ಚಂದನ್-ನಿವೇದಿತಾಗೆ ವಿಚ್ಛೇದನ ಮಂಜೂರು; ನ್ಯಾಯಾಧೀಶರ ಮುಂದೆ ಇಬ್ಬರೂ ಹೇಳಿದ್ದು ಏನು?

ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ದೂರಾಗುತ್ತಿದ್ದಾರೆ. ಇಬ್ಬರೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಚರ್ಚೆಯ ನಡುವೆ ಇಬ್ಬರಿಗೂ ಇದೀಗ ವಿಚ್ಛೇದನ ಮಂಜೂರು ಆಗಿರುವ ಸುದ್ದಿ ಬಂದಿದೆ. ಬಹಳ ಹಿಂದೆಯೇ ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಆಗಲೇ ಅರ್ಜಿ ಸಲ್ಲಿಸಿದ್ದು ಇದೀಗ ವಿಚಾರಣೆ ನಡೆದು ವಿಚ್ಛೇದನ ಅಧಿಕೃತವಾಗಿದೆ.

ಪರಸ್ಪರ ಪ್ರೀತಿಸಿ ಮದುವೆ ಮದುವೆ ಆಗಿದ್ದ ಚಂದನ್- ನಿವೇದಿತಾ ದೂರಾಗಿರುವ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ 'ಕೋಟಿ' ಸಿನಿಮಾ ಪ್ರಮೋಷನ್ ವಿಡಿಯೋದಲ್ಲಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು 20 ದಿನಗಳ ಹಿಂದೆ ನಿವೇದಿತಾ ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್‌ಡೇ ಲವ್ ಎಂದು ಬರೆದು ಚಂದನ್ ಶೆಟ್ಟಿ ಪೋಸ್ಟ್ ಮಾಡಿದ್ದರು. ವಿಚ್ಛೇದನ ವಿಚಾರವನ್ನು ರಹಸ್ಯವಾಗಿ ಕಾಪಾಡಿಕೊಂಡಿದ್ದ ಜೋಡಿ ಇದೀಗ ದೂರಾಗಿದ್ದಾರೆ.

Family Court granted divorce to Bigg boss Fame Chandan shetty and Niveditha gowda

ಸಂಧಾನ ಫಲಪ್ರದವಾಗದ ಕಾರಣ ಅಂತಿಮವಾಗಿ ಬೆಂಗಳೂರು ಕೌಂಟುಂಬಿಕ ನ್ಯಾಯಾಲಯ ಚಂದನ್- ನಿವೇದಿತಾಗೆ ವಿಚ್ಛೇದನಕ್ಕೆ ಅಸ್ತು ಎಂದಿದೆ. ಕೇಸ್ ನಂಬರ್-Mc 3388-/2024, 13b ಫ್ಯಾಮಿಲಿ ಕೋರ್ಟ್ ಆಕ್ಟ್ ಅಡಿ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ. ನ್ಯಾಯಾಧೀಶರ ಮುಂದೆ ಇಬ್ಬರೂ "ಪರಸ್ಪರ ದೂರಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಕಾರಣ ಕೇಳಿದಾಗ ಸ್ವಲ್ಪ ಭಿನ್ನಾಭಿಪ್ರಾಯ ಇದೆ, ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ, ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ" ಎಂದಿದ್ದಾರೆ.

ಇನ್ನು ಚಂದನ್ ಶೆಟ್ಟಿ ಮಗು ಪಡೆಯುವ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದರು. ಆದರೆ ನಿವೇದಿತಾಗೆ ತಾಯಿ ಆಗುವ ಆಸಿ ಇರಲಿಲ್ಲ. ಬಣ್ಣದಲೋಕದಲ್ಲಿ ಸಾಧಿಸುವ ಆಸಕ್ತಿ ಇತ್ತು. ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರೂ ಚರ್ಚೆ ನಡೆಸಿದ್ದರು. ಆದರೆ ಮಗು ಮಾಡಿಕೊಂಡರೆ ಕರಿಯರ್ ಕಟ್ಟಿಕೊಳ್ಳೋದು ಕಷ್ಟ ಎನ್ನುವ ಕಾರಣಕ್ಕೆ ಡಿವೋರ್ಸ್ ನಿರ್ಧಾರಕ್ಕೆ ಬಂದರು ಎನ್ನಲಾಗ್ತಿದೆ. ಇನ್ನು ಆಕೆಗೆ ಇತ್ತೀಚೆಗೆ ಹೆಚ್ಚು ಸಿನಿಮಾ ಅವಕಾಶಗಳು ಬರುತಿತ್ತು.

Family Court granted divorce to Bigg boss Fame Chandan shetty and Niveditha gowda

ಮತ್ತೊಂದು ಕಡೆ ಚಂದನ್ ಶೆಟ್ಟಿ ಕೂಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ರ್ಯಾಪ್ ಸಾಂಗ್‌ ಮಾಡುತ್ತಾ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 4 ದಿನದ ವರೆಗೂ ಇಬ್ಬರು ಒಟ್ಟಿಗೆ ಒಂದೇ ಮನೆಯಲ್ಲೇ ಇದ್ರು ಎನ್ನಲಾಗ್ತಿದೆ.

ವಿಚ್ಛೇದನ ಒಪ್ಪಿಗೆ ಪತ್ರಕ್ಕೆ ಸಹಿಮಾಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೋರ್ಟ್‌ನಿಂದ ಹೊರಬಂದಿದ್ದಾರೆ. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಹೊರಟಿದ್ದಾರೆ. ಒಪ್ಪಿಗೆ ಪತ್ರಕ್ಕೆ ಸಹಿ ಹಿನ್ನಲೆ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿದೆ.

4 ವರ್ಷಗಳ ಹಿಂದೆ ಮದುವೆ ಆಗಿದ್ದ ಜೋಡಿ ಇದೀಗ ದೂರಾವಾಗಿದ್ದಾರೆ. ಈ ಬಗ್ಗೆ ಇಬ್ಬರೂ ಇನ್ನು ಪ್ರತಿಕ್ರಿಯಿಸಿಲ್ಲ. ಶೀಘ್ರದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

More from Filmibeat

English summary
Family Court grants divorce to Chandan shetty, his wife Niveditha gowda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X