Rachita Ram: ಅಭಿಮಾನಿ ಬೆನ್ನಿನ ಮೇಲೆ ಮೂಡಿದ ರಚ್ಚು ಮುಗುಳು ನಗು; ವಿಡಿಯೋ ವೈರಲ್

ಅಭಿಮಾನಿಗಳು ತಮ್ಮ ನೆಚ್ಚಿನ ನಟನಟಿಯರ ಮೇಲಿನ ಅಭಿಮಾನವನ್ನು ವಿಭಿನ್ನವಾಗಿ ತೋರ್ಪಡಿಸುತ್ತಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಂಡು ತಮಗೆ ಇಷ್ಟವಾದವರು ಶಾಶ್ವತವಾಗಿ ನಮ್ಮೊಟ್ಟಿಗೆ ಇರ್ತಾರೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಅಭಿಮಾನದ ಹೆಸರಿನಲ್ಲಿ ಈ ರೀತಿ ತಮಗೆ ನೋವು ಮಾಡಿಕೊಂಡು ಅಭಿಮಾನ ಪ್ರದರ್ಶಿಸುವುದು ಸರಿಯಲ್ಲ. ಇದೇ ಮಾತನ್ನು ಸಾಕಷ್ಟು ಜನ ಹೇಳುತ್ತಿರುತ್ತಾರೆ. ಸೆಲೆಬ್ರೆಟಿಗಳು ಕೂಡ ಈ ಬಗ್ಗೆ ಅಭಿಮಾನಿಗಳಿಗೆ ತಿಳಿ ಹೇಳಬೇಕು ಎನ್ನುವ ಚರ್ಚೆ ನಡೀತಿರುತ್ತದೆ. ಆದರೂ ಅಭಿಮಾನಿಗಳು ಮಾತ್ರ ಕೇಳುವುದಿಲ್ಲ. ಇದೀಗ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿಮಾನಿಯೊಬ್ಬರು ನೆಚ್ಚಿನ ನಟಿಯ ಭಾವಚಿತ್ರವನ್ನು ತಮ್ಮ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ವಿಡಿಯೋ ವೈರಲ್ ಆಗ್ತಿದೆ.

Fan gets actress Rachita Rams face and name tattooed on his back, see pics

ರಚಿತಾ ರಾಮ್ ನಗುತ್ತಿರುವ ಫೋಟೊವನ್ನು ಅಭಿಮಾನಿಯೊಬ್ಬರು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. "ನಮ್ಮನೆ ದೇವರು ರಚಿತಾ ರಾಮ್" ಎಂದು ಬರೆಸಿಕೊಂಡಿದ್ದಾರೆ. ಆ ವಿಡಿಯೋ ರಚ್ಚು ಅಭಿಮಾನಿಗಳ ಮನಗೆದ್ದಿದೆ. ಕನ್ನಡದಲ್ಲಿ ದರ್ಶನ್, ಸುದೀಪ್, ಯಶ್, ಶಿವಣ್ಣ, ಪುನೀತ್ ಅಭಿಮಾನಿಗಳು ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವ ಫೋಟೊ, ವಿಡಿಯೋಗಳು ಈ ಹಿಂದೆ ವೈರಲ್ ಆಗಿತ್ತು. ಆದರೆ ನಟಿಯೊಬ್ಬರ ಫೋಟೊ ಟ್ಯಾಟೂವನ್ನು ಅಭಿಮಾನಿ ಹಾಕಿಸಿಕೊಂಡಿರುವುದು ಇದೇ ಮೊದಲು ಎನ್ನುವ ಮಾತುಗಳು ಕೇಳಿಬರುತ್ತಿರುತ್ತದೆ.

