For Quick Alerts
  ALLOW NOTIFICATIONS  
  For Daily Alerts

  ನೀವು ವರ್ಜಿನ್ ಹಾ? ನೆಟ್ಟಿಗನ ಪ್ರಶ್ನೆಗೆ 'ಮಾಸ್ಟರ್ ಪೀಸ್' ಸುಂದರಿಯ ಬೋಲ್ಡ್ ಉತ್ತರ

  |

  ಸಾಮಾಜಿಕ ಜಾಲತಾಣಗಳಲ್ಲಿ ನಟಿಮಣಿಯರಿಗೆ ತರಹೇವಾರಿ ಪ್ರಶ್ನೆಗಳು ಹರಿದು ಬರುತ್ತವೆ. ಕೆಲವೊಮ್ಮೆ ನೆಟ್ಟಿಗರು ತೀರ ಕೆಳಮಟ್ಟದ ಪ್ರಶ್ನೆಗಳನ್ನು ಕೇಳಿ ನಟಿಯರನ್ನು ಮುಜುಗರಕ್ಕೆ ಈಡು ಮಾಡುತ್ತಾರೆ. ಇದೀಗ ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಸ್ತವ ಅವರಿಗೂ ಇಂಥದೆ ಪ್ರಶ್ನೆ ಎದುರಾಗಿದೆ.

  ಅಭಿಮಾನಿ ಕೇಳಿದ ವರ್ಜಿನ್ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತೆ ಕೊಟ್ಟ ಶಾನ್ವಿ | Shanvi Srivastava

  ಮಾಸ್ಟರ್ ಪೀಸ್ ಸುಂದರಿ ಶಾನ್ವಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಇತ್ತೀಚಿಗೆ ಶಾನ್ವಿ ಅಭಿಮಾನಿಗಳಿಗೆ ಏನಾದರು ಪ್ರಶ್ನೆಗಳಿದ್ದರೆ ಕೇಳಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಶಾನ್ವಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಪ್ರಶ್ನೆಗಳು ಹರಿದುಬರುತ್ತಿದೆ. ತೀರ ವೈಯಕ್ತಿಕ ಪ್ರಶ್ನೆಗಳು ಸಹ ಹರಿದುಬರುತ್ತಿವೆ. ಮುಂದೆ ಓದಿ..

  'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು

  ಶಾನ್ವಿಗೆ ಅಭಿಮಾನಿಗಳ ಪ್ರಶ್ನೆ

  ಶಾನ್ವಿಗೆ ಅಭಿಮಾನಿಗಳ ಪ್ರಶ್ನೆ

  ಶಾನ್ವಿ ಹೇಳುತಿದ್ದಂತೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೆ ಹರಿಸುತ್ತಿದ್ದಾರೆ. ನಿಮಗೆ ಇಷ್ಟದ ಸ್ಥಳ ಯಾವುದು, ಕನ್ನಡ ಹೇಗೆ ಕಲಿತಿರಿ, ಸುಂದರ ಫೋಟೋವನ್ನು ಶೇರ್ ಮಾಡಿ, ಉದ್ದ ಕೂದಲಿನ ಫೋಟೋ ಶೇರ್ ಮಾಡಿ ಹೀಗೆ ಅನೇಕ ಪ್ರಶ್ನೆಗಳು ಹರಿದುಬಂದಿದೆ.

