ಖ್ಯಾತ ಮಲೆಯಾಳಂ ನಟ ರವಿ ವಲ್ಲತೋಲ್ ನಿಧನ
ಖ್ಯಾತ ಮಲೆಯಾಳಂ ನಟ ರವಿ ವಲ್ಲತೋಲ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮಲೆಯಾಳಂ ರಂಗಭೂಮಿ ಮತ್ತು ಸಿನಿಮಾ ಗಳಲ್ಲಿ ಖ್ಯಾತರಾಗಿದ್ದ ಅವರು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.
ಮಲೆಯಾಳಂ ನ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಅವರು, ಕೆಲವು ಸಿನಿಮಾಗಳಲ್ಲಿ ನಾಯಕರಾಗಿಯೂ ನಟಿಸಿದ್ದರು.

ರವಿ ವಲ್ಲತೋಲ್ ಅವರು ಮಲಯಾಳಂ ನ ಮೆಗಾಸ್ಟಾರ್ ಮುಮ್ಮುಟಿ ಅವರಿಗೆ ಅತ್ಯಾಪ್ತರಾಗಿದ್ದರು. ಅವರೊಂದಿಗೆ ಹಲವು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು.
ಭಾರತದ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಅಡೂರು ಗೋಪಾಲನ್ ಅವರ ನೆಚ್ಚಿನ ನಟರಲ್ಲೊಬ್ಬರಾಗಿದ್ದ ರವಿ, ಅಡೂರು ಅವರು ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದ್ಭುತ ನಟರಾಗಿದ್ದ ಅವರಿಗೆ ಹಲವು ಪ್ರಶಸ್ತಿಗಳು ಸಹ ಸಂಧಿವೆ.
ಖ್ಯಾತ ರಂಗಭೂಮಿ ನಟರಾಗಿದ್ದ ಟಿ.ಎನ್.ಗೋಪಿನಾಥನ್ ಪುತ್ರರಾಗಿದ್ದ ಅವರು, ಮಲೆಯಾಳಂ ನ ಖ್ಯಾತ ಕವಿ ವಲ್ಲತೋಲ್ ನಾರಾಯಣ ಮೆನನ್ ಅವರ ಮೊಮ್ಮಗ ಸಹ ಆಗಿದ್ದಾರೆ.
More from Filmibeat
English summary
Famous Malayalam movie and theater actor Ravi Vallathol died today in Thiruvananthapuram.


Click it and Unblock the Notifications











