕ್ಕಣ್ಣ ಅವರಿಗೆ ವಿವಾಹವಾಗಿದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದಿದ್ದಾರೆ ಟಗರು ಸರೋಜಾ.

ವಧು-ವರರ ಪೋಷಾಕಿನಲ್ಲಿರುವ ಚಿತ್ರ
ಚಿಕ್ಕಣ್ಣ ಮತ್ತು ನಾನು ವಧು-ವರರ ಪೋಷಾಕಿನಲ್ಲಿರುವ ಈ ಚಿತ್ರ ಸಿನಿಮಾವೊಂದರ ಶೂಟಿಂಗ್‌ನಲ್ಲಿ ತೆಗೆದಿದ್ದು, ಆ ಚಿತ್ರವನ್ನು ಬಳಸಿ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದು ಟಗರು ಸರೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮದುವೆಯಾದಾಗ ಎಲ್ಲರಿಗೂ ಹೇಳುತ್ತೇನೆ: ಸರೋಜಾ
ನನಗೆ ಮದುವೆ ಆಗಿಲ್ಲ, ನನಗೆ ಅಧಿಕೃತವಾಗಿ ಮದುವೆಯಾದಾಗ ಎಲ್ಲರಿಗೂ ಹೇಳಿಯೇ ಮದುವೆ ಆಗುತ್ತೇನೆ. ಆಗ ನಿಮ್ಮನ್ನೂ ಕರೆಯುತ್ತೇನೆ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿರುವ ಟಗರು ಸರೋಜಾ, ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











