For Quick Alerts
  ALLOW NOTIFICATIONS  
  For Daily Alerts

  ಫ್ಯಾಮಿಲಿ ಪವರ್ ನಿಂದ ಬೆಳಗಿತು ಹಲವರ ಬಾಳು

  By Pavithra
  |

  ರಿಯಾಲಿಟಿ ಶೋಗಳನ್ನ ಮಾಡುವುದು ಪ್ರೇಕ್ಷಕರನ್ನ ವಾಹಿನಿಗಳತ್ತ ಸೆಳೆಯಲು ಎನ್ನುವ ಮಾತಿದೆ. ಆದರೆ ಶೋಗಳ ಮೂಲಕ ಅನೇಕ ಜನರಿಗೆ ಸಹಾಯವನ್ನೂ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟಿದೆ ಫ್ಯಾಮಿಲಿ ಪವರ್ ಕಾರ್ಯಕ್ರಮ. ಸಾಮಾನ್ಯವಾಗಿ ರಿಯಾಲಿಟಿ ಶೋ ನಲ್ಲಿ ಭಾಗಿ ಆದ ಜನರು ಒಂದಿಷ್ಟು ಹಣವನ್ನ ಗಳಿಕೆ ಮಾಡಿಕೊಂಡು ಹೋಗೋಣ ಎನ್ನುವ ಆಲೋಚನೆಯಲ್ಲಿಯೇ ಬಂದಿರುತ್ತಾರೆ.

  ಆದರೆ ಕೆಲವರಿಗೆ ಮಾತ್ರ ಗೆದ್ದ ಹಣವನ್ನು ಮತ್ತೊಬ್ಬರಿಗೆ ನೀಡಿ ಸಹಾಯ ಮಾಡುವ ಆಲೋಚನೆ ಇರುತ್ತದೆ. ಅಂತದ್ದೆ ನಿದರ್ಶನಗಳು ಫ್ಯಾಮಿಲಿ ಪವರ್ ಶೋ ನಲ್ಲಿ ನಡೆದಿದೆ. ಫ್ಯಾಮಿಲಿ ಪವರ್ ಮೊದಲ ಆವೃತಿಯಲ್ಲಿ ಮನಮುಟ್ಟುವಂತಹ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿ ಆಗಿದೆ.

  ಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿ

  ಅಧಿಕಾರಿಯೊಬ್ಬರು ತಮ್ಮ ಕುಟುಂಬ ಸಮೇತರಾಗಿ ಬಂದು ಆಟವಾಡಿ ಗೆದ್ದ ಹಣವನ್ನು ದೇಶಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಯೋಧನ ಕುಟುಂಬಕ್ಕೆ ನೀಡಿದರು. ಈ ಮೂಲಕ ಫ್ಯಾಮಿಲಿ ಪವರ್ ಶೋ ನಲ್ಲಿ ಬೇರೆಯವರಿಗೆ ಕೊಟ್ಟು ಖುಷಿ ಪಡಬಹುದು ಎಂದು ತೋರಿಸಿಕೊಟ್ಟರು.

  ನಂತರ ಬಂದ ಸಾಫ್ಟ್ ವೇರ್ ಎಂಜಿನಿಯರ್ ಕುಟುಂಬ ಗೆದ್ದ ಸಂಪೂರ್ಣ ಹಣವನ್ನು ಎದುರಾಳಿ ಕುಟುಂಬದ ಮಗುವಿನ ಚಿಕಿತ್ಸೆಗಾಗಿ ಕೊಟ್ಟು ಚಿತ್ರೀಕರಣ ಸ್ಥಳದಲ್ಲಿದ್ದ ಹಾಗೂ ನೋಡುಗರ ಕಣ್ಣಿನಲ್ಲಿ ನೀರು ತರಿಸಿದ್ದರು.

  ಗ್ರಾಂಡ್ ಫೈನಲ್ಸ್ ನಲ್ಲಿಯೂ ಅಂತದ್ದೇ ವಿಶೇಷವಾದ ಕೆಲಸಕ್ಕೆ ಧಾರಾವಾಹಿ ಕಲಾವಿದರು ಮುಂದಾಗಿದ್ದಾರೆ. ಶ್ರವಣ ದೋಷವಿರುವ ಮೂರು ವರ್ಷದ ಪ್ರಚೇತ್ ಎಂಬ ಪುಟ್ಟ ಬಾಲಕನ ಚಿಕಿತ್ಸೆಗಾಗಿ ಫ್ಯಾಮಿಲಿ ಪವರ್ ನಲ್ಲಿ ಆಟ ಆಡಲಿದ್ದಾರೆ. ಇನ್ನೂ ವಿಶೇಷ ಅಂದರೆ ಕಲರ್ಸ್ ಕನ್ನಡ ವಾಹಿನಿ ಮಗುವಿನ ಚಿಕಿತ್ಸೆಗೆ ಹಣ ಹೆಚ್ಚು ಖರ್ಚಾಗುತ್ತದೆ ಎನ್ನುವ ಉದ್ದೇಶದಿಂದಾಗಿ ಬಹುಮಾನದ ಹಣ ಹತ್ತು ಲಕ್ಷದಿಂದ 15 ಲಕ್ಷಕ್ಕೆ ಏರಿಸಿದ್ದಾರೆ.

  English summary
  Kannada serial stars competing against each other in Family Power reality show. Cash prize of 15 lakh rupees that will be magnanimously donated to a charitable cause.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X