ಕೆಲ ತಿಂಗಳ ಹಿಂದೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಎದೆ ಮೇಲೆ 'ನನ್ನ ಪ್ರೀತಿಯ ಸೆಲೆಬ್ರೆಟೀಸ್' ಎಂದು ಟ್ಯಾಟೂ ಹಾಕಿಸಿಕೊಂಡಿದ್ದು ಭಾರೀ ಸುದ್ದಿ ಆಗಿತ್ತು. ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಳ್ಳುವುದನ್ನು ನೋಡಿದ್ದವರಿಗೆ ಸ್ಟಾರ್ ನಟನೇ ತಮ್ಮ ಅಭಿಮಾನಿಗಳಿಗೆ ಎದೆಯಲ್ಲಿ ಜಾಗ ಕೊಟ್ಟಿದ್ದು ವಿಶೇಷವಾಗಿತ್ತು.

ರಚಿತಾ ರಾಮ್ ಸಿನಿಮಾಗಳ ವಿಚಾರಕ್ಕೆ ಬಂದರೆ ಈ ವರ್ಷ 2 ಸಿನಿಮಾಗಳು ರಿಲೀಸ್ ಆಗಿದೆ. ದರ್ಶನ್ ಜೋಡಿಯಾಗಿ 'ಕ್ರಾಂತಿ' ಚಿತ್ರದಲ್ಲಿ ನಟಿಸಿದ್ದರು. ಪ್ರಜ್ವಲ್ ದೇವರಾಜ್ ಜೊತೆ 'ವೀರಂ' ಚಿತ್ರದಲ್ಲೂ ಮಿಂಚಿದ್ದರು. ಶೀಘ್ರದಲ್ಲೇ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೂಲಕ ಪ್ರೇಕ್ಷಕರು ಮುಂದೆ ಬರಲಿದ್ದಾರೆ. ಕಳೆದ ವಾರವಷ್ಟೆ ಡಿಂಪಲ್ ಕ್ವೀನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ನೀನಾಸಂ ಸತೀಶ್ ಜೋಡಿಯಾಗಿ 'ಮ್ಯಾಟ್ನಿ' ಸಿನಿಮಾದಲ್ಲಿ ರಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. 'ಶಬರಿ ಸರ್ಚಿಂಗ್ ಫಾರ್ ರಾವಣ' ಸಿನಿಮಾ ಬಹಳ ಹಿಂದೆಯೇ ಸೆಟ್ಟೇರಿತ್ತು. ಆದರೆ ಆ ಸಿನಿಮಾ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ. 'ಲವ್‌ ಮಿ ಆರ್ ಹೇಟ್ ಮಿ' ಎನ್ನುವ ಮತ್ತೊಂದು ಸಿನಿಮಾ ಕೂಡ ರಚಿತಾ ರಾಮ್ ಕೈಯಲ್ಲಿದೆ.

ರಚ್ಚು ಸಿನಿಮಾಗಳಲ್ಲಿ ಬಹಳ ಕುತೂಹಲ ಮೂಡಿಸಿರುವುದು 'ಸಂಜು ವೆಡ್ಸ್ ಗೀತಾ'. ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೋಡಿಯಾಗಿ ಡಿಂಪಲ್ ಕ್ವೀನ್ ನಟಿಸುತ್ತಿದ್ದಾರೆ. ಕಿಟ್ಟಿ- ರಮ್ಯಾ ನಟನೆಯ 'ಸಂಜು ಮತ್ತು ಗೀತಾ' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಅದೇ ಗುಂಗಿನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಹಾಗಾಗಿ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಕೆಲ ದಿನಗಳ ಹಿಂದೆಯಷ್ಟೆ 'ಸಂಜು ವೆಡ್ಸ್ ಗೀತಾ' ಸಿನಿಮಾ ಫೋಟೊಶೂಟ್ ವೀಡಿಯೋ ವೈರಲ್ ಆಗಿತ್ತು. ಇನ್ನುಳಿದಂತೆ ಕೆಲ ಸಿನಿಮಾಗಳ ಚರ್ಚೆ ನಡೀತಿದೆ. ಇತ್ತೀಚಿನ ದಿನಗಳಲ್ಲಿ ರಚಿತಾಗೆ ಒಳ್ಳೆ ಬ್ರೇಕ್ ಸಿಕ್ಕಿಲ್ಲ. ಶೀಘ್ರದಲ್ಲೇ ಭರ್ಜರಿ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Rachita Ram's fan get a tattoo of her face and name
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X