ವಿಜಯ್ ದೇವರಕೊಂಡನನ್ನು ತಬ್ಬಿಕೊಂಡು ಕಣ್ಣೀರಾಕಿದ ಮಹಿಳಾ ಅಭಿಮಾನಿ

ದಕ್ಷಿಣ ಭಾರತದ ಬಹು ಬೇಡಿಕೆಯ ನಟ ವಿಜಯ್ ದೇವರಕೊಂಡ. ಡಿಯರ್ ಕಾಮ್ರೇಡ್ ಮೂಲಕ ಸಂಚಲನ ಸೃಷ್ಟಿಸಿರುವ ನಟ ವಿಜಯ್. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತ ತೆಲುಗು ಮಾತ್ರವಲ್ಲದೆ ಬೇರೆ ಬೇರೆಭಾಷೆಯಲ್ಲಿಯೂ ಖ್ಯಾತಿಗಳಿಸಿರುವ ವಿಜಯ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ತೆಲುಗು ಚಿತ್ರಪ್ರಿಯರ ಹಾಟ್ ಫೇವರಿಟ್ ಜೋಡಿಯಾಗಿದೆ. ಇತ್ತೀಚಿಗೆ ರಿಲೀಸ್ ಆದ ಡಿಯರ್ ಕಾಮ್ರೇಡ್ ಸಿನಿಮಾ ತೆಲುಗು ಮಾತ್ರವಲ್ಲದೆ ದಕ್ಷಿಣದ ನಾಲ್ಕು ಭಾಷೆಯಲ್ಲಿ ತೆರೆಗೆ ಬಂದಿದೆ. ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದ ವಿಜಯ್ ಗೆ ಅಭಿಮಾನಿಯೊಬ್ಬರಿಂದ ವಿಚಿತ್ರ ಅನುಭವವಾಗಿದೆ.

ಇತ್ತೀಚಿಗೆ ಸಿನಿಮಾ ಪ್ರಮೋಷನ್ ಮುಗಿಸಿ ಏರ್ ಪೋರ್ಟ್ ಗೆ ಹೋಗುತ್ತಿದ್ದ ವಿಜಯ್ ನನ್ನು ನೋಡುತ್ತಿದ್ದಂತೆ ಮಹಿಳಾ ಅಭಿಮಾನಿಯೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಗಳಗಳನೆ ಅತ್ತಿದ್ದಾರೆ. ಅಭಿಮಾನಿಯ ವಿಚಿತ್ರ ನಡವಳಿಕೆ ಕಂಡು ಒಮ್ಮೆ ಶಾಕ್ ಆದ ವಿಜಯ್ ಆಕೆಯನ್ನು ಸಮಾಧಾನ ಮಾಡಿದ್ದಾರೆ.

Fan Crying To Seeing His Favorite Star Vijay Devarakonda

ಮಹಿಳಾ ಅಭಿಮಾನಿಗೆ ವಿಜಯ್ ನನ್ನು ನೋಡಿದ ಖುಷಿಗೆ ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಅಭಿಮಾನಿಯ ಜೊತೆ ವಿಜಯ್ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದು ಬಂದಿದೆ.

ಅಂದ್ಹಾಗೆ ಸದ್ಯ ರಿಲೀಸ್ ಆಗಿರುವ ಡಿಯರ್ ಕಾಮ್ರೇಡ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಎಲ್ಲಾ ಭಾಷೆಯಲ್ಲಿ ಚಿತ್ರಕ್ಕೆ ಉತ್ತಮ ಪ್ರಿತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಚಿತ್ರ ಹಿಂದಿಗೂ ರಿಮೇಕ್ ಆಗುತ್ತಿದೆ. ವಿಜಯ್ ಸದ್ಯ ಹೀರೋ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಆನಂತರ ಇನ್ನು ಹೆಸರಿಡದ ಕ್ರಾಂತಿ ಮಾಧವಾನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

More from Filmibeat

English summary
Telugu actor Vijay Devarakonda Fan crying to seeing his Favorite star Vijay Devarakonda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X