For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಜೊತೆ ಜಯಪ್ರದಾ ನಟಿಸಿದ ಈ ನಾಲ್ಕು ಸಿನಿಮಾಗಳು ಸೂಪರ್ ಹಿಟ್

  |

  ಬಹುಭಾಷಾ ನಟಿ ಜಯಪ್ರದಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸದ್ಯ ಸಿನಿಮಾ ರಂಗದಿಂದ ದೂರ ಸರಿದಿರುವ ಜಯಪ್ರದಾ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಜಯಪ್ರದಾ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಮಿಂಚಿರುವ ಜಯಪ್ರದಾ ಮೂಲತಃ ಆಂಧ್ರ ಪ್ರದೇಶದವರು.

  ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಪ್ರದಾ ನಂತರ ಬಹುಭಾಷೆ ನಟಿಯಾಗಿ ಖ್ಯಾತಿಗಳಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಜಯಪ್ರದಾ ಸ್ಯಾಂಡಲ್ ವುಡ್ ನಲ್ಲಿಯೂ ಅನೇಕ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅದರಲ್ಲೂ ಡಾ. ರಾಜ್ ಕುಮಾರ್ ಜೊತೆಗೆ ಅತೀ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಜ್ ಕುಮಾರ್ ಜೊತೆ ನಾಯಕಿಯಾಗಿ ಮಿಂಚಿದ ಚಿತ್ರಗಳು ಜಯಪ್ರದಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿವೆ.

  57ನೇ ವರ್ಷದ ಹುಟ್ಟಹಬ್ಬದ ಸಂಭ್ರಮದಲ್ಲಿರುವ ಜಯಪ್ರದಾ ಸದ್ಯ ಭಾರತೀಯ ಜನತಾ ಪಾರ್ಟಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಿನಿಮಾ ಕ್ಷೇತ್ರದಿಂದ ದೂರ ಸರಿದರು ಜಯಪ್ರದಾ ಸಿನಿಮಾಗಳು ಮಾತ್ರ ಅಭಿಮಾನಿಗಳನ್ನು ರಂಜಿಸುತ್ತಲೇ ಇವೆ. ಕನ್ನಡದಲ್ಲಿ ಡಾ ರಾಜ್ ಕುಮಾರ್ ಜೊತೆ ಅಭಿನಯಿಸಿದ ಚಿತ್ರಗಳು ಯಾವುವು? ಮುಂದೆ ಓದಿ..

  ಅಂಬಿ ಅಂತ್ಯಕ್ರಿಯೆ ವೇಳೆ ಡಿಸಿಪಿ ಅಣ್ಣಾಮಲೈ-ನಟಿ ಜಯಪ್ರದ ನಡುವೆ ಮಾತಿನ ವಾರ್ ಅಂಬಿ ಅಂತ್ಯಕ್ರಿಯೆ ವೇಳೆ ಡಿಸಿಪಿ ಅಣ್ಣಾಮಲೈ-ನಟಿ ಜಯಪ್ರದ ನಡುವೆ ಮಾತಿನ ವಾರ್

  'ಸನಾದಿ ಅಪ್ಪಣ್ಣ'ನ ಜೊತೆಯಾದ ಜಯಪ್ರದಾ

  'ಸನಾದಿ ಅಪ್ಪಣ್ಣ'ನ ಜೊತೆಯಾದ ಜಯಪ್ರದಾ

  'ಸನಾದಿ ಅಪ್ಪಣ್ಣ' ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಜಯಪ್ರದಾ ಅವರಿಗೆ ಮೊದಲ ಸಿನಿಮಾನೇ ದೊಡ್ಡ ಮಟ್ಟಕ್ಕೆ ಸಕ್ಸಸ್ ತಂದು ಕೊಟ್ಟಿತ್ತು. ಡಾ.ರಾಜ್ ಕುಮಾರ್ ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದ ಜಯಪ್ರದಾ ಬಸಂತಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದರು. 1977 ರಲ್ಲಿ ರಿಲೀಸ್ ಆಗಿದ್ದ 'ಸನಾದಿ ಅಪ್ಪಣ್ಣ' ವಿಜಯ್ ಸಾರಥ್ಯದಲ್ಲಿ ಮೂಡಿಬಂದಿತ್ತು.

