»   » 'ಕೆ.ಜಿ.ಎಫ್' ಚಿತ್ರದಿಂದ ಬಾಲಿವುಡ್ ತಲುಪಿದೆ ಯಶ್ ಜನಪ್ರಿಯತೆ

'ಕೆ.ಜಿ.ಎಫ್' ಚಿತ್ರದಿಂದ ಬಾಲಿವುಡ್ ತಲುಪಿದೆ ಯಶ್ ಜನಪ್ರಿಯತೆ

Posted By:
Subscribe to Filmibeat Kannada

ಕನ್ನಡ ಚಿತ್ರಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ಹೆಚ್ಚು ವಿಸ್ತರಣೆ ಪಡೆಯುತ್ತಿದೆ. ಕೇವಲ ಪರಭಾಷಾ ಸಿನಿಮಾಗಳೇ ಕನ್ನಡಕ್ಕೆ ರಿಮೇಕ್ ಆಗುತ್ತಿವೆ ಎಂದು ಮಾಡನಾಡುತ್ತಿದ್ದ ಕನ್ನಡಿಗರು ಈಗ ನಮ್ಮ ಭಾಷೆ ಸಿನಿಮಾಗಳು ಇತರೆ ಭಾಷೆಗಳಲ್ಲಿ ರಿಮೇಕ್ ಆಗುತ್ತಿವೆ ಎಂದು ಮಾತನಾಡುತ್ತಿದ್ದಾರೆ. ಅದಕ್ಕೆ ಕಾರಣ 'ಉಳಿದವರು ಕಂಡಂತೆ', 'ರಾಮಾ ರಾಮಾ ರೇ', 'ಕಿರಿಕ್ ಪಾರ್ಟಿ' ಇನ್ನೂ ಮುಂತಾದ ಯಶಸ್ವಿ ಸಿನಿಮಾಗಳು ಮತ್ತು ಇತ್ತೀಚಿನ ಕನ್ನಡ ಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್.

ಅಂದಹಾಗೆ ಈಗ ಕನ್ನಡ ಚಿತ್ರಗಳ ಪಾಪ್ಯುಲಾರಿಟಿ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿದ್ದು, ಯಶ್ 'ಕೆ.ಜಿ.ಎಫ್' ಚಿತ್ರ ಅದಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ ಖ್ಯಾತ ಹಿಂದಿ ಸಿನಿಮಾ ವಿಮರ್ಶಕ, ಪತ್ರಕರ್ತ ಹಾಗೂ ಚಲನಚಿತ್ರಗಳ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ರವರು ಯಶ್ ಅಭಿನಯದ ಕನ್ನಡ ಚಿತ್ರ 'ಕೆ.ಜಿ.ಎಫ್' ಫಸ್ಟ್ ಲುಕ್ ಅನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ತರಣ್ ಆದರ್ಶ್ ಈ ಹಿಂದೆಯೂ ಯಶ್ ರೊಂದಿಗೆ 2015 ರ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಸಂದರ್ಭದಲ್ಲಿ ಕ್ಲಿಕ್ಕಿಸಿದ ಪೋಟೋ ಮತ್ತು 'ಕೆ.ಜಿ.ಎಫ್' ಚಿತ್ರ ಲಾಂಚ್ ಮಾಡಿದ ಸಂದರ್ಭದ ಫೋಟೋಗಳನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು.

Famous Film trade analyst Taran Adarsh posted Yash 'K.G.F' first look in his twitter page

ಇನ್ನೊಂದು ವಿಶೇಷತೆ ಅಂದ್ರೆ ಯಶ್ ನಟನೆಯ 'ಕೆ.ಜಿ.ಎಫ್' ಚಿತ್ರದ ಫಸ್ಟ್ ಲುಕ್ ಪೋಸ್ಟ್ ಮಾಡಿರುವುದು ಕನ್ನಡಿಗರಿಗೆ ಹೆಚ್ಚು ಹೆಮ್ಮೆ ತರಿಸಿದೆ. ಅಲ್ಲದೇ ಬಾಲಿವುಡ್ ನಲ್ಲಿ ಯಶ್ 'ಕೆ.ಜಿ.ಎಫ್' ಚಿತ್ರ ಕೇವಲ ಫಸ್ಟ್ ಲುಕ್ ನಿಂದಲೇ ಸೌಂಡ್ ಮಾಡುತ್ತಿದ್ದು, ಕನ್ನಡ ಚಿತ್ರ ಮತ್ತು ಯಶ್ ಪಾಪ್ಯುಲಾರಿಟಿ ಬಗ್ಗೆ ಅಭಿಮಾನಿಗಳಲ್ಲಿ ಸಂತಸತಂದಿದೆ. ತರಣ್ ಆದರ್ಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಯಶ್ 'ಕೆ.ಜಿ.ಎಫ್' ಫಸ್ಟ್ ಲುಕ್ ಇದುವರೆಗೆ 317 ಬಾರಿ ರೀಟ್ವೀಟ್ ಆಗಿದ್ದು, 1.6 ಸಾವಿರ ಲೈಕ್ ಪಡೆದಿದೆ.[ಕುತೂಹಲ ಹುಟ್ಟಿಸಿದ 'ಕೆ.ಜಿ.ಎಫ್' ಫಸ್ಟ್ ಲುಕ್: ಯಶ್ ಪಾತ್ರ ಏನು?]

Famous Film trade analyst Taran Adarsh posted Yash 'K.G.F' first look in his twitter page

ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರದ ಫಸ್ಟ್ ಲುಕ್ ನಿನ್ನೆ(ಏಪ್ರಿಲ್ 3) ಸಂಜೆ 6 ಗಂಟೆಗೆ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಯಶ್ ಗೆ ಬ್ಯೂಟಿಕ್ವೀನ್ ಶ್ರೀನಿಧಿ ಶೆಟ್ಟಿ ಜೋಡಿಯಾಗಿದ್ದಾರೆ. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು, ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ.

English summary
Famous Film trade analyst Taran Adarsh posted Yash 'K.G.F' first look in his twitter page. Rocking Star Yash Starrer 'KGF' Movie First Look Released yesterday(May 3). The Movie Directed by Prashanth Neel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada