ರಶ್ಮಿಕಾ ಮಂದಣ್ಣ ಅಭಿಮಾನಿಯೊಬ್ಬ ಮಾಡಿದ್ದಾನೆ ಹುಚ್ಚು ಸಾಹಸ

ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟ-ನಟಿಯರೇ ದೇವರುಗಳು. ಸಿನಿಮಾ ತಾರೆಯರ ಮೇಲೆ ಅತಿರೇಕದ ಅಭಿಮಾನ ಬಾಲಿವುಡ್‌ಗೆ ಹೋಲಿಸಿದರೆ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಹೆಚ್ಚು. ಅದರಲ್ಲಿಯೂ ಆಂಧ್ರ, ತೆಲಂಗಾಣದಲ್ಲಿಯಂತೂ ಇನ್ನೂ ಹೆಚ್ಚು.

ಸ್ಟಾರ್ ನಟರಿಗೆ ಮಾತ್ರವೇ ಅಲ್ಲ ನಟಿಯರಿಗೂ ದೊಡ್ಡ ವರ್ಗದ ಅಭಿಮಾನಿಗಳು ದಕ್ಷಿಣ ಭಾರತದಲ್ಲಿ ಇದ್ದಾರೆ. ಕನ್ನಡದಿಂದ ತೆಲುಗಿಗೆ ಹಾರಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಸಹ ಕಡಿಮೆ ಅವಧಿಯಲ್ಲಿಯೇ ತೆಲುಗಿನಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣರ ಅಭಿಮಾನಿಯೊಬ್ಬ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕಿ ಪೊಲೀಸರಿಂದ ತಪರಾಕಿ ಹಾಕಿಸಿಕೊಂಡಿದ್ದಾನೆ.

ಆಕಾಶ್ ತ್ರಿಪಾಠಿ ಹೆಸರಿನ ರಶ್ಮಿಕಾ ಮಂದಣ್ಣರ ಅಭಿಮಾನಿಯೊಬ್ಬ ತಮ್ಮ ಅಭಿಮಾನದ ನಟಿಯನ್ನು ನೋಡಲು ತೆಲಂಗಾಣದಿಂದ ಕೊಡಗಿಗೆ ಬಂದಿದ್ದಾನೆ.

ರಶ್ಮಿಕಾರನ್ನು ನೋಡಲು ವಿರಾಜಪೇಟೆಗೆ ಬಂದ

ರಶ್ಮಿಕಾರನ್ನು ನೋಡಲು ವಿರಾಜಪೇಟೆಗೆ ಬಂದ

ರಶ್ಮಿಕಾ ಕೊಡಗಿನ ವಿರಾಜಪೇಟೆಯಲ್ಲಿರುತ್ತಾರೆ ಎಂದು ತಿಳಿದ ಆಕಾಶ್ ತ್ರಿಪಾಠಿ ಹೈದರಾಬಾದ್‌ನಿಂದ ಮೈಸೂರಿಗೆ ರೈಲಿನಲ್ಲಿ ಬಂದು. ಅಲ್ಲಿಂದ ಗೂಡ್ಸ್ ಆಟೋದಲ್ಲಿ ಕೊಡಗಿನ ವಿರಾಜಪೇಟೆಗೆ ಬಂದಿದ್ದಾನೆ. ಇಲ್ಲಿ ರಶ್ಮಿಕಾರ ಮನೆ ಹುಡುಕಿಕೊಂಡು ದಿನವೆಲ್ಲ ಅಲೆದಿದ್ದಾನೆ.

ರಶ್ಮಿಕಾರ ಮನೆ ಹುಡುಕುತ್ತಿದ್ದ ಆಕಾಶ್

ರಶ್ಮಿಕಾರ ಮನೆ ಹುಡುಕುತ್ತಿದ್ದ ಆಕಾಶ್

''ರಶ್ಮಿಕಾರ ಮನೆ ಎಲ್ಲಿ'' ಎಂದು ಹಲವರ ಬಳಿ ಕೇಳಿದ್ದಾನೆ. ಈತನ ವರ್ತನೆ ಕಂಡು ಆಶ್ಚರ್ಯಗೊಂಡ ಜನ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದಾಗ ಈ ವ್ಯಕ್ತಿ ತೆಲಂಗಾಣದಿಂದ ರಶ್ಮಿಕಾರನ್ನು ನೋಡಲು ಬಂದಿರುವುದು ಗೊತ್ತಾಗಿದೆ.

ಮುಂಬೈನಲ್ಲಿದ್ದಾರೆ ನಟಿ ರಶ್ಮಿಕಾ

ಮುಂಬೈನಲ್ಲಿದ್ದಾರೆ ನಟಿ ರಶ್ಮಿಕಾ

ಆತನಿಗೆ ಚೆನ್ನಾಗಿ ಬೈದು ಬುದ್ಧಿ ಹೇಳಿದ ವೀರಾಜಪೇಟೆ ಪೊಲೀಸರು ಆತನನ್ನು ಮರಳಿ ತೆಲಂಗಾಣಕ್ಕೆ ವಾಪಸ್ಸಾಗುವಂತೆ ತಿಳಿಸಿದ್ದಾರೆ. ಅಂತೆಯೇ ಆತ ತೆಲಂಗಾಣಕ್ಕೆ ಮರಳಿದ್ದಾನೆ. ರಶ್ಮಿಕಾ ಮಂದಣ್ಣ ಪ್ರಸ್ತುತ ತಮ್ಮ ಹಿಂದಿ ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

Recommended Video

Sanchari Vijay ಬಗ್ಗೆ ಅವರ ಸಹೋದರ ಹೇಳೋದೇನು | Filmibeat Kannada
ನೀರಿಗೆ ಹಾರಿದ್ದ ಅಭಿಮಾನಿ

ನೀರಿಗೆ ಹಾರಿದ್ದ ಅಭಿಮಾನಿ

ಕೆಲವು ದಿನಗಳ ಹಿಂದಷ್ಟೆ ತೆಲುಗಿನ ನಟ ನಾಗಚೈತನ್ಯರ ಅಭಿಮಾನಿಯೊಬ್ಬ ನಾಗಚೈತನ್ಯರನ್ನು ಹತ್ತಿರದಿಂದ ನೋಡಬೇಕೆಂದು ಸೇತುವೆ ಮೇಲಿಂದ ನೀರಿಗೆ ಧುಮುಕಿದ್ದ. ಒಮ್ಮೆಯಂತೂ ಪವನ್ ಕಲ್ಯಾಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳ ನಡುವೆ ಜಗಳವಾಡಿ ಒಬ್ಬನ ಕೊಲೆಯೇ ನಡೆದು ಹೋಯಿತು.

More from Filmibeat

English summary
A fan of Rashmika Mandanna came to Virajpet from Telangana to meet her. Police send him back.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X