ಸಿನಿ ಇಂಡಸ್ಟ್ರಿಗೆ ಶಾಕ್ ನೀಡಿರುವ ತಾನ್ಯ ಹೋಪೆ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಏನು?
Recommended Video
ಯಜಮಾನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನ ಅಧಿಕೃತವಾಗಿ ಪ್ರವೇಶ ಮಾಡಿದ ನಟಿ ತಾನ್ಯ ಹೋಪೆ ಈಗ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಸತತ ಸಿನಿಮಾಗಳ ಮೂಲಕ ಸ್ಟಾರ್ ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.
ಯಜಮಾನ ಚಿತ್ರಕ್ಕೂ ಮೊದಲು ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾ ಮಾಡಿರುವ ತಾನ್ಯ ಅವರನ್ನ ಕಂಡ್ರೆ ಸೌತ್ ಇಂಡಸ್ಟ್ರಿಯ ಸ್ಟಾರ್ ನಟರೆಲ್ಲಾ ಒಮ್ಮೆ ಶಾಕ್ ಆಗ್ತಾರೆ. ಅದರಲ್ಲೂ ದರ್ಶನ್ ಅಂತಹ ನಟ ಆಕೆಯ ಬಗ್ಗೆ ಹೇಳಿದ ಮಾತು ಭಾರಿ ಕುತೂಹಲವನ್ನೇ ಹುಟ್ಟುಹಾಕಿತ್ತು.
'ಅವರು ಬ್ಯಾಕ್ ಗ್ರೌಂಡ್ ಕೇಳಿದ್ರೆ ನಾವು ಹತ್ತು ಅಡಿ ದೂರ ನಿಲ್ಲಬೇಕು. ದರ್ಶನ್ ಅಂತಹ 500 ಜನರನ್ನ ಕೊಂಡುಕೊಳ್ಳುವಂತಹ ಶಕ್ತಿ ಅವರಿಗೆ' ಎಂದಿದ್ದರು. ಡಿ ಬಾಸ್ ಅವರ ಈ ಮಾತು ತಾನ್ಯ ಫ್ಯಾಮಿಲಿ ಹಿನ್ನೆಲೆ ತಿಳಿಯಬೇಕು ಎಂಬ ಕುತೂಹಲ ಹುಟ್ಟಿಸಿತು. ಹಾಗಾಗಿ, ಆಕೆಯ ಬಗ್ಗೆ ಅಷ್ಟಾಗಿ ಮಾಹಿತಿ ಸಿಕ್ಕಿಲ್ಲ. ಆದ್ರೂ ಇಷ್ಟು ಮಾಹಿತಿ ಸಾಕು, ತಾನ್ಯ ಫ್ಯಾಮಿಲಿ ಬಗ್ಗೆ ಹೇಳುವುದಕ್ಕೆ. ಅಷ್ಟಕ್ಕೂ, ಏನಿದೆ ಅಂತಹದ್ದು? ಮುಂದೆ ಓದಿ....

ಮಂಗಳೂರು ಹುಡುಗಿ
ತಾನ್ಯ ಹೋಪೆ ಮೂಲತಃ ಕರ್ನಾಟಕದವರೇ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಇವರ ತಂದೆ ಬಹುದೊಡ್ಡ ಉದ್ಯಮಿ ಎಂದು ಹೇಳಲಾಗುತ್ತಿದೆ. ಆದ್ರೆ, ಅವರ ಬಗ್ಗೆ ಆಗಲಿ ಅಥವಾ ತಾಯಿ, ಮನೆಯವರ ಬಗ್ಗೆ ಆಗಲಿ ಒಂದೇ ಒಂದು ಸಣ್ಣ ಮಾಹಿತಿಯೂ ಲಭ್ಯವಾಗುತ್ತಿಲ್ಲ. ಬಟ್, ದೊಡ್ಡ ಶ್ರೀಮಂತ ಮನೆತನ ಎಂದಷ್ಟೇ ತಿಳಿದಿದೆ.

