For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಗೆ ಬಂದ 'ಅಲಾ ವೈಕುಂಠಪುರಂಲೋ' ಗಾಯಕ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಗಾಯಕ ಸಿದ್ ಶ್ರೀರಾಮ್ ಈಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ತೆಲುಗಿನ 'ಗೀತಾ ಗೋವಿಂದಂ' ಚಿತ್ರದ 'ಇಂಕೇಮ್ ಇಂಕೇಮ್' ಮತ್ತು ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ 'ಅಲಾ ವೈಕುಂಠಪುರಂಲೋ' ಸಿನಿಮಾದ ಹಾಡಿನ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದ ಗಾಯಕ ಸಿದ್ ಈಗ ಕನ್ನಡ ಗಾನಪ್ರಿಯರನ್ನು ಮೋಡಿ ಮಾಡಲು ಬರ್ತಿದ್ದಾರೆ.

  ತಮಿಳು ಮತ್ತು ತೆಲುಗು ಚಿತ್ರರಂಗದ ಬಹುಬೇಡಿಕೆಯ ಗಾಯಕ ಸಿದ್, ಈಗ ಕನ್ನಡದಲ್ಲಿ 'ಟಾಮ್ ಅಂಡ್ ಜೆರ್ರಿ' ಚಿತ್ರದ ಪ್ರಮುಖ ಗೀತೆಯನ್ನು ಹಾಡಲಿದ್ದಾರೆ. 'ಹಾಯಾಗಿದೆ...'ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡು ಸಿದ್ ಶ್ರೀರಾಮ್ ಧ್ವನಿಯಲ್ಲಿ ಮೂಡಿಬರಲಿದೆ. ಅಂದ್ಹಾಗೆ ಈ ಹಾಡಿಗೆ ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ಮಾಡಿದ್ದಾರೆ.

  ವಿಜಯ ಪ್ರಕಾಶ್ ಗಾಗಿ ಜಿಲ್ಲಾಧಿಕಾರಿ ಮತ್ತು ಶಾಸಕನ ನಡುವೆ ಕಿತ್ತಾಟವಿಜಯ ಪ್ರಕಾಶ್ ಗಾಗಿ ಜಿಲ್ಲಾಧಿಕಾರಿ ಮತ್ತು ಶಾಸಕನ ನಡುವೆ ಕಿತ್ತಾಟ

  ಈ ಹಾಡಿನ ಸಾಲುಗಳನ್ನು ಸಹ ಮ್ಯಾಥ್ಯೂಸ್ ಅವರೆ ರಚಿಸಿದ್ದಾರೆ. ಟಾಮ್ ಅಂಡ್ ಜೆರ್ರಿ ಕೆಜಿಎಫ್ ಡೈಲಾಗ್ ರೈಟರ್ ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ಸಿನಿಮಾ. ಟೈಟಲ್ ಮೂಲಕವೆ ಗಮನ ಸೆಳೆಯುತ್ತಿರುವ ಟಾಮ್ ಅಂಡ್ ಜೆರ್ರಿಗೆ ಸಿದ್ ಎಂಟ್ರಿ ಚಿತ್ರಕ್ಕೆ ಮತ್ತಷ್ಟು ಬಲಬಂದಿದೆ.

  ಅಂದ್ಹಾಗೆ ಚಿತ್ರದಲ್ಲಿ ನಾಯಕನಾಗಿ ಗಂಟುಮೂಟೆ ಖ್ಯಾತಿಯ ನಟ ನಿಶ್ಚಿತ್ ಕೊರೋಡಿ ಮತ್ತು ಕಿರುತೆರೆಯ ಖ್ಯಾತ ನಟಿ ಚೈತ್ರಾ ರಾವ್ ಪ್ರಮುಖ ಪಾತ್ರದಲ್ಲಿ ಕಾಣಇಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಜೈ ಜಗದೀಶ್, ತಾರಾ, ರಂಗಾಯಣ ರಘು ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಚಿತ್ರದಲ್ಲಿ ಇದೆ.

  English summary
  South film Industry famous Singer Sid Sriram entered to Sandalwood for Tom And Jerry film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X