twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ್ ಆಧ್ಯಾತ್ಮಿಕ ಗುರು, ಸಂಸ್ಕೃತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ

    |

    ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರು ಇಂದು (ಡಿಸೆಂಬರ್ 13) ರಂದು ಉಡುಪಿಯ ಅಂಬಲಪಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

    ಪದ್ಮಶ್ರೀ ಪುರಸ್ಕೃತರಾಗಿದ್ದ ಬನ್ನಂಜೆ ಗೋವಿಂದಾಚಾರ್ಯ ಅವರು, ಡಾ.ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ಗುರು ಆಗಿದ್ದರು. ಅವರು ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಅನೇಕ ಪತ್ರಿಕೆಗಳಿಗೆ ಅಂಕಣಗಳನ್ನು ಸಹ ಬರೆದಿದ್ದರು ಬನ್ನಂಜೆ ಗೋವಿಂದಾಚಾರ್ಯ.

    ಸಿನಿಮಾಗಳೊಂದಿಗೆ ಸಹ ಅಲ್ಪ ಸಂಪರ್ಕ ಹೊಂದಿದ್ದ ಬನ್ನಂಜೆಯವರು, ಜಿವಿ ಅಯ್ಯರ್ ನಿರ್ದೇಶನದ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಸಂಸ್ಕೃತ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.

    Famous Sanskrit Scholar Bannanje Govindacharya Passed Away

    ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸೇವೆಗೈದಿರುವ ಅವರು, ಬಾಣಭಟ್ಟನ ಕಾದಂಬರಿ, ಶಾಕುಂತಲಾ, ಶೂದ್ರಕನ ಮೃಚ್ಛಕಟಿಕ ಇತ್ಯಾದಿ ಚಾರಿತ್ರಿಕ ಕೃತಿಗಳನ್ನು ಸಂಸ್ಕೃತದಿಂದ ಕನ್ನಡದಕ್ಕೆ ಅನುವಾದಿಸಿದ್ದರು. ಅನೇಕ ಸ್ತೋತ್ರ, ಮಂತ್ರಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

    Recommended Video

    ಉಹಾಪೋಹಗಳಿಗೆ ತೆರೆ ಎಳೆದ ಮಾಧವನ್ | Madhavan | Filmibeat Kannada

    ತಮ್ಮ ಆಧ್ಯಾತ್ಮಿಕ ಪ್ರವಚನಗಳಿಂದ ಖ್ಯಾತರಾಗಿದ್ದ ಗೋವಿಂದಾಚಾರ್ಯರು, ನಟ ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ಗುರುಗಳೂ ಸಹ ಆಗಿದ್ದರು. ಇತ್ತೀಚೆಗಷ್ಟೆ ಗೋವಿಂದಾಚಾರ್ಯರ ಪುತ್ರ ಸಹ ವಿಧಿವಶರಾಗಿದ್ದರು.

    English summary
    Famous Sanskrit Scholar Bannange Govindacharya passed away. He was 85. He translated many historical Sanskrit works to Kannada.
    Monday, December 14, 2020, 10:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X