ಅಪ್ಪು ನಿಧನಕ್ಕೆ ಬಣ್ಣದಿಂದ ಗೌರವ ಸಲ್ಲಿಸಿದ ಕೋಟೆಗದ್ದೆ ರವಿ
ನಟ ಪುನೀತ್ ರಾಜ್‌ಕುಮಾರ್ ಮಣ್ಣಲ್ಲಿ ಮಣ್ಣಾಗಿದ್ದಾರೆ. ತಾಯಿಯ ಪಕ್ಕದಲ್ಲೆ ಪುನೀತ್ ಜಾಗ ಪಡೆದಿದ್ದಾರೆ. ಅದೆಷ್ಟೋ ಅಭಿಮಾನಿಗಳು ಪುನೀತ್ ನಿಧನಕ್ಕೆ ಈಗಲೂ ಕಂಬನಿ ಮಿಡಿಯುತ್ತಿದ್ದಾರೆ. ಪುನೀತ್ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮಂದಿ ಪುನೀತ್ ಸಾವಿಗೆ ಇದೀಗ ತಮ್ಮದೇ ಶೈಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅದೆಷ್ಟೋ ಮಂದಿ ಅಭಿಮಾನಿಗಳು ಶೋಕಸಾಗರದಲ್ಲಿ ಇದ್ದಾರೆ. ಕುಟುಂಬ ಸದಸ್ಯರಿಗೆ ಪುನೀತ್ ಸಾವು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಣ್ಣಲ್ಲಿ ಲೀನವಾಗಿರುವ ಅಪ್ಪುವನ್ನು ನೆನೆದು ಈಗ ಅಭಿಮಾನಿಗಳು ಹಲವು ರೀತಿಯಲ್ಲಿ ಭಾವ ಪೂರ್ವ ನಮನ ಸಲ್ಲಿಸುತ್ತಿದ್ದಾರೆ. ಖ್ಯಾತ ಕಲಾಕಾರ ಕೋಟೆಗದ್ದೆ ರವಿಯವರು ವಿಶೇಷವಾಗಿ ಅಪ್ಪು ಸಾವಿಗೆ ಸ್ಪೀಡ್ ಪೈಂಟಿಂಗ್ ಮಾಡಿ ನಮನ ಸಲ್ಲಿಸಿದ್ದಾರೆ.
ಸ್ಪೀಡ್ ಪೈಂಟಿಂಗ್‌ನಲ್ಲಿ ಪುನೀತ್ ಅವರ ಭಾವಚಿತ್ರ ರಚನೆ ಮಾಡಿದ್ದಾರೆ.ಈ ಮೂಲಕ ಪುನೀತ್ ಅವರಿಗೆ ಗೌರವ ಸಲ್ಲಿಸಿದ್ದಾರೆ ಕೋಟೆಗದ್ದೆ ರವಿ. ಇವರು ಈಗಾಗಲೇ ಸಾಕಷ್ಟು ವಿಭಿನ್ನ ಕಲಾಕೃತಿಗಳನ್ನ ತನ್ನ ಕುಂಚದಿಂದ ಬಿಡಿಸಿದ್ದಾರೆ. ಸ್ಪೀಡ್ ಪೈಂಟಿಂಗ್ ಇವರ ವಿಶೇಷತೆ. ಸಾಕಷ್ಟು ಪ್ರಶಸ್ತಿಗಳನ್ನು ಕೂಡ ತನ್ನ ವಿಭಿನ್ನ ರೀತಿಯ ಕಲೆಗೆ ಪಡೆದುಕೊಂಡಿರುವ ಇವರು ಪುನೀತ್ ಅವರನ್ನು ಕೂಡ ತುಂಬಾ ಇಷ್ಟ ಪಡುತ್ತಿದ್ದರು. ಅಪ್ಪು ಅಗಲಿಕೆಗೆ ಮನನೊಂದಿದ್ದ ಇವರು ತನ್ನದೇ ಶೈಲಿಯಲ್ಲಿ ಆರ್ಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಸಾಕಷ್ಟು ಮಂದಿ ಈ ಪೈಂಟಿಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಫಿಲ್ಮೀಬೀಟ್ ಜೊತೆ ಕೂಡ ಕೋಟೆಗದ್ದೆ ರವಿ ಅವರು ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಪುನೀತ್ ಬನಶಂಕರಿ 2ನೇ ಹಂತದಲ್ಲಿರುವ ಇವರ ಫಿಡಲಿಟಸ್ ಗ್ಯಾಲರಿಗೆ ಸಧ್ಯದಲ್ಲೆ ಬರಬೇಕಾಗಿತ್ತಂತೆ. ಅವರು ಬರುವಾಗ ಅವರ ಮುಂದೆಯೇ ಈ ಸ್ಪೀಡ್ ಪೈಂಟಿಂಗ್ ಮಾಡಬೇಕು ಅಂದುಕೊಂಡಿದ್ದರು. ಅವರು ಬರುವ ಮುಂಚೆಯೇ ಅವರನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಅವರಿಗೆ ಬಣ್ಣದ ಮೂಲಕ ನಮನ ಸಲ್ಲಿಸಲು ಮುಂದಾದ ಇವರು ಈ ರೀತಿ ಸಂತಾಪ ಸೂಚಿಸಿದ್ದಾರೆ.
