ಕನ್ನಡದ ಪ್ರತಿಷ್ಠಿತ ನಟನಿಗೆ 4th ಸ್ಟೇಜ್ ಕ್ಯಾನ್ಸರ್, ತಲೆ ಕೂದಲೆಲ್ಲಾ ಹೊರಗೆ ಬಂದಿದೆ; ಪ್ರಥಮ್

ಕ್ಯಾನ್ಸರ್ ಎನ್ನುವ ಮಾತು ಕೇಳಿದರೂ ಒಂದು ಕಾಲದಲ್ಲಿ ಜನ ಬೆಚ್ಚಿ ಬೀಳುತ್ತಿದ್ದರು. ಆಗ ಅಷ್ಟಾಗಿ ಜನ ಈ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಆದರೆ ಇತ್ತೀಚೆಗೆ ಹೆಚ್ಚು ಹೆಚ್ಚು ಈ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸಿನಿಮಾ ತಾರೆಯರೂ ಕೂಡ ಈ ಲಿಸ್ಟ್‌ನಲ್ಲಿದ್ದಾರೆ. ಇದೀಗ ಪ್ರಥಮ್ ಮಾತನಾಡಿ ಕನ್ನಡ ನಟನಿಗೆ 4ನೇ ಹಂತದ ಕ್ಯಾನ್ಸರ್ ಇದೆ ಎಂದಿದ್ದಾರೆ.

ನಟ ಶಿವರಾಜ್‌ಕುಮಾರ್ ಕೂಡ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಶಸ್ತ್ರ ಚಿಕಿತ್ಸೆ ಕೂಡ ನಡೆಯಲಿದೆ. ಈ ಬಗ್ಗೆ ಸ್ವತಃ ಶಿವಣ್ಣ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲದರ ನಡುವೆ ಕನ್ನಡದ ಮತ್ತೊಬ್ಬ ನಟ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಶೀಘ್ರದಲ್ಲೇ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಪ್ರಥಮ್ ಡಿಜಿಟಲ್ ಸಿನಿ ಅಡ್ಡಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿದ್ದಾರೆ.

Famous kannada actor suffering from 4th stage cancer Says Bigg Boss fame Pratham

ರಾಜ್ ಕಪ್ ಕ್ರಿಕೆಟ್ ಟೂರ್ನಿಗಾಗಿ ಇತ್ತೀಚೆಗೆ ಕನ್ನಡ ಕೆಲ ತಾರೆಯರು ದುಬೈ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಲ್ಲಿನ ದೇವಸ್ಥಾನದಲ್ಲಿ ಶಿವಣ್ಣ ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸಿದೆ ಎಂದು ಪ್ರಥಮ್ ತಿಳಿಸಿದ್ದಾರೆ. ಇದೇ ವೇಳೆ ಕನ್ನಡದ ಮತ್ತೊಬ್ಬ ನಟ ಕೂಡ ಕ್ಯಾನ್ಸರ್‌ನಿಮದ ಬಳಲುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಅವರ ಹೆಸರು ಮಾತ್ರ ಹೇಳಲಿಲ್ಲ.

"ಕನ್ನಡದ ಪ್ರತಿಷ್ಠಿತ ಕಲಾವಿದರೊಬ್ಬರಿಗೆ 4ನೇ ಹಂತದ ಕ್ಯಾನ್ಸರ್ ಇದೆ. ನಾನು ಹೆಸರು ಹೇಳಲು ಸಾಧ್ಯವಿಲ್ಲ. ಬಹಳ ಬೇಕಾದ ಬಿಗ್ ಸ್ಟಾರ್ ಅವರು. ಚಿತ್ರರಂಗ ಹೆಮ್ಮೆ ಪಡುವಂತಹ ಸ್ಟಾರ್. ವಿಷಯ ಗೊತ್ತಾಗಿ ಭೇಟಿ ಮಾಡಲು ಹೋಗಿದ್ದೆ. ಸಾಧ್ಯವಾಗಲಿಲ್ಲ. ಪ್ರಥಮ್ ಈ ವಿಚಾರ ಹೊರಗೆ ಬರುವುದು ಬೇಡ. ನಿನ್ನೊಟ್ಟಿಗೆ ಹಂಚಿಕೊಳ್ಳಬೇಕು ಎಂದು ಫೋನ್ ಮಾಡ್ದೆ ಎಂದರು. ಅದು ನನ್ನಲ್ಲೇ ಇರಲಿ" ಎಂದು ಪ್ರಥಮ್ ಹೇಳಿದ್ದಾರೆ.

