twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್‌ಗೆ ನೆಟ್ಟಿಗನ ಪ್ರಶ್ನೆ: 'ಕರೆಕ್ಟ್ ಆಗಿ ಹಾಡಿ ಸರ್, ರಾಷ್ಟ್ರಗೀತೆ ಬಗ್ಗೆ ಕಾಮನ್‌ಸೆನ್ಸ್ ಇಲ್ವಾ?'

    |

    ಸೆಲೆಬ್ರಿಟಿಗಳು ಏನೇ ಕೆಲಸ ಮಾಡಿದರು ಬಹಳ ಜಾಗ್ರತೆಯಿಂದ ಮಾಡಬೇಕು. ಇಲ್ಲವಾದಲ್ಲಿ ಸಣ್ಣ ಸಣ್ಣ ತಪ್ಪುಗಳು, ಗೊತ್ತಿಲ್ಲದೇ ಮಾಡುವ ಎಡವಟ್ಟುಗಳು ಬಹಳ ಟೀಕೆಗೆ ಕಾರಣವಾಗಿಬಿಡುತ್ತದೆ. ಈಗ ಕಿಚ್ಚ ಸುದೀಪ್ ಅವರ ವಿಚಾರದಲ್ಲಿ ಇಂತಹದೊಂದು ಬೆಳವಣಿಗೆ ಆಗಿದೆ. ಆಗಸ್ಟ್ 15ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ಅನೇಕ ಸೆಲೆಬ್ರಿಟಿಗಳು ಶುಭಕೋರಿದರು. ಅಭಿನಯ ಚಕ್ರವರ್ತಿ ಸಹ ಸ್ವಾತಂತ್ರ್ಯ ದಿನಾಚರಣೆಗೆ ವಿಡಿಯೋ ಮೂಲಕ ಶುಭಾಶಯ ತಿಳಿಸಿದರು.

    ಸ್ವತಃ ಸುದೀಪ್ ಅವರೇ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಗಮನ ಸೆಳೆದರು. ತಮ್ಮದೇ ಧ್ವನಿಯಲ್ಲಿ ಜನಗಣಮನ ಹಾಡಿ ಸ್ವಾತಂತ್ರ್ಯ ದಿನಾಚರಣೆಗೆ ಬಹಳ ವಿಶೇಷವಾಗಿ ಶುಭಾಶಯ ತಿಳಿಸಿದರು. ಸುದೀಪ್ ಅವರ ರಾಷ್ಟ್ರಗೀತೆ ಹಾಡಿದ್ದನ್ನು ಬಹಳಷ್ಟು ಜನರು ಮೆಚ್ಚಿಕೊಂಡರು. ಅನೇಕ ಅಭಿಮಾನಿಗಳು ಶೇರ್ ಮಾಡಿದರು. ಆದರೆ, ಸುದೀಪ್ ಅವರಿಗೆ ರಾಷ್ಟ್ರಗೀತೆ ಬಗ್ಗೆ ಇರಬೇಕಾದ ಕಾಳಜಿ ಬಗ್ಗೆ ಯಾರೂ ಗಮನಿಸಿಲಿಲ್ಲ ಎಂಬ ಟೀಕೆ ವ್ಯಕ್ತವಾಯಿತು. ಈ ಕುರಿತು ಅಭಿಮಾನಿಯೊಬ್ಬ ಸುದೀಪ್ ಅವರ ಹಾಡಿದ ರಾಷ್ಟ್ರಗೀತೆಯಲ್ಲಿ ತಪ್ಪೊಂದು ಆಗಿದೆ ಎಂದು ಎತ್ತಿ ತೋರಿಸಿದರು. ಅದಕ್ಕೆ ಸುದೀಪ್ ಸಹ ಪ್ರತಿಕ್ರಿಯಿಸಿದ್ದು, ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ. ಮುಂದೆ ಓದಿ...

    ಐಎಂಡಿಬಿ ರೇಟಿಂಗ್: ವಿಕ್ರಾಂತ್ ರೋಣ ಟಾಪ್, RRR ಪಟ್ಟಿಯಲ್ಲೇ ಇಲ್ಲಐಎಂಡಿಬಿ ರೇಟಿಂಗ್: ವಿಕ್ರಾಂತ್ ರೋಣ ಟಾಪ್, RRR ಪಟ್ಟಿಯಲ್ಲೇ ಇಲ್ಲ

    ಸುದೀಪ್ ಸರ್ ನಿಮಗೆ ಕಾಮನ್‌ಸೆನ್ಸ್ ಇಲ್ವಾ?

    ಸುದೀಪ್ ಸರ್ ನಿಮಗೆ ಕಾಮನ್‌ಸೆನ್ಸ್ ಇಲ್ವಾ?

