ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್

ಸ್ಯಾಂಡಲ್ ವುಡ್ ನ ಸಾಹಸ ನಿರ್ದೇಶಕ, ನಟ ಮತ್ತು ನಿರ್ದೇಶಕ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಇತ್ತೀಚಿಗಷ್ಟೆ ನಟ ರವಿಚಂದ್ರನ್ ಅವರಿಗೆ ಬೆಂಗಳೂರಿನ ಸಿ ಎಮ್ ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರ್ ನೀಡಿ ಗೌರವಿಸಲಾಗಿತ್ತು. ಇದರ ಬೆನ್ನಲ್ಲೆ ಈಗ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಗೂ ಗೌರವ ಡಾಕ್ಟರೇಟ್ ಲಭಿಸಿದೆ. ಕನ್ನಡ ಚಿತ್ರರಂಗದಲ್ಲಿ ಗೌರವ ಡಾಕ್ಟರೇಟ್ ಪಡೆದ ಅನೇಕ ಕಲಾವಿದರು ಮತ್ತು ತಂತ್ರಜ್ಞರಿದ್ದಾರೆ.

'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ಯುನಿವರ್ಸಿಟಿಯಿಂದ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಜೀವಮಾನ ಸಾಧನೆಗಾಗಿ ಥ್ರಿಲ್ಲರ್ ಮಂಜು ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಚಿತ್ರರಂಗದಲ್ಲಿ ಸುಮಾರು 30 ವರ್ಷಗಳಿಂದ ದುಡಿಯುತ್ತಿರುವ ಮಂಜು ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ.

Famous Stunt Director Thriller Manju Honored With An Honorary Doctorate
Famous Stunt Director Thriller Manju Honored With An Honorary Doctorate

ಸಾಹಸ ಕಲಾವಿದನಾಗಿ ಸಿನಿ ಪಯಣ ಆರಂಭಿಸಿದ ಥ್ರಿಲ್ಲರ್ ಮಂಜು ಮುಂದೆ ಸಾಹಸ ನಿರ್ದೇಶಕನಾಗಿ ಖ್ಯಾತಿಗಳಿಸಿದರು. ತಮಿಳು ಮತ್ತು ತೆಲುಗು ಚಿತ್ರಗಳು ಸೇರಿದಂತೆ ಸರಿ ಸುಮಾರು ನಾನ್ನೂರು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ನಂತರ ನಿರ್ದೇಶನಕ್ಕಿಳಿದ ಇವರು 'ಪೋಲಿಸ್ ಸ್ಟೋರಿ' ಸರಣಿ ಚಿತ್ರಗಳಿಗೆ ಪ್ರಸಿದ್ಧರಾಗಿದ್ದಾರೆ.

ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ದುಡಿದಿರುವ ಶ್ರಮಕ್ಕೆ ಈಗ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಮಂಜುಗೆ ಸಂತಸ ತಂದಿದೆ. ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿರುವ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು, ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

More from Filmibeat

English summary
Kannada stunt director Thriller Manju honored with an honorary doctorate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X