  ನೀವು ವರ್ಜಿನ್ ಎಂದ ನೆಟ್ಟಗನಿಗೆ ಶಾನ್ವಿ ಉತ್ತರ

  ನೀವು ವರ್ಜಿನ್ ಎಂದ ನೆಟ್ಟಗನಿಗೆ ಶಾನ್ವಿ ಉತ್ತರ

  ಜೊತೆಗೆ ತೀರ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನೆಟ್ಟಿಗನೊಬ್ಬ ಶಾನ್ವಿಗೆ, ನೀವು ವರ್ಜಿನ್ ಹಾ? ಎಂದು ಪ್ರಶ್ನೆ ಮಾಡಿದ್ದಾರೆ. ನೆಟ್ಟಿಗನ ಪ್ರಶ್ನೆಗೆ ಶಾನ್ವಿ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ. ಈ ಪ್ರಶ್ನೆಯನ್ನು ನಿರ್ಲಕ್ಷ್ಯ ಮಾಡದೆ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಶೇರ್ ಮಾಡಿ, ಚಪ್ಪಾಳೆ ತಟ್ಟಿ, ಎಂಥಾ ಪ್ರಶ್ನೆಗಳನ್ನು ಕೇಳುತ್ತೀರಿ ಎನ್ನುವ ಅರ್ಥದಲ್ಲಿ ಸನ್ನೆ ಮಾಡಿದ್ದಾರೆ.

  ಶಾನ್ವಿ ಕನ್ನಡ ಕಲಿತಿದ್ದು ಹೇಗೆ?

  ಶಾನ್ವಿ ಕನ್ನಡ ಕಲಿತಿದ್ದು ಹೇಗೆ?

  ಉತ್ತರ ಭಾರತ ಮೂಲದ ನಟಿ ಶಾನ್ವಿ ಈಗ ಕನ್ನಡದ ನಟಿಯಾಗಿದ್ದಾರೆ. ಅಷ್ಟೆಯಲ್ಲ ಕನ್ನಡವನ್ನು ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ. ಆ ಬಗ್ಗೆ ಹೇಳಿರುವ ಶಾನ್ವಿ 'ನನ್ನ ಸ್ಟ್ಯಾಪ್ ಜೊತೆ, ಜನರ ಜೊತೆ ಮಾತನಾಡುತ್ತೇನೆ, ಪ್ರತಿಯೊಬ್ಬರ ಜೊತೆ ಕನ್ನಡದಲ್ಲೇ ಮಾತನಾಡುತ್ತೇನೆ, ಸೆಟ್ ನಲ್ಲೂ ಕನ್ನಡದಲ್ಲೇ ಮಾತನಾಡುತ್ತೀನಿ. ತುಂಬ ತಪ್ಪುಗಳನ್ನು ಮಾಡುತ್ತೇನೆ ಆದರೂ ಕನ್ನಡದಲ್ಲೇ ಮಾತನಾಡುತ್ತೇನೆ' ಎಂದು ಶಾನ್ವಿ ಕನ್ನಡ ಕಲಿತ ಬಗ್ಗೆ ಹೇಳಿದ್ದಾರೆ.

  'ಮಾಸ್ಟರ್ ಪೀಸ್' ಸುಂದರಿ ಶಾನ್ವಿಗೆ ಸಾಥ್ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್'ಮಾಸ್ಟರ್ ಪೀಸ್' ಸುಂದರಿ ಶಾನ್ವಿಗೆ ಸಾಥ್ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  ಬ್ಯಾಂಗ್ ಸಿನಿಮಾದಲ್ಲಿ ನಟನೆ

  ಬ್ಯಾಂಗ್ ಸಿನಿಮಾದಲ್ಲಿ ನಟನೆ

  ಶಾನ್ವಿ ಸದ್ಯ ಕನ್ನಡ ಬ್ಯಾಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಾನ್ವಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಚಿತ್ರದಲ್ಲಿ ಖ್ಯಾತ ಗಾಯಕ ರಘು ದೀಕ್ಷಿತ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶಾನ್ವಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಮಲಯಾಳಂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶಾನ್ವಿ

  ಮಲಯಾಳಂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶಾನ್ವಿ

  ಕನ್ನಡದ ಜೊತೆಗೆ ಶಾನ್ವಿ ಮಲಯಾಳಂ ಸಿನಿಮಾರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಕನ್ನಡ, ತೆಲುಗು ಸಿನಿಮಾರಂಗದಲ್ಲಿ ಮಿಂಚಿರುವ ಶಾನ್ವಿ ಮೊದಲ ಬಾರಿಗೆ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಶಾನ್ವಿ ಬಹಿರಂಗ ಪಡಿಸಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ.

  English summary
  Fan Asked Weird Question to Shanvi Srivastava on Instagram, are you a virgin?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X