For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಚಿತ್ರದ ಬಿಜಿಎಂ ಝಲಕ್ ಹಂಚಿಕೊಂಡ ಪ್ರಶಾಂತ್ ನೀಲ್

  |

  ಕನ್ನಡ ಚಿತ್ರಪ್ರಿಯರು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೆ ಕೆಜಿಎಫ್-2 ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಚಾಪ್ಟರ್-1 ಮೂಲಕ ಸಂಚಲನ ಸೃಷ್ಟಿಸಿ ಇಡೀ ಭಾರತೀಯ ಚಿತ್ರರಂಗವೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ. ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

  ದಿನದಿಂದ ದಿನಕ್ಕೆ ಅಭಿಮಾನಿಗಳ ನಿರೀಕ್ಷೆಯ ಮಟ್ಟ ಹೆಚ್ಚಿಸುತ್ತಿರುವ ಕೆಜಿಎಫ್-2 ಚಿತ್ರದಿಂದ ಯಾವುದೆ ಅಪ್ ಡೇಟ್ ಸಿಗುತ್ತಿಲ್ಲ ಎನ್ನುವುದು ಅಭಿಮಾನಿಗಳ ನಿರಾಸೆ. ಇತ್ತೀಚಿಗಷ್ಟೆ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಚಿತ್ರತಂಡ ಸೇರಿಕೊಂಡಿರುವ ವಿಚಾರ ಹಂಚಿಕೊಂಡಿದ್ದ ಚಿತ್ರತಂಡವೀಗ ಚಾಪ್ಟರ್-2 ಬಿಜಿಎಂ ಅನ್ನು ಶೇರ್ ಮಾಡಿ ಅಭಿಮಾನಿಗಳ ಮನ ತಣಿಸಿದೆ.

  ಕೆಜಿಎಫ್-2 ಚಿತ್ರದ ಬಿಜಿಎಂ ಹೇಗಿರಲಿದೆ ಎನ್ನುವ ಒಂದು ಚಿಕ್ಕ ಝಲಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಸದ್ಯ ಚಿತ್ರದ ಟ್ಯೂನ್ ಕೆಲಸಗಳು ನಡೆಯುತ್ತಿವೆ. ಅತ್ಯುತ್ತಮ ಬಿಜಿಎಂಗಳಲ್ಲಿ ಒಂದಾಗಿರುವ "ಭೀಕರ ಇವ ಭೋರ್ಗರ..."ಎನ್ನುವ ಟ್ಯ್ರಾಕ್ ಅನ್ನು ಶೇರ್ ಮಾಡಿ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

  ಸದ್ಯ ಕೆಜಿಎಎಫ್-2 ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಲಾಗಿದೆ. ನಟ ಯಶ್ ಕೂಡ ಕಳೆದ ಕೆಲವು ದಿನಗಳಿಂದ ಚಿತ್ರೀಕರಣಕ್ಕೆ ರಜೆ ಹಾಕಿದ್ದರಂತೆ. ರಾಧಿಕಾ ಕೇರಿಂಗ್ ನಲ್ಲಿ ಯಶ್ ಬ್ಯುಸಿಯಾಗಿದ್ದರು. ಎರಡನೆ ಬಾರಿ ತಂದೆಯಾಗಿರುವ ಖುಷಿಯಲ್ಲಿರುವ ಯಶ್ ಸಧ್ಯದಲ್ಲೇ ಚಿತ್ರೀಕರಣಕ್ಕೆ ಮರಳಲಿದ್ದಾರೆ. ಚಾಪ್ಟರ್-1 ಗಿಂತ ಚಾಪ್ಟರ್-2 ಮತ್ತಷ್ಟು ಭಯಾನಕವಾಗಿರಲಿದೆಯಂತೆ.

  English summary
  Famous director Prashanth neel shared KGF Chapter-2 BGM in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X