ಬಾಡಿಗಾರ್ಡ್, ಗನ್ ಮ್ಯಾನ್ ಇದ್ದೇ ಇರ್ತಾರೆ
ತಾನ್ಯ ಹೋಪ್ ಸಿನಿಮಾ ಸೆಟ್ ಗೆ ಬರುವಾಗ ಅವರ ಹಿಂದೆ ಮುಂದೆ ಸಾಕಷ್ಟು ಜನ ಬಾಡಿಗಾರ್ಡ್ ಮತ್ತು ಗನ್ ಮ್ಯಾನ್ ಗಳು ಇರ್ತಾರಂತೆ. ತಾನ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರಂತೆ. ಹೀಗಂತ ಸ್ವತಃ ದರ್ಶನ್ ಮತ್ತು ಅಭಿಷೇಕ್ ಅಂಬರೀಶ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಕೋಟ್ಯಧೀಶ್ವರ ಕುಟುಂಬದ ಮಗಳು ಎಂಬ ಕಾರಣಕ್ಕೆ ಇಷ್ಟೊಂದು ಹೈ ಸೆಕ್ಯುರಿಟಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ದರ್ಶನ್ ಅಂತವರನ್ನ 500 ಜನ ಕೊಂಡುಕೊಳ್ಳಬಹುದಂತೆ
ತಾನ್ಯ ಅವರ ಕುಟುಂಬದ ಬಗ್ಗೆ ನಿಖರವಾಗಿ ತಿಳಿದಿಲ್ಲ. ಆದ್ರೆ, ನಟ ದರ್ಶನ್ ಅವರ ಮಾತನ್ನ ಕೇಳಿದ್ರೆ ಬಹುಶಃ ಹೀಗೂ ಇರಬಹುದು ಎಂಬ ಕಲ್ಪನೆ ಕಣ್ಣಮುಂದೆ ಬರುತ್ತೆ. 'ಅವರು ಬ್ಯಾಕ್ ಗ್ರೌಂಡ್ ಕೇಳಿದ್ರೆ ನಾವು ಹತ್ತು ಅಡಿ ದೂರ ನಿಲ್ಲಬೇಕು. ದರ್ಶನ್ ಅಂತಹ 500 ಜನರನ್ನ ಕೊಂಡುಕೊಳ್ಳುವಂತಹ ಶಕ್ತಿ ಅವರಿಗೆ. ಆದ್ರೆ, ಸೆಟ್ ನಲ್ಲಿ ಆ ಹುಡುಗಿ ಯಾವುದೇ ಅಹಂ ತೋರಿಸಿಲ್ಲ. ಸಾಮಾನ್ಯ ನಟಿಯಂತೆ ವರ್ತಿಸುತ್ತಿದ್ದರು' ಎಂದು ದಾಸ ತಿಳಿಸಿದ್ದರು.

ಇಂಗ್ಲೆಂಡ್ ನಲ್ಲಿ ಓದಿದ್ದು
ಬೆಂಗಳೂರಿನ ಸಾಕ್ರೇಡ್ ಹಾರ್ಟ್ ಬಾಲಕಿಯರ ಶಾಲೆಯಲ್ಲಿ ಓದಿದ್ದ ತಾನ್ಯ ಹೋಪೆ, ಇಂಗ್ಲೆಂಡ್ ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಹುಶಃ ಬಹಳ ಖಾಸಗಿಯಾಗಿ ಬೆಳೆದ ತಾನ್ಯ ಅವರು ಲೈಫ್ ಸ್ಟೈಲ್ ಕೂಡ ದುಬಾರಿಯಾಗಿಯೇ ಇದ್ದಿರುತ್ತೆ.

