ದುರ್ಯೋಧನ ದರ್ಶನ್ ಗೆ ಅಭಿಮಾನಿಯಿಂದ ಸಿಕ್ಕ ಆ ಭರ್ಜರಿ ಗಿಫ್ಟ್ ಏನು?

By Pavithra

Recommended Video

ದರ್ಶನ್ ಗೆ ಸಿಕ್ತು ವಿಭಿನ್ನ ಮದುವೆ ಆಮಂತ್ರಣ | Filmibeat Kannada

ಕಲಾವಿದರನ್ನ ಸ್ಟಾರ್ ಗಳನ್ನಾಗಿ ಮಾಡುವ ಅಭಿಮಾನಿಗಳ ಆಲೋಚನೆಗಳನ್ನ ನಿಲುಕಲು ಸಾಧ್ಯವೇ ಇಲ್ಲ. ಒಬ್ಬೊಬ್ಬ ಅಭಿಮಾನಿಯೂ ಒಂದೊಂದು ರೀತಿಯಲ್ಲಿ ಯೋಚನೆ ಮಾಡುತ್ತಾರೆ. ತನ್ನ ನೆಚ್ಚಿನ ನಟನನ್ನ ಸೆಳೆಯೋದಕ್ಕಾಗಿ ಹೊಸ ರೀತಿಯ ಐಡಿಯಾಗಳನ್ನ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದು ಫ್ಯಾನ್ಸ್ ಗಳ ಮಧ್ಯೆಯೂ ಸಾಕಷ್ಟು ಕಾಂಪಿಟೇಷನ್ ಹುಟ್ಟುಕೊಂಡಿದೆ. ಅದಕ್ಕಾಗಿ ಪ್ರತಿಯೊಬ್ಬರು ವಿಭಿನ್ನವಾಗಿ ಆಲೋಚನೆ ಮಾಡುವ ಅವಶ್ಯಕತೆ ಬಂದಿದೆ.

ಸದ್ಯ ವಿಭಿನ್ನತೆ ಬಗ್ಗೆ ಮಾತನಾಡುತ್ತಿರುವ ಮೂಲ ಉದ್ದೇಶ ಅಂದರೆ ದರ್ಶನ್ ಅಭಿಮಾನಿ. ದರ್ಶನ್ ಅವರ ಅಭಿಮಾನಿ ಭಿನ್ನವಾದ ಉಡುಗೊರೆಯನ್ನು ದರ್ಶನ್ ಅವರಿಗೆ ನೀಡಿ ಮದುವೆಗೆ ಆಹ್ವಾನ ಮಾಡಿದ್ದಾರೆ. ಸದ್ಯ ಅಭಿಮಾನಿಗಳ ಬಳಗದಲ್ಲಿ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.

ಹಾಗಾದರೆ ಈ ಅಭಿಮಾನಿ ಯಾರು? ದರ್ಶನ್ ಅವರಿಗೆ ನೀಡಿರುವ ವಿಭಿನ್ನ ಉಡುಗೊರೆ ಏನು? ಯಾಕಾಗಿ ಈ ರೀತಿಯ ಉಡುಗೊರೆ ನೀಡಿದರು? ಆ ಉಡುಗೊರೆ ರೆಡಿ ಮಾಡಿಸಲು ಎಷ್ಟು ದಿನಗಳು ಬೇಕಾಯ್ತು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಡಿ ಬಾಸ್ ಗೆ ಅಪರೂಪ ಉಡುಗೊರೆ

ಡಿ ಬಾಸ್ ಗೆ ಅಪರೂಪ ಉಡುಗೊರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ತನ್ನ ನೆಚ್ಚಿನ ನಟನಿಗೆ ವಿಭಿನ್ನವಾಗಿರುವ ಉಡುಗೊರೆಯನ್ನ ನೀಡಿದ್ದಾರೆ. ತನ್ನ ಮದುವೆಗೆ ಆಹ್ವಾನ ಮಾಡಲು ದರ್ಶನ್ ಭೇಟಿ ಮಾಡಿರುವ ಅಭಿಮಾನಿ ವಿಶೇಷ ಉಡುಗೊರೆಯನ್ನ ಜೊತೆಯಲ್ಲೇ ತಂದಿದ್ದಾರೆ.