"ಕನ್ನಡದ ಪ್ರತಿಷ್ಠಿತ ಸ್ಟಾರ್ ಅವರು. ಹಾಗಾಗಿ ಅವರೂ ಬೇಗ ಚೇತರಿಸಿಕೊಳ್ಳಲಿ ಎಂದು ದುಬೈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದೆವು. ಸದ್ಯ ಅವರಿಗೆ 4ನೇ ಹಂತದ ಕ್ಯಾನ್ಸರ್, ತಲೆ ಕೂದಲೆಲ್ಲಾ ಗೊರಗೆ ಬಂದಿದೆ" ಎಂದು ಪ್ರಥಮ್ ತಿಳಿಸಿದ್ದಾರೆ. ಇದೇ ವಿಚಾರದ ಬಗ್ಗೆ ಪ್ರಥಮ್ ಅವರನ್ನು ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿತ್ತು.

"ಅವರು ನಾಯಕ ನಟ ಅಲ್ಲ, ಆದರೆ ಜನಪ್ರಿಯ ನಟ, ಪ್ರತಿಷ್ಠಿತ ನಟ. ಅವರ ಹೆಸರು ಹೇಳುವುದು ಬೇಡ ಎಂದಿದ್ದಾರೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಅವರು ಖುದ್ದಾಗಿ ಈ ಬಗ್ಗೆ ಮಾಹಿತಿ ನೀಡುತ್ತಾರೆ" ಎಂದು ಪ್ರಥಮ್ ಮಾಹಿತಿ ನೀಡಿದ್ದಾರೆ. ಯಾರಿಗೂ ಅಂತಹ ಕಾಯಿಲೆ ಬರುವುದು ಬೇಡ. ಆದಷ್ಟು ಬೇಗ ಆ ನಟ ಚೇತರಿಸಿಕೊಳ್ಳಲಿ ಎಂದು ಸಿನಿರಸಿಕರು ಪ್ರಾರ್ಥಿಸುತ್ತಿದ್ದಾರೆ.

ನಟ, ನಿರ್ದೇಶಕ ಪ್ರಥಮ್ ಸುಖಾ ಸುಮ್ಮನೆ ಹೀಗೆ ಮಾತನಾಡುವುದು ಯಾಕೆ? ಆ ನಟ ಈ ವಿಷಯ ಯಾರಿಗೂ ಗೊತ್ತಾಗುವುದು ಬೇಡ ಎಂದಮೇಲೂ ಪ್ರಥಮ್ ವಿಷಯ ಪ್ರಸ್ತಾಪಿಸಿದ್ದು ಯಾಕೆ? ಇದೆಲ್ಲಾ ಬರೀ ಪಬ್ಲಿಸಿಟಿ ಗಿಮಿಕ್ ಅಲ್ಲದೇ ಮತ್ತೇನು? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಪ್ರಥಮ್ ನಟನೆಯ 'ಕರ್ನಾಟಕದ ಅಳಿಯ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ರಾಘವೇಂದ್ರ ರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಜೊತೆಗೆ ನನ್ನ ಸಿನಿಮಾ ಬಿಡುಗಡೆ ಮಾಡ್ತೀನಿ ಎಂದು ಪ್ರಥಮ್ ಹಿಂದೆ ಹೇಳಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಶೀಘ್ರದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.

More from Filmibeat

English summary
Kannada Actor battle with 4th stage cancer; Pratham comments goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X