twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಯದಾಗಿ ಪ್ರಧಾನಿ ಮೋದಿ ನಿವಾಸದಲ್ಲಿ ಭೇಟಿಯಾಗಿದ್ವಿ: ಎಸ್ ಪಿ ಬಿ ಬಗ್ಗೆ ವಿಜಯ್ ಪ್ರಕಾಶ್ ಮಾತು

    |

    ಲೆಜೆಂಡರಿ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ. ಅವರ ನಿಧನದ ಸುದ್ದಿ ಭಾರತದ ಗಾನ ಲೋಕಕ್ಕೆ ಆಘಾತವುಂಟು ಮಾಡಿದೆ. ಭಾರತದ ಅದರಲ್ಲಿಯೂ ದಕ್ಷಿಣ ಭಾರತದ ಬಹುತೇಕ ಗಾಯಕರು ಎಸ್ ಪಿ ಬಿ ಅವರನ್ನು ದೇವರು ಎಂದು ಪೂಜಿಸುತ್ತಿದ್ದರು.

    ಖ್ಯಾತ ಗಾಯಕನನ್ನು ಕಳೆದಕೊಂಡು ಗಾನಲೋಕ ದುಃಖದ ಸಾಗರದಲ್ಲಿ ಮುಳುಗಿದೆ. ಈ ಸಮಯದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್, ಎಸ್ ಪಿ ಬಿ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ. ಖಾಸಗಿ ವಾಹಿನಿ ಜೊತೆ ಮಾತನಾಡಿ ವಿಜಯ್ ಪ್ರಕಾಶ್, ನೇರವಾಗಿ ಅವರ ಶಿಷ್ಯರು ಅಲ್ಲದಿದ್ದರು ಅವರಿಂದನೇ ಹಾಡಲು ಕಲಿತಿದ್ದು ಎಂದು ಹೇಳಿದ್ದಾರೆ.

    ಅಗಲಿದ 'ಸಂಗೀತ ಮಾಂತ್ರಿಕನಿಗೆ' ಕಂಬನಿ ಮಿಡಿದ ಕನ್ನಡ ಸಿನಿಪ್ರಮುಖರುಅಗಲಿದ 'ಸಂಗೀತ ಮಾಂತ್ರಿಕನಿಗೆ' ಕಂಬನಿ ಮಿಡಿದ ಕನ್ನಡ ಸಿನಿಪ್ರಮುಖರು

    'ಕೋಟಿ ಕೋಟಿ ಪ್ರಾರ್ಥನೆಯ ಶಕ್ತಿ ಅವರ ಹಿಂದೆ ಇತ್ತು. ನಿಜವಾಗಿಯೂ ದುಃಖದ ವಿಚಾರ ಎಂದರೆ 40 ಸಾವಿರಕ್ಕು ಹೆಚ್ಚು ಹಾಡುಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ನೇರವಾಗಿ ಅವರ ಶಿಷ್ಯರು ಎಂದು ಹೇಳದಿದ್ದರು. ಅವರಿಂದನೇ ನಾವು ಹಾಡಲು ಕಲಿತ್ತಿದ್ದು.ಇಂತಹ ವ್ಯಕ್ತಿಯನ್ನು ಈ ಸಮಯದಲ್ಲಿ ಅವರನ್ನು ಸರಿಯಾಗಿ ನೋಡಲು ಸಾಧ್ಯವಾಗುವುದಿಲ್ಲವಲ್ಲಾ ಎನ್ನುವುದು ತುಂಬಾ ನೋವಾಗುತ್ತಿದೆ, ಇದು ಅರಗಿಸಿಕೊಳ್ಳಲು ಸಾಧ್ಯವಿಲ್ಲದ ದುರಂತ' ಎಂದಿದ್ದಾರೆ.

    Famous Singer Vijay Prakash Shares His Memories With SP Balasubrahmanyam

    Recommended Video

    SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Filmibeat

    'ಕೊನೆಯದಾಗಿ ಅಕ್ಟೋಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ಕೆಲವರನ್ನು ಸಣ್ಣ ಸಮಾರಂಭಕ್ಕೆ ಮನೆಗೆ ಆಹ್ವಾನಿಸಿದ್ದರು. ಆಗ ಅ ಸಮಯದಲ್ಲಿ ಅವರ ಜೊತೆ ದೆಹಲಿಯಲ್ಲಿ ಒಟ್ಟಿಗೆ ಇದ್ದೆವು. ತುಂಬಾ ಚೆನ್ನಾಗಿ ಇತ್ತು. ಅನೇಕ ಸಮಯದಲ್ಲಿ ಅವರ ಜೊತೆ ಕಾಲ ಕಳೆದಿದ್ದು ಇದೆ. ನಾಲ್ಕು ತಿಂಗಳ ಹಿಂದೆ ನನ್ನ ಹಾಡು ಕೇಳಿ, ಆಶೀರ್ವಾದದ ಸಂದೇಶ ಕಳುಹಿಸಿದ್ದರು. ಆತ್ಮೀಯವಾಗಿ ನನ್ನ ಬಗ್ಗೆ ತಂದೆಯ ಬಗ್ಗೆ ಮಾತನಾಡುತ್ತಿರು' ಎಂದು ಹೇಳಿದ್ದಾರೆ.

    English summary
    SP Balasubramanyam Passes Away: Famous Singer vijay prakash shares his memories with Legendary Singer SP Balasubrahmanyam.
    Friday, September 25, 2020, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X