ದುರ್ಯೋಧನನ ಚಿತ್ತಾರ ನೀಡಿ ಆಹ್ವಾನ

ದುರ್ಯೋಧನನ ಚಿತ್ತಾರ ನೀಡಿ ಆಹ್ವಾನ

ಸದ್ಯ ದರ್ಶನ್ ಅಂದರೆ ಅಭಿಮಾನಿಗಳೆಲ್ಲರು 'ಕುರುಕ್ಷೇತ್ರ' ಸಿನಿಮಾ ಯಾವಾಗ ಬಿಡುಗಡೆ ಎನ್ನುತ್ತಾರೆ. ಇದೇ ರೀತಿ ಆಲೋಚನೆ ಮಾಡಿರುವ ಅಭಿಮಾನಿ ಕಿರಣ್ ದರ್ಶನ್ ದುರ್ಯೋಧನನ ಲುಕ್ ನಲ್ಲಿರುವ ಫೋಟೋವನ್ನು ಪೇಯಿಂಟ್ ಮಾಡಿಸಿ ತಂದು ಕೊಟ್ಟಿದ್ದಾರೆ.

ಹತ್ತು ದಿನದಲ್ಲಿ ಅರಳಿತು ದರ್ಶನ್ ಹೊಸ ಕಲಾಕೃತಿ

ಹತ್ತು ದಿನದಲ್ಲಿ ಅರಳಿತು ದರ್ಶನ್ ಹೊಸ ಕಲಾಕೃತಿ

ಕಿರಣ್ ಎನ್ನುವ ದರ್ಶನ್ ಅವರ ಅಭಿಮಾನಿ 'ಡಿ ಬಾಸ್' ಅವರನ್ನ ತನ್ನ ಮದುವೆಗೆ ಆಹ್ವಾನ ಮಾಡಬೇಕೆಂದು ನಿರ್ಧಾರ ಮಾಡಿದ್ದರು. ದರ್ಶನ್ ಭೇಟಿ ಮಾಡುವಾಗ ಬರಿ ಕೈನಲ್ಲಿ ಹೇಗೆ ಹೋಗುವುದು ಎನ್ನುವುದನ್ನ ಯೋಚನೆ ಮಾಡಿ ನಂತರ ಧುರ್ಯೋಧನನ ಲುಕ್ ನಲ್ಲಿರುವ ದರ್ಶನ್ ಅವರ ಫೋಟೋವನ್ನು ಪೇಯಿಂಟ್ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ.

ದರ್ಶನ್ ಮೆಚ್ಚಿದ ಫೋಟೋ

ದರ್ಶನ್ ಮೆಚ್ಚಿದ ಫೋಟೋ

ಸಾಮಾನ್ಯವಾಗಿ ಸ್ಟಾರ್ ಗಳು ಅಭಿಮಾನಿಗಳಿಂದ ಯಾವುದೇ ಉಡುಗೊರೆಯನ್ನು ನಿರೀಕ್ಷೆ ಮಾಡುವುದಿಲ್ಲ. ತಮ್ಮ ಸಿನಿಮಾ ನೋಡಿ ರಂಜಿಸಿದರೆ ಸಾಕು ಎನ್ನುವುದು ಅವರ ಆಸೆ ಆಗಿರುತ್ತದೆ. ಇಂಥದೊಂದು ಅಪರೂಪದ ಉಡುಗೊರೆ ದರ್ಶನ್ ಕೈ ತಲುಪಿದಾಗ ಅದನ್ನ ನೋಡಿ ಚಾಲೆಂಜಿಂಗ್ ಸ್ಟಾರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

More from Filmibeat

English summary
Kiran a fan of Kannada actor Darshan has invited his wedding with a rare gift to Darshan. Kiran has given painting portrait to Darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X