2016ರಲ್ಲಿ ಮೊದಲ ಸಿನಿಮಾ
ಪುಣೆಯಲ್ಲಿ ಮಾಡಲಿಂಗ್ ತರಬೇತಿ ಪಡೆದುಕೊಂಡಿದ್ದಾರೆ. 2015ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕೊಲ್ಕತ್ತಾ ಮುಡಿಗೇರಿಸಿಕೊಂಡ ತಾನ್ಯ 2016ರಲ್ಲಿ ಸಿನಿಮಾರಂಗಕ್ಕೆ ಪ್ರವೇಶ ಮಾಡಿದರು. ಅಪ್ಪಟ್ಲೋ ಒಕ್ಕಡುಂಡೆವಾಡು ಚಿತ್ರದ ಮೂಲಕ ಟಾಲಿವುಡ್ ಗೆ ತಾನ್ಯ ಎಂಟ್ರಿಯಾದರು. ಎಸಿಪಿ ಪಾತ್ರದಲ್ಲಿ ಮೊದಲ ಸಲ ನಟಿಸಿದರು.

ಯಜಮಾನ ಮೊದಲ ಕನ್ನಡ ಸಿನಿಮಾ
ತೆಲುಗಿನಲ್ಲಿ ಮೊದಲ ಸಿನಿಮಾ ಮಾಡಿದ ತಾನ್ಯ ನಂತರ ಪಟೇಲ್ ಎಸ್.ಐ.ಆರ್, ಪೇಪರ್ ಬಾಯ್ ಚಿತ್ರದಲ್ಲಿ ನಟಿಸಿದರು. ತಡಂ ಎಂಬ ತಮಿಳು ಸಿನಿಮಾದಲ್ಲೂ ತಾನ್ಯ ಬಣ್ಣಹಚ್ಚಿದ್ದರು. ನಂತರ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಬಲಗಾಲಿಟ್ಟು ಬಂದ ತಾನ್ಯಗೆ ಈಗ ಅವಕಾಶಗಳು ಹುಡುಕಿಕೊಂಡು ಬರ್ತಿದೆ.

ಬೇಡಿಕೆ ಹೆಚ್ಚಿಸಿಕೊಂಡ ನಟಿ
ಯಜಮಾನ ಬಳಿಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಸಿನಿಮಾದಲ್ಲಿ ನಟಿಸಿದ ತಾನ್ಯ, ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ಅಮರ್ ಗೆ ನಾಯಕಿಯಾಗಿದ್ದಾರೆ. ಉಪೇಂದ್ರ ಅಭಿನಯಿಸುತ್ತಿರುವ ಹೋಮ್ ಮಿನಿಸ್ಟರ್ ಚಿತ್ರಕ್ಕೂ ಇವರೇ ಹೀರೋಯಿನ್. ಚಿರು ಸರ್ಜಾ ಜೊತೆ ಖಾಕಿ ಸಿನಿಮಾ ಮಾಡ್ತಿದ್ದಾರೆ. ಹೀಗೆ, ಪರಭಾಷೆ ಸುತ್ತಿ ಬಂದ ಕನ್ನಡದ ಹುಡುಗಿ ಈಗ ಸ್ಯಾಂಡಲ್ ವುಡ್ ನಲ್ಲೇ ನೆಲೆ ಕಂಡುಕೊಂಡಿದ್ದಾರೆ.

ಫ್ಯಾಮಿಲಿ ಬಗ್ಗೆ ಯಾರಿಗೂ ಗೊತ್ತಿಲ್ಲ
ಹಾಗ್ನೋಡಿದ್ರೆ, ತಾನ್ಯ ಹೋಪೆ ಅವರ ಫ್ಯಾಮಿಲಿ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಬಟ್, ಸಿನಿಮಾ ಇಂಡಸ್ಟ್ರಿಯವರು ತಾನ್ಯ ಬ್ಯಾಕ್ ಗ್ರೌಂಡ್ ಬಗ್ಗೆ ಹೇಳಿದಾಗ ತಿಳಿದುಕೊಳ್ಳಬೇಕು ಎಂಬ ಆಸೆ ಕಾಡದೆ ಇರಲ್ಲ. ಬಟ್, ಸದ್ಯಕ್ಕೆ ತಾನ್ಯ ಹೋಪೆ ಅವರನ್ನ ತೆರೆಮೇಲೆ ನೋಡಿ ಖುಷಿ ಪಡಿ.


Click it and Unblock the Notifications