ಈ ಸ್ಪೀಡ್ ಫೈಂಟಿಂಗ್ ಅನ್ನು ಕೇವಲ 2 ನಿಮಿಷದಲ್ಲಿ ಮಾಡಿ ಮುಗಿಸಿರುವ ಕೋಟೆಗದ್ದೆ ರವಿಯವರಿಗೆ ಗ್ಯಾಲರಿ ಫೌಂಡರ್ ಅಚ್ಯುತ್ ಗೌಡ ಅವರು ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗೇ ಮಾತು ಮುಂದುವರೆಸಿದ ಅವರು ಕೆಲವೇ ಕೆಲವು ಕಲಾವಿದರಷ್ಟೆ ಈ ಸ್ಪೀಡ್ ಪೈಂಟಿಂಗ್ ಕಲಿತಿರುತ್ತಾರೆ ಅದರಲ್ಲಿ ನಾನು ಒಬ್ಬ, ಈ ಬಗ್ಗೆ ನನಗೆ ಹೆಮ್ಮೆ ಇದೆ. ಇದರಿಂದಲೇ ಅಪ್ಪು ಅವರ ಪೋಟ್ರೇಟ್ ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ.

ಈ ಸ್ಪೀಡ್ ಪೈಟಿಂಗ್ ಅನ್ನು 5 ಅಡಿ ಎತ್ತರ 4 ಅಡಿ ಅಗಲದ ಕ್ಯಾನ್ವಾಸ್‌ನಲ್ಲಿ ಬಿಡಿಸಲಾಗಿದ್ದು. ಆಕ್ಕ್ರಿಲಿಕ್ ಬಣ್ಣದ ಫೈಟಿಂಗ್ ಅನ್ನು ಬಳಸಲಾಗಿದೆ ಎಂದು ಕೋಟೆಗದ್ದೆ ರವಿ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಕಲಾವಿದರು ನಮ್ಮನ್ನು ಅಗಲಿದಾಗ ನಮ್ಮ ಗ್ಯಾಲರಿಯಿಂದ ಚಿತ್ರ ನಮನ ಸಲ್ಲಿಸುತ್ತೇವೆ. ಇದು ಒಂದು ತರ ಸಮಾಧಾನ ನೀಡುತ್ತೆ ಎಂದು ಹೇಳುವ ಅವರು ಸದ್ಯ ಫಿಡಲಿಟರ್ ಆರ್ಟ್ ಗ್ಯಾಲರಿಯಲ್ಲಿ ಮುಖ್ಯ ಕಲಾವಿದರಾಗಿ ಕೆಲಸ ಕೂಡ ಮಾಡುತ್ತಿದ್ದಾರೆ. ಅಪ್ಪು ಸಾವಿನ ಬೇಸರದ ಜೊತೆಗೆ ಫಿಲ್ಮಿಬೀಟ್ ಜೊತೆ ಮಾತು ಹಂಚಿಕೊಂಡ ಅವರು ಡಾ ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿದಾಗಲೂ ಈ ರೀತಿ ಫಿಡಲಿಟರ್ ಗ್ಯಾಲರಿಯಲ್ಲಿ ಭಾವಚಿತ್ರವನ್ನು ಮಾಡಿ ಬಣ್ಣದ ಮೂಲಕ ಗೌರವ ನೀಡಿದ್ದೆವು ಎಂದಿದ್ದಾರೆ.


Click it and Unblock the Notifications











