»   » ಚಂದನವನದ ರಾಧೆಯ ಹುಟ್ಟುಹಬ್ಬಕ್ಕೆ ಸಿಕ್ತು ವಿಶೇಷ ಉಡುಗೊರೆ

ಚಂದನವನದ ರಾಧೆಯ ಹುಟ್ಟುಹಬ್ಬಕ್ಕೆ ಸಿಕ್ತು ವಿಶೇಷ ಉಡುಗೊರೆ

Posted By:
Subscribe to Filmibeat Kannada

ಅಭಿಮಾನಿಗಳು ತಮ್ಮ ಹುಟ್ಟುಹಬ್ಬವನ್ನ ಮಾಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾವು ಇಷ್ಟ ಪಡುವ ಕಲಾವಿದರ ಬರ್ತಡೇ ಮಾತ್ರ ವಿಶೇಷವಾಗಿ ಇರಬೇಕು ಎನ್ನುವ ಆಸೆಯನ್ನ ಹೊಂದಿರುತ್ತಾರೆ. ಹೇಗಾದರೂ ಮಾಡಿ ನಮ್ಮಿಂದ ಅವರು ಖುಷಿ ಪಡಬೇಕು ಹಾಗೆ ಮಾಡಬೇಕು ಎನ್ನುವ ಆಸೆಯನ್ನ ಇಟ್ಟುಕೊಂಡಿರುತ್ತಾರೆ.

ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಇಂದು(ಮಾರ್ಚ್ 7) ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆಯ ಬಳಿ ಬಂದು ಜಮಾಯಿಸಿದ್ದಾರೆ. ಪ್ರತಿ ವರ್ಷದಂತೆ ತವರು ಮನೆಯಲ್ಲೇ ರಾಧಿಕಾ ಬರ್ತಡೇ ಆಚರಣೆ ಮಾಡಿಕೊಂಡಿದ್ದಾರೆ.

ತವರು ಮನೆಯಲ್ಲಿ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್

ಪ್ರತಿ ವರ್ಷಕಿಂತಲೂ ಈ ವರ್ಷ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಿತ್ತು. ಅಭಿಮಾನಿಯಿಂದ ವಿಶೇಷ ಉಡುಗೊರೆ ಕೂಡ ಸಿಕ್ಕಿದೆ. ಹಾಗಾದರೆ ಉಡುಗೊರೆ ಏನು? ಈ ಬರ್ತಡೇ ಅಷ್ಟೊಂದು ಸ್ಪೆಷಲ್ ಯಾಕೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ವಿಶೇಷವಾದ ಹಟ್ಟುಹಬ್ಬ

ರಾಧಿಕಾ ಪಂಡಿತ್ ತಮ್ಮ ಮದುವೆ ಆದ ನಂತರ ಆಚರಣೆ ಮಾಡಿಕೊಳ್ಳುತ್ತಿರುವ ಎರಡನೇ ಹುಟ್ಟುಹಬ್ಬವಿದು. ಪ್ರತಿಬಾರಿ ಬೆಳಿಗ್ಗೆ ಅಭಿಮಾನಿಗಳ ಜೊತೆ ರಾಧಿಕಾ ಬರ್ತಡೇ ಸೆಲಬ್ರೆಟ್ ಮಾಡುತ್ತಿದ್ದರು. ಆದರೆ ಈ ವರ್ಷ ಮಧ್ಯ ರಾತ್ರಿಯಿಂದಲೇ ಹುಟ್ಟುಹಬ್ಬ ಆಚರಣೆ ಶುರುವಾಗಿದೆ.

ವಿಶೇಷ ಉಡುಗೊರೆ ಪಡೆದ ರಾಧಿಕಾ ಪಂಡಿತ್

ಈ ವರ್ಷದ ಹುಟ್ಟುಹಬ್ಬಕ್ಕೆ ರಾಧಿಕಾ ಅವರಿಗೆ ಅಭಿಮಾನಿಯಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಕಲಾವಿದ ಜೋಸೆಫ್ ಅವರಿಂದ ಸ್ಯಾಂಡ್ ಆರ್ಟ್ ಮೂಲಕ ರಾಧಿಕಾ ಮತ್ತು ಯಶ್ ಅವರ ಭಾವಚಿತ್ರವನ್ನ ಅವರ ಮುಂದೆಯೇ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ.

ನೋವಿನಲ್ಲಿರುವ ಜಾಹ್ನವಿಗೆ ಸಂತಸ ತಂದ ಕಪೂರ್ ಸಹೋದರಿಯರು

ಮಿಸೆಸ್ಸ್ ಜೊತೆ ಮಿಸ್ಟರ್ ರಾಮಾಚಾರಿ

ಯಶ್ ಹುಟ್ಟುಹಬ್ಬದಲ್ಲಿ ರಾಧಿಕಾ, ರಾಧಿಕಾ ಹುಟ್ಟುಹಬ್ಬದಲ್ಲಿ ಯಶ್ ಇಬ್ಬರು ಉಪಸ್ತಿತ ಇರುವುದು ಹಿಂದಿನ ವರ್ಷದಿಂದಲೂ ನಡೆದುಕೊಂಡು ಬರುತ್ತಿದೆ. ಅದರಂತೆಯೇ ಈ ಬಾರಿಯೂ ರಾಧೆಯ ಹುಟ್ಟುಹಬ್ಬದಲ್ಲಿ ಮಿಸ್ಟರ್ ರಾಮಾಚಾರಿ ಕೂಡ ಇದ್ದರು.

ಈ ವರ್ಷ ಬರಲಿದೆ ಹೊಸ ಚಿತ್ರ

ಮದುವೆ ನಂತರ ರಾಧಿಕಾ ಅಭಿನಯಿಸುತ್ತಿರುವ ಹೊಸ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ.

ಕಿರುತೆರೆಯ 'ಗಾಂಧಾರಿ' ಕಾವ್ಯ ಗೌಡ ಈಗ ಲಾಯರ್ ಆದ್ರು

English summary
Kannada actress Radhika Pandit today(mar-7) celebrated her birthday. A birthday special fan has given a special gift to her, Yash was also involved in Radhika's birthday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada