ಕನ್ನಡದ 'ದೇವಕಿ'ಗೆ ಸಾಥ್ ನೀಡಿದ 'ಸಾಹೋ' ತಂತ್ರಜ್ಞರು

ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ ಬಹುನಿರೀಕ್ಷೆಯ 'ದೇವಕಿ' ಚಿತ್ರ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ 'ದೇವಕಿ' ಚಿತ್ರಕ್ಕೀಗ ಭಾರತದ ಖ್ಯಾತ ತಂತ್ರಜ್ಞರು ಕೈ ಜೋಡಿಸಿದ್ದಾರೆ.

famous sound engineer T Uday kumar enters to Kannada film Industry for Devaki

ಹೌದು, 'ದೇವಕಿ' ಚಿತ್ರ ಸದ್ಯ ಶಬ್ದ ವಿನ್ಯಾಸದಲ್ಲಿ ಬ್ಯುಸಿಯಾಗಿದೆ. ದಕ್ಷಿಣ ಭಾರತದ ಖ್ಯಾತ ಸೌಂಡ್ ಇಂಜಿನಿಯರ್ ಆಗಿರುವ ಟಿ ಉದಯ್ ಕುಮಾರ್ 'ದೇವಕಿ' ಚಿತ್ರಕ್ಕೆ ಶಬ್ದ ವಿನ್ಯಾಸ ಮಾಡುತ್ತಿದ್ದಾರೆ. ಟಿ ಉದಯ್ ಕುಮಾರ್ ಈಗಾಗಲೆ ತಮಿಳಿನ 'ವಿಶ್ವಾಸಂ', 'ವಿವೇಗಂ','ಕಬಾಲಿ' ಮತ್ತು ತೆಲುಗಿನ 'ಅಜ್ಞಾತವಾಸಿ', 'ಗೂಢಚಾರಿ' ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸದ್ಯ ದೇಶದಾದ್ಯಂತ ಸಂಚಲ ಮೂಡಿಸಿರುವ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರಕ್ಕೂ ಉದಯ್ ಅವರೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದು ವಿಶೇಷ. ಈಗ 'ದೇವಕಿ' ಚಿತ್ರದ ಮೂಲಕ ಈಗ ಕನ್ನಡಕ್ಕು ಎಂಟ್ರಿ ಕೊಟ್ಟಿದ್ದಾರೆ ಉದಯ್.

famous sound engineer T Uday kumar enters to Kannada film Industry for Devaki

'ದೇವಕಿ' ಒಂದು ಥ್ರಿಲ್ಲಿಂಗ್ ಸಿನಿಮಾವಾಗಿದೆ. ಬಹುತೇಕ ಚಿತ್ರೀಕರಣ ಕೊಲ್ಕತದಲ್ಲಿ ನಡೆದಿದೆ. ಚಿತ್ರಕ್ಕೆ ಉತ್ತರ ಭಾರತದ ಟಚ್ ಜಾಸ್ತಿ ಇರುವುದರಿಂದ ಚಿತ್ರದಲ್ಲಿ ಕನ್ನಡದ ಜೊತೆಗೆ ಬಂಗಾಲಿ ಮತ್ತು ಹಿಂದಿ ಭಾಷೆ ಮಾತನಾಡುವ ಪಾತ್ರಗಳು ಸಹ ಚಿತ್ರದಲ್ಲಿದೆ. ಹಾಗಾಗಿ ಎಲ್ಲವನ್ನು ನಿಭಾಯಿಸಿಕೊಂಡು ಕನ್ನಡದ ನೇಟಿವಿಟಿಗೆ ತಕ್ಕಂತೆ ಕೆಲಸ ಮಾಡಿದ್ದಾರೆ ಉದಯ್.

'ದೇವಕಿ' ಕನ್ನಡದ ಜೊತೆಗೆ ತಮಿಳಿನಲ್ಲೂ ತೆರೆಗೆ ಬರುತ್ತಿದೆ. ನಿರ್ದೇಶಕ ಲೋಹಿತ್ ಮತ್ತು ಪ್ರಿಯಾಂಕಾ ಕಾಂಬಿನೇಷನ್ ನ ಎರಡನೆ ಸಿನಿಮಾ ಇದಾಗಿದೆ. 'ಮಮ್ಮಿ' ಸಿನಿಮಾ ಮೂಲಕ ಚಿತ್ರಾಭಿಮಾನಿಗಳನ್ನು ಮೋಡಿ ಮಾಡಿದ್ದ ಈ ಜೋಡಿ ಈಗ 'ದೇವಕಿ' ಮೂಲಕ ಮತ್ತೆ ಸದ್ದು ಮಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

More from Filmibeat

English summary
South Indian famous sound engineer T Uday kumar enters to Kannada film Industry for Devaki film. He is currently working in Prabhas starrer Saaho film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X