  'ಸಂಗೊಳ್ಳಿರಾಯಣ್ಣ' ನಂತರ ಮತ್ತೆ ಕನ್ನಡಕ್ಕೆ ಬಂದ ಜಯಪ್ರದಾ'ಸಂಗೊಳ್ಳಿರಾಯಣ್ಣ' ನಂತರ ಮತ್ತೆ ಕನ್ನಡಕ್ಕೆ ಬಂದ ಜಯಪ್ರದಾ

  'ಹುಲಿಯ ಹಾಲಿನ ಮೇವು' ಎರಡನೇ ಸಿನಿಮಾ

  'ಹುಲಿಯ ಹಾಲಿನ ಮೇವು' ಎರಡನೇ ಸಿನಿಮಾ

  ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಿದ್ದ ಜಯಪ್ರದಾ ಅವರನ್ನು ಮತ್ತೆ ಎರಡನೇ ಬಾರಿಗೆ ಕನ್ನಡಕ್ಕೆ ಕರೆತಂದ ಸಿನಿಮಾ 'ಹುಲಿಯ ಹಾಲಿನ ಮೇವು'. ಮತ್ತದೆ ನಿರ್ದೇಶಕ ವಿಜಯ್ ಮತ್ತು ಮೇರು ನಟ ಡಾ ರಾಜ್ ಕುಮಾರ್ ಜೊತೆ ಎರಡನೇ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಜಯಪ್ರದಾ ಪಾಲಿಗೆ ದೊರಕಿತ್ತು. ಈ ಸಿನಿಮಾ ಕೂಡ ಜಯಪ್ರದಾ ಅವರಿಗೆ ಕನ್ನಡದಲ್ಲಿ ಮತ್ತೊಂದು ಯಶಸ್ಸು ತಂದುಕೊಟ್ಟ ಸಿನಿಮಾವಾಗಿದೆ.

  ವಿದ್ಯಾಧರೆಯಾಗಿ ಕನ್ನಡಿಗರ ಮನಗೆದ್ದ ಜಯಪ್ರದಾ

  ವಿದ್ಯಾಧರೆಯಾಗಿ ಕನ್ನಡಿಗರ ಮನಗೆದ್ದ ಜಯಪ್ರದಾ

  ಜಯಪ್ರದಾ ಅಭಿನಯಿಸಿದ ವಿದ್ಯಾಧರೆ ಪಾತ್ರವನ್ನು ಕನ್ನಡ ಚಿತ್ರಪ್ರಿಯರು ಮರೆಯಲು ಸಾದ್ಯವಿಲ್ಲ. ಡಾ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಕವಿರತ್ನ ಕಾಳಿದಾಸ' ಕೂಡ ಒಂದು. ಈ ಸಿನಿಮಾದಲ್ಲಿ ಜಯಪ್ರದಾ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕ ಮನಗೆದ್ದಿದ್ದರು. ಅಲ್ಲದೇ ಈ ಸಿನಿಮಾ ಮೂಲಕ ರಾಜ್ ಕುಮಾರ್ ಜೊತೆ ಹ್ಯಾಟ್ರಿಕ್ ಹಿಟ್ ಕೂಡ ಪಡೆದಿದ್ದರು.

  'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

  'ಶಬ್ದವೇಧಿ' ಯಲ್ಲಿ ಜೊತೆಯಾಗಿದ್ದ ಜಯಪ್ರದಾ

  'ಶಬ್ದವೇಧಿ' ಯಲ್ಲಿ ಜೊತೆಯಾಗಿದ್ದ ಜಯಪ್ರದಾ

  ಡಾ.ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ 'ಶಬ್ದವೇಧಿ'ಯಲ್ಲಿ ಜಯಪ್ರದಾ ನಾಯಕಿಯಾಗಿ ಮಿಂಚಿದ್ರು. ವತ್ಸಲಾ ಪಾತ್ರದ ಮೂಲಕ ಮತ್ತೊಮ್ಮೆ ರಾಜ್ ಕುಮಾರ್ ಜೊತೆ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ರು. ಜಯಪ್ರದಾ ಅಭಿನಯಕ್ಕೆ ಅಷ್ಟೆ ತೂಕದ ದ್ವನಿ ನೀಡುತ್ತಿದ್ದು ನಟಿ ಮತ್ತು ಗಾಯಕಿ ಬಿ ಜಯಶ್ರೀ. ಜಯಶ್ರೀ ಅವರ ಖಡಕ್ ದ್ವನಿ ಸ್ಯಾಂಡಲ್ ವುಡ್ ನಲ್ಲಿ ಜಯಪ್ರದಾ ಅವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತ್ತು.

  English summary
  Famous actress Jayaprada acted with dr.Raj Kumar in four Kannada movies. 'Sanaadi Appanna' is Jayaprada first movie in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X