twitter
    For Quick Alerts
    ALLOW NOTIFICATIONS  
    For Daily Alerts

    ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಬಿಸ್ವಜಿತ್ ಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ

    |

    ಭಾರತೀಯ ಸಿನಿಮಾರಂಗದ ಖ್ಯಾತ ಕಲಾವಿದ, ಹಿರಿಯ ನಟ ಹಾಗೂ ನಿರ್ದೇಶಕ ಬಿಸ್ವಜಿತ್ ಚಟರ್ಜಿ ಅವರಿಗೆ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರ ಅತ್ಯುನ್ನತ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

    ಗೋವಾದಲ್ಲಿ ನಡೆಯುತ್ತಿರುವ 51ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಮುಖ ಪ್ರಶಸ್ತಿಗಳನ್ನು ಪ್ರಕಟ ಮಾಡಿದರು. ಮಾರ್ಚ್ 21ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಸ್ವಜಿತ್ ಚಟರ್ಜಿಗೆ ವರ್ಷದ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್

    ಬಿಸ್ವಜಿತ್ ಚಟರ್ಜಿ ಹಿಂದಿ ಮತ್ತು ಬೆಂಗಾಲಿ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ. ಗಾಯಕರಾಗಿಯೂ ಖ್ಯಾತಿಗಳಿಸಿದ್ದಾರೆ. ಬಿಸ್ವಜಿತ್ ಚಟರ್ಜಿ ಅವರು ಬೀಸ್ ಸಾಲ್ ಬಾತ್ ಚಿತ್ರದ ಕುಮಾರ್ ವಿಜಯ್ ಸಿಂಗ್ ಪಾತ್ರದ ಮೂಲಕ ಹೆಚ್ಚು ಖ್ಯಾತಿಗಳಿಸಿದ್ದರು.

    Famous Actress Biswajit Chatterjee awarded Indian Personality of the Year

    ಕೋಹ್ರಾ, ಏಪ್ರಿಲ್ ಫೂಲ್, ಮೇರೆ ಸನಮ್, ನೈಟ್ ಇನ್ ಲಂಡನ್, ದೋ ಕಾಲಿಯಾನ್, ಕಿಸ್ಮತ್ ಸೇರಿದಂತೆ ಅನೇಕ ಪ್ರಸಿದ್ಧ ಸಿನಿಮಾಗಳಿಲ್ಲಿ ನಟಿಸಿದ್ದಾರೆ. ಹೆಸರಾಂತ ನಟಿಯರಾದ ಆಶಾ ಪರೇಖ್, ವಹೀದಾ ರೆಹಮಾನ್, ಮುಮ್ತಾಜ್, ಮಾಲಾ ಸಿನ್ಹ ಮತ್ತು ರಾಜಶ್ರೀ ಅವರೊಂದಿಗೆ ನಟಿಸಿದ್ದಾರೆ. ಬೆಂಗಾಲಿಯ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ.

    51ನೇ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 16ರಿಂದ ಪ್ರಾರಂಭವಾಗಿದೆ. ಕನ್ನಡದ ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ ಕಿಚ್ಚ ಸುದೀಪ್, 'ಪ್ರತಿಯೊಬ್ಬರಿಗೆ ಕನ್ನಡ ಚಿತ್ರರಂಗದ ಪರವಾಗಿ, ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ' ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಗೋವಾದಲ್ಲಿ ಕನ್ನಡತನ ಸಾರಿದರು.

    51ನೇ ಗೋವಾ ಅಂತರರಾಷ್ಟ್ರೀಯ ಸಿನಿಮಾ ಉತ್ಸವ ಜನವರಿ 16 ರಿಂದ ಜನವರಿ 24 ರ ವರೆಗೆ ನಡೆಯಲಿದೆ. ವಿಶ್ವದ ಅನೇಕ ದೇಶಗಳ ಹಲವಾರು ಸಿನಿಮಾಗಳು ಸಿನಿಮಾ ಉತ್ಸವದಲ್ಲಿ ಪ್ರದರ್ಶನ ಕಾಣಲಿವೆ. ವಿವಿಧ ದೇಶಗಳ 224 ಸಿನಿಮಾಗಳು ಪ್ರದರ್ಶನ ಕಾಣುತ್ತಿದೆ.

    English summary
    Famous Actress Biswajit Chatterjee awarded Indian Personality of the Year.
    Sunday, January 17, 2021, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X