ಕನ್ನಡ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿಧನ: ಚಿತ್ರರಂಗಕ್ಕೆ ಮತ್ತೊಂದು ಆಘಾತ

By ಫಿಲ್ಮಿಬೀಟ್ ಡೆಸ್ಕ್

ಡಿಸೆಂಬರ್ ತಿಂಗಳು ಕನ್ನಡ ಚಿತ್ರರಂಗಕ್ಕೆ ಅಶುಭ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ. ಇತ್ತೀಚೆಗೆ ಹಿರಿಯ ನಟಿ ಲೀಲಾವತಿ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಇನ್ನೇನು ಸಿನಿಪ್ರೇಮಿಗಳು ಆ ನೋವನ್ನು ಮರೆಯಲು ಯತ್ನಿಸುತ್ತಿರುವಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ.

ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದ ಜನಪ್ರಿಯ ಸ್ಟಂಟ್ ಡೈರೆಕ್ಟರ್ ಜಾಲಿ ಬಾಸ್ಟಿನ್ ನಿಧನರಾಗಿದ್ದಾರೆ. ಮಂಗಳವಾರ (ಡಿಸೆಂಬರ್ 26)ಹೃದಯಾಘಾತದಿಂದ ಜಾಲಿ ಬಾಸ್ಟಿನ್ ನಿಧನರಾಗಿದ್ದಾರೆ. 57 ವರ್ಷ ಜಾಲಿ ಬಾಸ್ಟಿನ್ ಕನ್ನಡದ ಹಲವು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಇವರ ಹಠಾತ್ ನಿಧನ ಚಿತ್ರರಂಗಕ್ಕೆ ಶಾಕ್ ಆಗಿದೆ.

Stunt Director Jolly Bastine Died

ಜಾಲಿ ಬಾಸ್ಟಿನ್ ಸುಮಾರು 850ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಬೈಕ್ ಮೆಕಾನಿಕ್ ಆಗಿದ್ದ ಜಾಲಿ ಬಾಸ್ಟಿನ್ ಬೈಕ್ ಸ್ಟಂಟ್‌ಗಳನ್ನು ಮಾಡುವುದಕ್ಕೆ ನಿಸ್ಸೀಮರಾಗಿದ್ದರು. ಮೂಲತ: ಕೇರಳದ ಅಲೆಪ್ಪೆಯವರಾದ ಜಾಲಿ ಬಾಸ್ಟಿನ್ 1966ರಲ್ಲಿ ಜನಿಸಿದ್ದರು. ಕೇರಳದಲ್ಲಿ ಜನಿಸಿದರೂ, ಬೆಳೆದಿದ್ದು ಬೆಂಗಳೂರಿನಲ್ಲಿಯೇ.

ಇತ್ತೀಚೆಗಷ್ಟೇ ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ 'ಭೀಮ' ಸಿನಿಮಾದ ಆಕ್ಷನ್ ಸೀನ್ ಒಂದನ್ನು ನಿರ್ದೇಶನ ಮಾಡಿದ್ದರು. ನೈಟ್ ಎಫೆಕ್ಟ್‌ನಲ್ಲಿ ನಡೆಯೋ ಈ ಸೀನ್ ಅನ್ನು ಜಾಲಿ ಬಾಸ್ಟಿನ್ ನಿರ್ದೇಶಿಸಿದ್ದರು. ಹೀಗಾಗಿ ಸಾಹಸ ನಿರ್ದೇಶಕರ ದಿಢೀರ್ ಅಗಲಿಕೆಗೆ ದುನಿಯಾ ವಿಜಯ್ ಸಂತಾಪ ಸೂಚಿಸಿದ್ದಾರೆ.

Stunt Director Jolly Bastine Died Duniya Vijay

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳಲ್ಲಿ ಹೆಚ್ಚಾಗಿ ಜಾಲಿ ಮಾಸ್ಟರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಆರಂಭದಲ್ಲಿ ಸ್ಟಂಟ್ ಮಾಸ್ಟರ್ ಆಗಿದ್ದವರು ನಂತರ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ರವಿಚಂದ್ರನ್ ನಟಿಸಿದ 'ಪ್ರೇಮಲೋಕ', 'ಅಣ್ಣಯ್ಯ', 'ಶಾಂತಿ ಕ್ರಾಂತಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡೇಂಜರಸ್ ಸ್ಟಂಟ್‌ಗಳನ್ನು ಮಾಡುವುದಕ್ಕೆ ಜಾಲಿ ಮಾಸ್ಟರ್ ಫೇಮಸ್ ಆಗಿದ್ದರು.

ಆರಂಭದಲ್ಲಿ ರವಿಚಂದ್ರನ್ ಸೇರಿದಂತೆ ಹಲವು ಹೀರೊಗಳಿಗೆ ಡ್ಯೂಪ್ ಹಾಕುತ್ತಿದ್ದರು. ಆ ಬಳಿಕ ಅವರ ಪ್ರತಿಭೆಯನ್ನು ಗುರುತಿಸಿ, ಸ್ಟಂಟ್ ಮಾಡಲು ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಜಾಲಿ ಬಾಸ್ಟಿನ್ ತದನಂತರ ಸಾಹಸ ನಿರ್ದೇಶಕರಾಗಿಯೂ ಜನಪ್ರಿಯತೆಯನ್ನು ಗಿಟ್ಟಸಿಕೊಂಡಲು. ಕನ್ನಡ ಸೇರಿದಂತೆ, ಮಲಯಾಳಂ, ಹಿಂದಿ, ಪಂಜಾಬಿ, ತಮಿಳು ಭಾಷೆಯ ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ.

ಸಿನಿಮಾಗಳಿಗೆ ಸ್ಟಂಟ್ ಮಾಡುವಾಗ ಹಲವು ಬಾರಿ ಪೆಟ್ಟು ಮಾಡಿಕೊಂಡಿದ್ದಾರೆ. 'ಭಲೇ ಚತುರ' ಸಿನಿಮಾದ ಬಾಂಬ್ ಬ್ಲಾಸ್ಟ್ ಸನ್ನಿವೇಶದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಾಗೇ 'ಪುಟ್ನಂಜ' ಶೂಟಿಂಗ್ ವೇಳೆನೂ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದರು. ಇನ್ನು ಸಾಹಸ ನಿರ್ದೇಶನದ ಜೊತೆಗೆ 'ನಿನಗಾಗಿ ಕಾದಿರುವೆ' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇಂದು( ಡಿಸೆಂಬರ್ 27) ಜಾಲಿ ಬಾಸ್ಟಿನ್ ಅವರ ಅಂತ್ಯಕ್ರಿಯೆ ನಡೆಯಲಿದೆ.

More from Filmibeat

English summary
Famous Kannada movie stunt master Jolly Bastian died due to heart attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X