    ಭಾರತದ ರಾಷ್ಟ್ರಗೀತೆಯನ್ನು 48-52 ಸೆಕೆಂಡ್‌ ಒಳಗೆ ಹಾಡಬೇಕು. ಆದರೆ ಸುದೀಪ್ ಅವರು ಹಾಡಿರುವ ರಾಷ್ಟ್ರಗೀತೆಗೆ ಅವರು ತೆಗೆದುಕೊಂಡ ಸಮಯ 63-65 ಸೆಕೆಂಡ್. ಹಾಗಾಗಿ, ನೆಟ್ಟಿಗನೊಬ್ಬ ಈ ಬಗ್ಗೆ ಟ್ವೀಟ್ ಮಾಡಿ 'ಸುದೀಪ್ ಸರ್ ರಾಷ್ಟ್ರಗೀತೆ ಬಗ್ಗೆ ನಿಮಗೆ ಕಾಮನ್‌ಸೆನ್ಸ್ ಇಲ್ವಾ?' ಎಂದು ಕೇಳಿದ್ದಾನೆ. ''ಕರೆಕ್ಟ್ ಆಗಿ ರಾಷ್ಟ್ರಗೀತೆ ಹಾಡಿ ಸರ್. ನಿಮ್ಮನ್ನು ಬಹಳಷ್ಟು ಜನ ಫಾಲೋ ಮಾಡ್ತಾರೆ. ನೀವು ಟಾಪ್ ಆಗಿರಬಹುದು. ಆದರೆ 48-52 ಸೆಕೆಂಡ್‌ ಅವಧಿಯಲ್ಲಿ ರಾಷ್ಟ್ರಗೀತೆ ಹಾಡಬೇಕು ಎನ್ನುವ ಕಾಮನ್ ಸೆನ್ಸ್ ಕೂಡ ಇಲ್ವಾ?'' ಎಂದು ಪ್ರಶ್ನಿಸಿದ್ದಾನೆ.

    ಸುದೀಪ್ ಪ್ರತಿಕ್ರಿಯೆ

    ಸುದೀಪ್ ಪ್ರತಿಕ್ರಿಯೆ

    ಆ ನೆಟ್ಟಿಗ ಟೀಕೆಗೆ ಸುದೀಪ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ''ಒರಟಾಗಿದೆ, (ಕಾಮೆಂಟ್) ಆದರೂ ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದಾಗಿ ನನಗೆ ಅನಿಸಿದ್ದನ್ನು ಮಾಡಿದ್ದೇನೆ. ಜೈ ಹಿಂದ್'' ಎಂದು ಹೇಳಿದ್ದಾರೆ.

    ಟೋಕಿಯೋ ಒಲಂಪಿಕ್: ಬೆಳ್ಳಿ ಪದಕ ಗೆದ್ದ ಮೀರಾಭಾಯ್‌ಗೆ ಸುದೀಪ್ ಅಭಿನಂದನೆಟೋಕಿಯೋ ಒಲಂಪಿಕ್: ಬೆಳ್ಳಿ ಪದಕ ಗೆದ್ದ ಮೀರಾಭಾಯ್‌ಗೆ ಸುದೀಪ್ ಅಭಿನಂದನೆ

    ನೆಟ್ಟಿಗರು ವಾದ-ಪ್ರತಿವಾದ

    ನೆಟ್ಟಿಗರು ವಾದ-ಪ್ರತಿವಾದ

    ಸುದೀಪ್ ಅವರು ರಾಷ್ಟ್ರಗೀತೆ ವಿಚಾರದಲ್ಲಿ ಹೆಚ್ಚು ಸಮಯ ತೆಗದುಕೊಂಡರು ಎಂದು ಹಲವು ಟೀಕಿಸಿದ್ದಾರೆ. ಅದರಲ್ಲಿ ಒಬ್ಬರ ಕಾಮೆಂಟ್‌ಗೆ ಸುದೀಪ್ ಪ್ರತಿಕ್ರಿಯಿಸಿದರು. ಬಹಳಷ್ಟು ಜನ ಕಾಮೆಂಟ್ ಮಾಡಿದ್ದರೂ, ನೀವು ಒಬ್ಬರನ್ನು ಗುರಿಯಾಗಿಸಿ ಪ್ರತಿಕ್ರಿಯೆ ಕೊಡಬಾರದಿತ್ತು ಎಂದು ಹೇಳುತ್ತಿದ್ದಾರೆ. ಇನ್ನು ಸುದೀಪ್ ಅವರು ದೇಶ ಪ್ರೇಮ ವ್ಯಕ್ತಪಡಿಸಿರುವುದನ್ನು ಸ್ವಾಗತಿಸಬೇಕೇ ಹೊರತು ಟೀಕೆ ಮಾಡಬಾರದು ಎಂದು ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದವರ ವಿರುದ್ಧ ತಿರುಗಿಬಿದ್ದಿದ್ದಾರೆ.

    ವಿಕ್ರಾಂತ್ ರೋಣ-ಕೋಟಿಗೊಬ್ಬ 3

    ವಿಕ್ರಾಂತ್ ರೋಣ-ಕೋಟಿಗೊಬ್ಬ 3

    ಕಿಚ್ಚ ಸುದೀಪ್ ಅಭಿನಯದ ಎರಡು ಚಿತ್ರಗಳು ತೆರೆಗೆ ಬರಲು ಸಜ್ಜಾಗಿದೆ. ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಹಾಗೂ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ. ಕೋಟಿಗೊಬ್ಬ 3 ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಮುಗಿಸಿ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅವಕಾಶಕ್ಕಾಗಿ ಕಾಯುತ್ತಿದೆ. ಇತ್ತೀಚಿಗಷ್ಟೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕಿ ಹೋಗಿದ್ದರು. ಜೊತೆಗೆ ವಿಶೇಷ ಪಾತ್ರ ಸಹ ಮಾಡಿದ್ದಾರೆ. ಈ ಕಡೆ ಕೋಟಿಗೊಬ್ಬ 2 ಚಿತ್ರದ ಮುಂದುವರಿದ ಭಾಗ ಎನ್ನುವಂತೆ ಕೋಟಿಗೊಬ್ಬ 3 ರೆಡಿಯಾಗಿದ್ದು, ಬಹಳ ಕುತೂಹಲ ಹುಟ್ಟುಹಾಕಿದೆ.

    English summary
    Fan ask Kichcha Sudeep to Sing National Anthem Properly; says don't know have common sense.
    Monday, August 16, 2021, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X